ಪ್ರವಾಹಕ್ಕೆ ಊರಿಗೆ ಊರೇ ಮುಳುಗಿದ್ರೂ ಅದೊಂದು ಒಂಟಿ ಮನೆಯ ಸಮೀಪವೂ ಸುಳಿಯದ ನೀರು
ಅಮೆರಿಕದ ಟೆನ್ನೆಸ್ಸೀಯ ಪ್ರವಾಹದಲ್ಲಿ ಇಡೀ ಊರು ಮುಳುಗಿದರೂ ಒಂದು ಮನೆ ಮಾತ್ರ ಸುರಕ್ಷಿತವಾಗಿದೆ. ಅದು ಹೇಗೆ ಸಾಧ್ಯ ಎಂಬುದು ಈಗ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ.

ಅಮೆರಿಕದ ಟೆನ್ನೆಸ್ಸೀ ಕಳೆದ ಕೆಲವು ದಿನಗಳಿಂದ ಪ್ರಕೃತಿ ವಿಕೋಪಕ್ಕೆ ಸಾಕ್ಷಿಯಾಗುತ್ತಿದೆ. ಇದರ ಪರಿಣಾಮವಾಗಿ ಹಲವಾರು ದಾಖಲೆಯ ಬಿರುಗಾಳಿಗಳು, ಮಳೆ ಪದೇ ಪದೇ ರಾಜ್ಯವನ್ನು ಅಪ್ಪಳಿಸಿದ ನಂತರ ಪ್ರವಾಹದ ನೀರು ಗ್ರಾಮಾಂತರ ಪ್ರದೇಶವನ್ನು ಆವರಿಸಿದೆ. ಪ್ರಕೃತಿಯ ಕೋಪದ ಮುಂದೆ ಮನುಷ್ಯ ತೃಣಕ್ಕೆ ಸಮಾನ, ಅದರ ಶಕ್ತಿಯನ್ನು ಮನುಷ್ಯ ತಡೆದುಕೊಳ್ಳುವುದು ಕಷ್ಟ ಎಂದು ನೀವು ಹೇಳುವುದನ್ನು ಕೇಳಿರಬಹುದು. ಆದರೆ ಇಲ್ಲಿ ಮಾತ್ರ ಇಡೀ ಊರೇ ಮುಳುಗಿದರೂ ಒಂದು ಮನೆ ಮತ್ತು ಅದರ ಸುತ್ತಲಿನ ಬೌಂಡರಿಯೊಳಗೆ ಸಣ್ಣ ಹನಿ ನೀರು ಕೂಡ ಒಳಗೆ ಸೇರಿಲ್ಲ. ಈ ಪ್ರದೇಶವೂ ಸಂಪೂರ್ಣ ಒಣಗಿದ್ದು, ನೀರಿನಿಂದ ದೂರವೇ ಉಳಿದಿದೆ. ಮಳೆ ನೀರಿನಿಂದ ಕೆಂಪಾದ ಸಾಗರದ ನಡುವಿನ ದ್ವೀಪದಂತೆ ಇದು ಗೋಚರಿಸುತ್ತಿದೆ. ಇದರ ವೈಮಾನಿಕ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಇದರ ಹಿಂದಿರುವ ತಂತ್ರಜ್ಞಾನದ ಬಗ್ಗೆ ಪ್ರಶ್ನೆ ಮಾಡುತ್ತಿದ್ದರೆ ಮತ್ತೆ ಕೆಲವರು ಇಷ್ಟು ಬುದ್ಧಿವಂತಿಕೆಯಿಂದ ಮನೆ ಕಟ್ಟಿದ ವ್ಯಕ್ತಿಯ ಚಾಣಾಕ್ಷತನಕ್ಕೆ ಶಭಾಷ್ ಎನ್ನುತ್ತಿದ್ದಾರೆ.
ಅಂದಹಾಗೆ ಈ ದೃಶ್ಯ ಕಂಡು ಬಂದಿದ್ದು, ಅಮೆರಿಕಾದ ಟೆನ್ನೆಸ್ಸೀಯ ರಿಡ್ಜ್ಲಿಯ ಬೊಗೊಟಾ ಎಂಬಲ್ಲಿ.. ಇಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಪರಿಸ್ಥಿತಿ ಹೇಗಿತೆಂದರೆ 100ಕ್ಕು ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದು ರಕ್ಷಿಸಬೇಕಾದ ಅಗತ್ಯವಿತ್ತು. ಆದರೆ ಅಂತಹ ಸ್ಥಿತಿಯ ಮಧ್ಯೆಯೂ ಇದೊಂದು ಒಂಟಿ ಮನೆ ಪ್ರವಾಹಕ್ಕೆ ಎದುರಾಗಿ ನಿಂತ ಅಣೆಕಟ್ಟಿನಂತೆ ಒಂದು ಹನಿ ನೀರನ್ನು ಕೂಡ ಒಳಗೆ ಸೇರಿಸಿಕೊಳ್ಳದೇ ಸಧೃಡವಾಗಿ ನಿಂತಿದೆ. ಇದರ ವೈಮಾನಿಕ ದೃಶ್ಯಾವಳಿ ಅನೇಕರನ್ನು ಅಚ್ಚರಿಗೊಳಿಸಿದ್ದಲ್ಲದೇ ಅನೇಕರು ಈ ಅದ್ಬುತ ತಂತ್ರಜ್ಞಾನ ಏನಿರಬಹುದು ಎಂದು ತೀವ್ರ ಕುತೂಹಲದಿಂದ ಕಾಮೆಂಟ್‌ಗಳಲ್ಲಿ ಪ್ರಶ್ನಿಸಲು ಶುರು ಮಾಡಿದರು.
ವಿದ್ಯುತ್ ಬೆಳಕಿನಲ್ಲಿ ಭಾರತ ಹೇಗೆ ಕಾಣಿಸುತ್ತಿದೆ? 4 ದೇಶದ ಫೋಟೋ ಕಳುಹಿಸಿದ ಬಾಹ್ಯಾಕಾಶ ಕೇಂದ್ರ
ಡೈಲಿ ಮೇಲ್ ಈ ಅದ್ಭುತ ಹಾಗೂ ನಂಬಲಾಗದ ದೃಶ್ಯಾವಳಿಯ ವೀಡಿಯೋವನ್ನು ತನ್ನ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಹೀಗೆ ಬರೆದುಕೊಂಡಿದ್ದಾರೆ. 'ಕಳೆದ ವಾರ ಟೆನ್ನೆಸ್ಸೀ ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾಯಿತು, ಆದರೆ ಟಿಎನ್‌ನ ರಿಡ್ಜ್ಲಿಯಲ್ಲಿ ಒಬ್ಬ ಸ್ಮಾರ್ಟ್ ಮನೆ ಮಾಲೀಕರು ತಮ್ಮ ಮನೆಯನ್ನು ವ್ಯಾಪಕ ವಿಪತ್ತಿನಿಂದ ಭಾಧಿಸದಂತೆ ತಡೆದು ಯಾವುದೇ ಪ್ರಾಕೃತಿಕ ವೈರುಧ್ಯಕ್ಕೆ ತಮ್ಮನ್ನು ಮೊದಲೇ ಸಿದ್ಧಪಡಿಸಿಕೊಂಡಿದ್ದರು' ಎಂದು ವಿವರಿಸಿದೆ.
ಈ ವೀಡಿಯೋ ನೋಡಿದ ಅನೇಕರು ಬಹಳ ಅಚ್ಚರಿಯಿಂದ ಕಾಮೆಂಟ್ ಮಾಡಿದ್ದಾರೆ. ನಮಗೆಲ್ಲರಿಗೂ ಇದು ಹೇಗೆ ಎಂದು ಗೊತ್ತಾಗಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದರೆ ಇನ್ನೊಬ್ಬರು ಈ ಮನೆ ಮಾಲೀಕ ತುಂಬಾ ಸ್ಮಾರ್ಟ್ ಎಂದು ಕಾಮೆಂಟ್ ಮಾಡಿದ್ದಾರೆ. ಬಹುಶಃ ಇವರು ತಮ್ಮ ಆಸ್ತಿಯನ್ನು ರಕ್ಷಿಸಲು ದೊಡ್ಡದಾದ ಮರಳಿನ ಚೀಲವನ್ನು ಬಳಸಿರಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಸ್ಕ್ವೇರ್ ವೇವ್ ಎಂದು ಕರೆಯಲ್ಪಡುವ ಈ ವಿದ್ಯಮಾನಕ್ಕೆ ಕಾರಣ ಏನು?
ಹಾಗಿದ್ರೆ ಈ ಮನೆ ಮಾಲೀಕ ಮನೆ ಕಟ್ಟುವಾಗ ಬಳಸಿದ ತಂತ್ರಜ್ಞಾನ ಯಾವುದು?
ಕಾಫರ್‌ಡ್ಯಾಂ ಪ್ರಾಜೆಕ್ಟ್: ಹೌದು ವೀಡಿಯೋ ನೋಡಿದ ಎಲ್ಲರ ಕುತೂಹಲವೂ ಇದೇ ಆಗಿದೆ. ಮನೆ ಮಾಲೀಕ ಯಾವ ತಂತ್ರಜ್ಞಾನ ಬಳಸಿದ ಎಂಬುದು. ಅಂದಹಾಗೆ ಈ ತಂತ್ರಜ್ಞಾನದ ಹೆಸರು ಕಾಫರ್‌ಡ್ಯಾಂ ಪ್ರಾಜೆಕ್ಟ್. ಇದನ್ನು ಸಾಮಾನ್ಯವಾಗಿ ಅಣೆಕಟ್ಟುಗಳ ನಿರ್ಮಾಣದ ವೇಳೆ, ನದಿಗೆ ಸೇತುವೆಗಳನ್ನು ನಿರ್ಮಿಸುವಾಗ, ನೀರಿನೊಳಗೆ ಅಡಿಪಾಯಗಳನ್ನು ನಿರ್ಮಿಸುವಾಗ, ನೀರಿನೊಳಗೆ ಫಿಲ್ಲರ್ ಮಾಡುವುದಕ್ಕೆ, ಹೀಗೆ ನೀರಿನಿಂದ ಆವೃತವಾದ ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯಗಳನ್ನು ಮಾಡುವ ವೇಳೆ ಈ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಹಾಗೂ ಈ ಕಾರ್ಯಗಳಿಗೆ ಈ ತಂತ್ರಜ್ಞಾನ ಅತ್ಯಗತ್ಯವಾಗಿದೆ. ನೀರಿನಿಂದ ಮುಳುಗಿರುವ ಪ್ರದೇಶದಲ್ಲಿ ನಿರ್ಮಾಣವು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಮುಂದುವರಿಯಲು ಅವಕಾಶ ನೀಡುವುದು ಈ ಕಾಫರ್ ಡ್ಯಾಂ ಪ್ರಾಜೆಕ್ಟ್‌ನ ಪ್ರಾಥಮಿಕ ಉದ್ದೇಶವಾಗಿದೆ. ಇದೇ ತಂತ್ರಜ್ಞಾನವನ್ನು ಬಳಸಿ ಮನೆ ಮಾಲೀಕ ಮನೆ ಕಟ್ಟಿದ ಪರಿಣಾಮ ಸುತ್ತಲೂ ಇಡೀ ಜಲಾವೃತವಾದರೂ ಒಂದು ಹನಿ ನೀರು ಕೂಡ ಈ ಮನೆಯ ಆವರಣ ದಾಟಿ ಬಂದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.