ಹಿಂದೂಗಳ ಜಾತಿ ಲೆಕ್ಕ ಹಾಕಿ ಒಡೆಯುವ ಕೆಲಸ ಮಾಡಿತಾ ಕಾಂಗ್ರೆಸ್ ಸರ್ಕಾರದ ಸಮೀಕ್ಷೆ?
ಜಾತಿ, ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಸಾಮಾಜಿಕ ಸಮೀಕ್ಷೆ ಎಂದು ಕಾಂಗ್ರೆಸ್ ಸರ್ಕಾರ ಹೊರ ತಂದಿದ ಜಾತಿ ಗಣತಿ ವರದಿ ಇದೀಗ ಭಾರಿ ವಿರೋಧ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರ ಹಿಂದೂಗಳಲ್ಲಿ ಉಪ ಜಾತಿಗಳನ್ನು ಲೆಕ್ಕ ಹಾಕಿ ಒಡೆಯುವ ಕೆಲಸ ಮಾಡುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಇದೇ ವೇಳೆ ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ಒಂದೇ ಜಾತಿ ಎಂದು ಗುರುತಿಸಿ ಗಣತಿ ಮಾಡಿರುವುದೇ ಈ ಆರೋಪಕ್ಕೆ ಕಾರಣವಾಗಿದೆ.