ಪ್ರಧಾನಿ ಮೋದಿ ಗಂಡ್ಸು, ಕಾಂಗ್ರೆಸ್‌ನವರಂತೆ ಹೆಂಗಸರಲ್ಲ: ಸಂಸದ ಜಿಗಜಿಣಗಿ ಕಿಡಿ
ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸದಿರುವ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಡ ಮುಸ್ಲಿಮರ ಆಸ್ತಿಯನ್ನು ಕಾಂಗ್ರೆಸ್ ನಾಯಕರು ಲಪಟಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೋದಿ ಗಂಡಸು ಇದ್ದಾರೆ, ಕಾಯ್ದೆ ಜಾರಿಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯಪುರ (ಏ.15): ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ರಾಜ್ಯದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸದಿರುವ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಪ್ರಧಾನಿ ಮೋದಿ ಗಂಡಸು ಇದ್ದಾರೆ, ಕಾಂಗ್ರೆಸ್‌ನವರಂತೆ ಹೆಂಗಸರಲ್ಲ. *** ಮೇಲೆ ಒದ್ದು ಕಾಯ್ದೆ ಜಾರಿಗೊಳಿಸುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದು ಬಡ ಮುಸ್ಲಿಮರ ಅಭಿವೃದ್ಧಿಗಾಗಿಯೇ ಎಂದ ಜಿಗಜಿಣಗಿ, 'ವಕ್ಫ್ ಆಸ್ತಿ ಲೂಟಿ ಮಾಡಿದವರಿಗೆ, ವಿಶೇಷವಾಗಿ ಕಾಂಗ್ರೆಸ್ ನಾಯಕರಿಗೆ ಇದರಿಂದ ತೊಂದರೆಯಾಗಿದೆ. ಕಾಂಗ್ರೆಸ್ ಇಷ್ಟು ವರ್ಷ ಅಧಿಕಾರದಲ್ಲಿದ್ದರೂ ಇಂತಹ ಕಾಯ್ದೆ ಜಾರಿಗೆ ತರಲಿಲ್ಲ. ಯಾಕೆಂದರೆ, ಅವರಲ್ಲಿ ಅನೇಕರು ಬಡ ಮುಸ್ಲಿಮರ ಆಸ್ತಿಯನ್ನೇ ಲಪಟಾಯಿಸಿದ್ದಾರೆ' ಎಂದು ಆರೋಪಿಸಿದರು.
ಇದನ್ನೂ ಓದಿ: ವಕ್ಫ್ ಕಾಯ್ದೆ ವಿರುದ್ಧ ಹೋರಾಟ ಮುಂದುವರಿಯುತ್ತೆ; ಎಂಎಲ್ಸಿ ಸಲೀಂ ಅಹ್ಮದ್
ಪ್ರಧಾನಿ ಮೋದಿ ಬಡ ಮುಸ್ಲಿಮರ ಪರವಾಗಿ ವಕ್ಫ್ ಕಾಯ್ದೆ ತಿದ್ದುಪಡಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಉತ್ತಮ ಕೆಲಸ ಮಾಡಿದೆ. ಆದರೆ ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳು ವೋಟ್ ಬ್ಯಾಂಕ್‌ಗಾಗಿ ವಿರೋಧಿಸುತ್ತಿವೆ. ಅವರಿಗೆ ಮುಸ್ಲಿಮರ ಮೇಲೆ ನಿಜವಾದ ಕಾಳಜಿಯಿಲ್ಲ ಎಂದು ಕಿಡಿಕಾರಿದರು. 'ಕಾಂಗ್ರೆಸ್‌ನಲ್ಲಿ ಇಂತಹ ಕಾಯ್ದೆ ಜಾರಿಗೆ ತರುವ ಗಂಡಸು ಹುಟ್ಟಿಲ್ಲ. ಮೋದಿಯವರು ತಮ್ಮ ಶಕ್ತಿ ಏನೆಂದು ತೋರಿಸಿದ್ದಾರೆ. ದೇಶದಲ್ಲಿ ವಕ್ಫ್ ಕಾಯ್ದೆ ಜಾರಿ ಆಗಿಯೇ ಆಗುತ್ತದೆ ಎಂದರು.