'ಸೀತಾರಾಮ' ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅಕಾಯ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅನುಕೂಲ್ ಅವರು ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ ನಡೆದಿದೆ. ಈ ಸಮಾರಂಭದಲ್ಲಿ ಕಿರುತೆರೆಯ ಅನೇಕ ಗಣ್ಯರು ಭಾಗವಹಿಸಿದ್ದರು. ವೈಷ್ಣವಿ ಅವರ ತಾಯಿ, ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡುವುದಾಗಿ ತಿಳಿಸಿದ್ದಾರೆ. ಶೀಘ್ರದಲ್ಲೇ ವೈಷ್ಣವಿ ಮತ್ತು ಅಕಾಯ್ ವಿವಾಹ ನಡೆಯಲಿದೆ.
Seetha Rama Serial Actress Vaishnavi Gowda Engagement News: 'ಮದುವೆ ಎನ್ನೋದು ಪವಿತ್ರ ಸಂಬಂಧ. ನನಗೆ ಮದುವೆ ಆಗಬೇಕು ಅಂತ ತುಂಬ ಆಸೆ ಇದೆ' ಎಂದು ‘ಸೀತಾರಾಮ’ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಸಾಕಷ್ಟು ಬಾರಿ ಹೇಳಿದ್ದರು. ಇನ್ನು ʼಬಿಗ್ ಬಾಸ್ʼ ಶೋ ನಂತರದಲ್ಲಿ ಅವರಿಗೆ ಸಾಕಷ್ಟು ಆಫರ್‌ಗಳು ಬಂದಿದ್ದರೂ ಕೂಡ ಅವರು ಯಾವುದನ್ನು ಒಪ್ಪಿಕೊಂಡಿರಲಿಲ್ಲ. ಈಗ ಅವರು ಎಂಗೇಜ್‌ಮೆಂಟ್ ಮಾಡಿಕೊಂಡು, ಶೀಘ್ರದಲ್ಲಿಯೇ ಮದುವೆ ಆಗೋದಾಗಿ ಹೇಳಿಕೊಂಡಿದ್ದಾರೆ.
ಅಂದೇ ಸುಳಿವು ಕೊಟ್ಟಿದ್ದ ವೈಷ್ಣವಿ!
ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಎನ್ನುವವರ ಜೊತೆ ಎಂಗೇಜ್ ಆಗಿದ್ದಾರೆ. ಅನುಕೂಲ್ ಅವರು ಬೇರೆ ರಾಜ್ಯದವರು ಎನ್ನಲಾಗಿದೆ. ಏರ್‌ಫೋರ್ಸ್‌ನಲ್ಲಿ ಅನುಕೂಲ್ ಕೆಲಸ ಮಾಡುತ್ತಿದ್ದಾರೆ. ಅನುಕೂಲ್ ಅವರಿಂದಲೇ ವೈಷ್ಣವಿ ಈ ಬಾರಿ ಬೆಂಗಳೂರಿನಲ್ಲಿ ನಡೆದಿದ್ದ ಏರ್‌ಶೋ ವೀಕ್ಷಣೆ ಮಾಡಿದ್ದರು. ಇದನ್ನೇ ಅವರು ಪರೋಕ್ಷವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 'ಥ್ಯಾಂಕ್ಯು ಎ. ನಿಮ್ಮಿಂದಲೇ ಏರ್‌ಶೋ ನೋಡೋದು ಸಾಧ್ಯ ಆಯ್ತು, ಇದೊಂದು ಅದ್ಭುತ ಅನುಭವ' ಎಂದು ಹೇಳಿದ್ದರು.
ರಜತ್‌ಗೆ ಬುದ್ಧಿ ಇಲ್ಲ ಕೋಪ ಜಾಸ್ತಿ ನನ್ನ ಮಾತು ಕೇಳಲ್ಲ: ವಿನಯ್ ಗೌಡ
ವೈಷ್ಣವಿ ನಿಶ್ಚಿತಾರ್ಥದಲ್ಲಿ ʼಸೀತಾರಾಮʼ ನಟಿ!
ಕುಟುಂಬದ ಸಮೇತ ಇಂದು ವೈಷ್ಣವಿ ಗೌಡ, ಅನುಕೂಲ್ ಮಿಶ್ರಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ವೈಷ್ಣವಿ ಗೌಡ ಅವರು ಸಾಂಪ್ರದಾಯಿಕವಾಗಿ ಎಂಗೇಜ್ ಆಗಿದ್ದು, ಸಂಜೆ ಬರ್ತ್‌ಡೇ ಪಾರ್ಟಿ ಇತ್ತು ಎನ್ನಲಾಗಿದೆ. ಈ ಪಾರ್ಟಿಯಲ್ಲಿ ವೈಷ್ಣವಿ ಗೌಡ ಅವರು ಕ್ರೀಮ್ ಕಲರ್ ಗೌನ್‌ನಲ್ಲಿ ಮಿಂಚಿದ್ದರೆ, ಅನುಕೂಲ್ ಅವರು ಬ್ಲ್ಯಾಕ್ ಸೂಟ್‌ನಲ್ಲಿ ಕಂಗೊಳಿಸಿದ್ದಾರೆ. ಅಂದಹಾಗೆ ʼಸೀತಾರಾಮʼ ಧಾರಾವಾಹಿ ನಟಿ ಪೂಜಾ ಲೋಕೇಶ್, ಜ್ಯೋತಿ ಕಿರಣ್, ರೀತು ಸಿಂಗ್, ನಟಿ ಅಮೂಲ್ಯಾ ಗೌಡ, ಜಗದೀಶ್ ಆರ್ ಚಂದ್ರ ಮುಂತಾದವರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಡ್ರೀಮಿ ಥರದಲ್ಲಿ ಈ ನಿಶ್ಚಿತಾರ್ಥ ನಡೆದಿದೆ.
ಮಗುವಿನ ನಾಮಕರಣದ ವಿಡಿಯೋ ಶೇರ್ ಮಾಡಿದ ಸೀತಾರಾಮ ಸೀತಾ: ಫ್ಯಾನ್ಸ್ ಫುಲ್ ಶಾಕ್!
ʼಸೀತಾರಾಮʼ ತಂಡದಲ್ಲಿ ಇನ್ನೊಂದು ಮದುವೆ!
ಮನೆಯವರೇ ಹುಡುಕಿ ಈ ಮದುವೆ ಮಾಡ್ತಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ʼಸೀತಾರಾಮʼ ಧಾರಾವಾಹಿ ನಟಿ ಮೇಘನಾ ಶಂಕರಪ್ಪ ಅವರು ಎಂಗೇಜ್ ಆಗಿದ್ದರು. ಈಗ ವೈಷ್ಣವಿ ಗೌಡ ಅವರು ಮದುವೆ ಆಗುತ್ತಿದ್ದಾರೆ. ಕೆಲವೇ ತಿಂಗಳಲ್ಲಿ ವೈಷ್ಣವಿ ಗೌಡ- ಅನುಕೂಲ್ ಮದುವೆ ನಡೆಯಲಿದೆ. ಇನ್ನು ನಿಶ್ಚಿತಾರ್ಥದ ವಿಷಯವನ್ನು ವೈಷ್ಣವಿ ಅವರು ಗುಟ್ಟಾಗಿ ಇಟ್ಟಿದ್ದರು. ಚೈತ್ರಾ ವಾಸುದೇವನ್ ಅವರು ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಹೊಸ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಒಟ್ಟಿನಲ್ಲಿ ಸಾಕಷ್ಟು ಕಿರುತೆರೆ ಗಣ್ಯರು ಈ ಎಂಗೇಜ್‌ಮೆಂಟ್‌ನಲ್ಲಿ ಭಾಗಿಯಾಗಿದ್ದಾರೆ.
ನಾವು ಮಾಡೋದು ಕನ್ನಡ ಸಿನಿಮಾ ಮಾತ್ರ, ಬೇರೆ ಭಾಷೆಯಲ್ಲ ಪ್ಯಾನ್ ಇಂಡಿಯಾ ಅಂತೂ ಅಲ್ವೇ ಅಲ್ಲ: ನಟ ದರ್ಶನ್
ಅದ್ದೂರಿಯಾಗಿ ಮಗಳ ಮದುವೆ ಮಾಡ್ತಾರೆ!
'ಕೊರೊನಾ ಟೈಮ್‌ನಲ್ಲೂ ಕೂಡ, ಅದ್ದೂರಿಯಾಗಿ ನಾನು ನನ್ನ ಮಗ ಸುನೀಲ್ ಮದುವೆ ಮಾಡಿದ್ದೆ. ವೈಷ್ಣವಿ ಗೌಡ ಮದುವೆ ಕೂಡ ಜೋರಾಗಿ ಮಾಡ್ತೀನಿ' ಎಂದು ವೈಷ್ಣವಿ ಗೌಡ ತಾಯಿ ಅವರು ಈ ಹಿಂದೆಯೇ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು. ಈ ಮಾತಿನ ಪ್ರಕಾರ ಹೇಳೋದಾದರೆ ವೈಷ್ಣವಿ ಗೌಡ ಅವರು ಅದ್ದೂರಿಯಾಗಿ ಮದುವೆ ಆಗಬಹುದು.
ಇತ್ತೀಚೆಗೆ ವೈಷ್ಣವಿ ಗೌಡ ಅಣ್ಣನ ಮಗನಿಗೆ ನಾಮಕರಣ ಮಾಡಿದ್ದಾರೆ. ಹೀಗಾಗಿ ಈ ಕುಟುಂಬದಲ್ಲಿ ಒಂದಾದ ಮೇಲೆ ಒಂದು ಸಂಭ್ರಮ ಮನೆ ಮಾಡಿದೆ. ಮಗಳ ಮದುವೆ ಮಾಡಬೇಕು ಅಂತ ವೈಷ್ಣವಿ ತಂದೆ-ತಾಯಿ ಕನಸು ಕಾಣುತ್ತಿದ್ದರು. ಅದೀಗ ನೆರವೇರುತ್ತಿದೆ. ಅಂದಹಾಗೆ ವರ್ಷಗಳ ಹಿಂದೆಯೇ ವೈಷ್ಣವಿ ಗೌಡ ಹಾಗೂ ಅನುಕೂಲ್ ಮದುವೆ ಫಿಕ್ಸ್ ಆಗಿದೆ ಎನ್ನುವ ಮಾಹಿತಿ ಇದ್ದು, ಈಗ ಈ ಜೋಡಿ ಎಂಗೇಜ್ ಆಗಿದೆ. ಆಧ್ಯಾತ್ಮದ ಬಗ್ಗೆ ಆಸಕ್ತಿ ಹೊಂದಿರುವ ವೈಷ್ಣವಿ ಗೌಡ ಅವರು, 'ಆಗಿದ್ದೆಲ್ಲ ಒಳ್ಳೆಯದಕ್ಕೆ' ಎಂದು ನಂಬುತ್ತಾರೆ. ಅಂತೆಯೇ ಮದುವೆಗೋಸ್ಕರ ಕಾದಿದ್ದರು.
