ಮುಸ್ಲಿಂ ಮದುವೆ ಕುರಿತು ರಾಯರೆಡ್ಡಿ ವಿವಾದಾತ್ಮಕ ಹೇಳಿಕೆ, ತುರ್ತು ಸುದ್ದಿಗೋಷ್ಠಿ!
ಮುಸ್ಲಿಂ ಮದುವೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ, ತಮ್ಮ ಹೇಳಿಕೆಯಿಂದ ಉಂಟಾದ ವಿವಾದದ ಬೆನ್ನಲ್ಲೇ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಹೇಳಿಕೆಗೆ ರಾಯರೆಡ್ಡಿ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ.

ಕೊಪ್ಪಳ (ಏ.15): ಮುಸ್ಲಿಂ ಮದುವೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ, ತಮ್ಮ ಹೇಳಿಕೆಯಿಂದ ಉಂಟಾದ ವಿವಾದದ ಬೆನ್ನಲ್ಲೇ ತುರ್ತು ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ.
ನಿನ್ನೆ ಕೊಪ್ಪಳದಲ್ಲಿ ಮಾತನಾಡಿದ ರಾಯರೆಡ್ಡಿ, 'ಮುಸ್ಲಿಂ ಮದುವೆ ಒಂದು ಕಾಂಟ್ರ್ಯಾಕ್ಟ್ ಆಗಿದ್ದು, ನಮ್ಮಂತೆ ಏಳು ಜನ್ಮದ ಅನುಬಂಧವಲ್ಲ' ಎಂದು ಹೇಳಿದ್ದರು. ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ರಾಯರೆಡ್ಡಿ ಹೇಳಿಕೆಯಿಂದ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ವಿವಾದ ಇನ್ನಷ್ಟು ತೀವ್ರತೆ ಪಡೆಯುವ ಮುನ್ನವೇ ರಾಯರೆಡ್ಡಿ ಅಲರ್ಟ್ ಆಗಿದ್ದಾರೆ.
ಇದನ್ನೂ ಓದಿ: ಮುಸ್ಲಿಂರಿಗೆ ಏಕೆ ಮೀಸಲಾತಿ ಕೊಡಬಾರದು? ಪ್ರಧಾನಿ ಮೋದಿಗೆ ಸಿಎಂ ಪ್ರಶ್ನೆ!
ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗುತ್ತಿದ್ದಂತೆ, ಅಲರ್ಟ್ ಆಗಿರುವ ಬಸವರಾಜ್ ರಾಯರೆಡ್ಡಿ ಇಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ. ಯಲಬುರ್ಗಾ ಕ್ಷೇತ್ರದ ಶಾಸಕರಾದ ರಾಯರೆಡ್ಡಿ ಈ ವಿಚಾರದಲ್ಲಿ ತಮ್ಮ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ. ಹೀಗಾಗಿ ರಾಯರೆಡ್ಡಿಯ ಸುದ್ದಿಗೋಷ್ಠಿಯ ಕಡೆ ಎಲ್ಲರ ಗಮನ ನೆಟ್ಟಿದೆ. ಮುಂದಿನ ವಿವರಗಳಿಗಾಗಿ ಕಾಯಿರಿ..