LIVE NOW

Karnataka News Live: ಶಾರುಖ್ ಖಾನ್ ₹300 ಕೋಟಿ ಮನೆ; ಒಂದು ದಿನಕ್ಕೆ 2 ಲಕ್ಷ ರೂ. ಬಾಡಿಗೆ!

Karnataka News Live 15 April 2025 Caste census survey underway again mrq

ಬೆಂಗಳೂರು: ಜಾತಿ ಗಣತಿ ವರದಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಏ.17ರಂದು ವಿಶೇಷಸಚಿವ ಸಂಪುಟ ಸಭೆ ನಿಗದಿಯಾಗಿರುವ ಬೆನ್ನಲ್ಲೇ ಗಣತಿಯಲ್ಲಿನ ಅಂಕಿ-ಅಂಶಗಳ ಬಗ್ಗೆ ವಿರೋಧ ಹೊಂದಿರುವ ಜಾತಿಗಳು ಚುರುಕಾಗಿವೆ. ವೀರಶೈವ ಲಿಂಗಾಯತ ಮಹಾಸಭೆ ಈ ವರದಿಯನ್ನು ವಿರೋಧಿಸುವ ಸಂಬಂಧ ನಿವೃತ್ತ ಜಡ್ಜ್‌ಗಳ ಸಮಿತಿ ರಚಿಸಲು ಮುಂದಾಗಿದೆ. ಒಕ್ಕಲಿಗರ ಮನದಿಂಗಿತ ಅರಿತು ಮುಂದೇನು ಮಾಡಬೇಕು ಎಂದು ಚರ್ಚಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಮಂಗಳವಾರ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಮತ್ತೊಂದೆಡೆ, ಒಕ್ಕಲಿಗರ ಸಂಘವೂ ಮಂಗಳವಾರ ಸಭೆ ಸೇರುತ್ತಿದೆ. ಹೊಸದಾಗಿ ಸಮೀಕ್ಷೆ ಮಾಡಬೇಕು ಎಂದು ಸರ್ಕಾರದ ಹಾಲಿ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಳರ್ ಬಹಿರಂಗವಾಗಿ ಆಗ್ರಹಿಸಿದ್ದಾರೆ. ಹೀಗಾಗಿ ಗಣತಿ ಭವಿಷ್ಯದ ಬಗ್ಗೆ ಭಾರಿ ಕುತೂಹಲ ಮೂಡಿದೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಿತ್ತು ಅದನ್ನು ಧರ್ಮಾಧಾರಿತವಾಗಿ ಹಂಚಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ

11:51 PM IST

ಶಾರುಖ್ ಖಾನ್ ₹300 ಕೋಟಿ ಮನೆ; ಒಂದು ದಿನಕ್ಕೆ 2 ಲಕ್ಷ ರೂ. ಬಾಡಿಗೆ!

ಬಾಲಿವುಡ್ ಬಾದ್‍ಶಾ, ಶಾರುಖ್ ಖಾನ್ ತಮ್ಮ 300 ಕೋಟಿ ಮೌಲ್ಯದ ಲಾಸ್ ಏಂಜಲೀಸ್ ಮನೆಯನ್ನು ದಿನಕ್ಕೆ 2 ಲಕ್ಷ ರೂಪಾಯಿಗಳಿಗೆ ಬಾಡಿಗೆಗೆ ನೀಡುತ್ತಿದ್ದಾರೆ. ಈ ಐಷಾರಾಮಿ ಮನೆಯ ವೈಶಿಷ್ಟ್ಯಗಳೇನು?

ಪೂರ್ತಿ ಓದಿ
11:16 PM IST

ಜೊಮೆಟೋ ಡೆಲಿವರಿ ಬಾಯ್ ಫುಡ್ ಡೆಲಿವರಿ ಕೊಡದೇ ಜೀವ ಬೆದರಿಕೆ ಹಾಕಿದ

ಬೆಂಗಳೂರಿನ 22 ವರ್ಷದ ಯುವತಿ ಜೊಮ್ಯಾಟೋ ಆ್ಯಪ್ ಮೂಲಕ ಆಹಾರವನ್ನು ಆರ್ಡರ್ ಮಾಡಿದಾಗ ವಿತರಣಾ ವ್ಯಕ್ತಿಯಿಂದ ಕಿರುಕುಳ ಅನುಭವಿಸಿದರು. ಈ ಬಗ್ಗೆ ದೂರು ನೀಡಿದ್ದು, ನನಗೆ ಜೀವ ಭಯ ಉಂಟಾಗಿದೆ ಎಂದು ಅಳಲು ತೊಡಿಕೊಂಡಿದ್ದಾರೆ.

ಪೂರ್ತಿ ಓದಿ
10:11 PM IST

ಕಾಸರಗೋಡು: ಮಹಿಳೆ ಮೇಲೆ ಥಿನ್ನರ್‌ ಎರಚಿ ಬೆಂಕಿ ಹಚ್ಚಿದ ಕುಡುಕ

ಕಾಸರಗೋಡಿನಲ್ಲಿ ಕುಡಿದ ಮತ್ತಿನಲ್ಲಿ ಅಂಗಡಿ ಮಾಲೀಕನೋರ್ವ ಪಕ್ಕದ ಅಂಗಡಿಯ ಮಹಿಳೆಯ ಮೇಲೆ ಥಿನ್ನರ್ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ದೂರು ನೀಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಪೂರ್ತಿ ಓದಿ
10:08 PM IST

ಕೇವಲ 10 ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ತಲುಪುತ್ತೆ ಏರ್ಟೆಲ್ ಸಿಮ್

ಕೇವಲ ಹತ್ತೇ ಹತ್ತೇ ನಿಮಿಷದಲ್ಲಿ ಸಿಮ್ ನಿಮ್ ಮನೆ ಬಾಗಿಲಿಗೆ ಡೆಲಿವರಿ ಆಗಲಿದೆ. ಏರ್ಟೆಲ್ ಸಿಮ್‌ಗಾಗಿ ಶಾಪ್, ರೇಟೇಲ್ ‌ಶಾಪ್ ಹೋಗಬೇಕಿಲ್ಲ. ಏನಿದು ಹೊಸ ಆಫರ್.

ಪೂರ್ತಿ ಓದಿ
9:47 PM IST

ಚಾಣಕ್ಯನೀತಿ: ತಾಯಿ ಗರ್ಭದಿಂದ ಮಹಿಳೆ ಪಡೆಯುವ 5 ಕೆಟ್ಟ ಹವ್ಯಾಸಗಳು

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಮಹಿಳೆಯರ ಸ್ವಭಾವದ ಬಗ್ಗೆ ಬಹಳಷ್ಟು ಬರೆದಿದ್ದಾರೆ. ಮಹಿಳೆಯರಲ್ಲಿ ಹುಟ್ಟಿನಿಂದಲೇ ಇರುವ 5 ಕೆಟ್ಟ ಹವ್ಯಾಸಗಳ ಬಗ್ಗೆಯೂ ಚಾಣಕ್ಯರು ಹೇಳಿದ್ದಾರೆ. ಅವರು ಬರೆದದ್ದನ್ನು ಎಲ್ಲರೂ ಸತ್ಯ ಎಂದು ಒಪ್ಪುತ್ತಾರೆ.

ಪೂರ್ತಿ ಓದಿ
9:31 PM IST

ಅಕ್ರಮ ಸಂಬಂಧ ಅಮಲು, ತನ್ನದೇ ಮಗಳ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿದ ತಾಯಿ

ಅಕ್ರಮ ಸಂಬಂಧದ ಅಮಲಿನಲ್ಲಿ  ಮಹಿಳೆ ಮಾಡಿದ ಕೆಲಸ ತಾಯಿ ಕುಲಕ್ಕೆ ಅಪಮಾನ ಮಾಡುವಂತ ಕೆಲಸ ಮಾಡಿದ್ದಾಳೆ. ತನ್ನದೇ ಮಗಳ ಸ್ನಾನದ ವಿಡಿಯೋ, ಡ್ರೆಸ್ ಚೇಂಜ್ ವಿಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟ ಘಟನೆ ನಡೆದಿದೆ. ಮಹಾ ತಾಯಿ ಯ ನಡೆ ಹಿಂದೆ ಒಂದು ಕಾರಣವಿದೆ.

ಪೂರ್ತಿ ಓದಿ
9:08 PM IST

ದೆಹಲಿ ಪಾರ್ಕ್‌ನಲ್ಲಿ ವೃದ್ಧ ದಂಪತಿಗಳ ನಿಷ್ಕಲ್ಮಶ ಪ್ರೀತಿ: ವೈರಲ್ ನೃತ್ಯ!

ವೃದ್ಧ ದಂಪತಿಗಳು ಪ್ರೀತಿಯ ನೃತ್ಯದ ಮೂಲಕ ಝಡ್ ಜನರೇಷನ್ ಗೆ ಮಾದರಿಯಾಗಿದ್ದಾರೆ. ದೆಹಲಿಯ ಉದ್ಯಾನವನದಲ್ಲಿ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಪೂರ್ತಿ ಓದಿ
8:31 PM IST

ಗ್ರಾಮಸ್ಥರೇ ನೀವು ಇರಬೇಕಾದರೆ ವಕ್ಫ್‌ಗೆ ಬಾಡಿಗೆ ಪಾವತಿಸಿ, ಕಾಂಗ್ರೆಸ್ ನಾಯಕನ ವಿವಾದ

ಒಮ್ಮೆ ವಕ್ಪ್ ಆದರೆ ಮತ್ತೆ ಯಾವತ್ತೂ ವಕ್ಫ್, ಗ್ರಾಮಸ್ಥರೇ ಜಾಗ ಖಾಲಿ ಮಾಡಿ ಇಲ್ಲಾ ವಕ್ಫ್‌ಗೆ ಬಾಡಿಗೆ ಕೊಡಿ ಎಂದು ಕಾಂಗ್ರೆಸ್  ನಾಯಕ ಹೇಳಿದ್ದಾರೆ. ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.

ಪೂರ್ತಿ ಓದಿ
8:12 PM IST

ವಿಶ್ವದ ಟಾಪ್-100 ವಿಮಾನ ನಿಲ್ದಾಣಗಳು:ಬೆಂಗಳೂರಿಗೆ ಬೆಸ್ಟ್ ರ‍್ಯಾಂಕ್

ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2025ರಲ್ಲಿ 4 ಭಾರತೀಯ ವಿಮಾನ ನಿಲ್ದಾಣಗಳು ಜಾಗತಿಕ ಟಾಪ್ 100 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 32ನೇ ಸ್ಥಾನದೊಂದಿಗೆ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.

ಪೂರ್ತಿ ಓದಿ
7:20 PM IST

ರಾಮ ಮಂದಿರಕ್ಕೆ ಬಾಂಬ್ ಬೆದರಿಕೆಯ ಮೂಲ ಪತ್ತೆ ಹಚ್ಚಿದ ಪೊಲೀಸ್,ದೇವಸ್ಥಾನ ಭದ್ರತೆ ಹೆಚ್ಚಳ

ಆಯೋಧ್ಯೆ ಶ್ರೀರಾಮ ಮಂದಿರದ ಮೇಲ ಪವಿತ್ರ ಕಳಶ ಪ್ರತಿಷ್ಠಾಪಿಸಿದ ಬೆನ್ನಲ್ಲೇ ಎದುರಾದ ಬಾಂಬ್ ಬೆದರಿಕೆಯಿಂದ ಭದ್ರತೆ ಹೆಚ್ಚಿಸಲಾಗಿದೆ. ಇದರ ನಡುವೆ ಬೆದರಿಕೆ ಹಾಕಿದ ಮೂಲ ಎಲ್ಲಿ ಅನ್ನೋದು ಸೈಬರ್ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪೂರ್ತಿ ಓದಿ
6:42 PM IST

ಟಾರಿಫ್ ಕುಸಿತ ಮೆಟ್ಟಿ ನಿಂತ ವಿಶ್ವದ ಮೊದಲ ಷೇರುಮಾರುಕಟ್ಟೆ ಹೆಗ್ಗಳಿಕೆ, ನಷ್ಟ ಸರಿದೂಗಿಸಿದ ಭಾರತ

ಟ್ರಂಪ್ ತೆರಿಗೆ ಸುನಾಮಿಯಲ್ಲಿ ವಿಶ್ವದ ಪ್ರಮುಖ ಷೇರುಮಾರುಕಟ್ಟೆಗಳು ಪಾತಾಳಕ್ಕೆ ಕುಸಿದಿತ್ತು. ಭಾರತ ಕೂಡ ಹೊರತಾಗಿರಲಿಲ್ಲ. ಆದರೆ ಈ ಕುಸಿತವನ್ನು ಅಷ್ಟೇ ವೇಗದಲ್ಲಿ ಮೆಟ್ಟಿನಿಂತು ಆದ ನಷ್ಟವನ್ನೂ ಸಂಪೂರ್ಣವಾಗಿ ಭಾರತ ಸರಿದೂಗಿಸಿದೆ. ಈ ಮೂಲಕ ನಷ್ಟ ಸರಿದೂಗಿಸಿದ ವಿಶ್ವದ ಏಕೈಕ ಷೇರುಮಾರುಕಟ್ಟೆ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. 

ಪೂರ್ತಿ ಓದಿ
6:30 PM IST

ಕಣ್ಮುಚ್ಚಿ ಕುಳಿತ ಬಿಬಿಎಂಪಿ; ಬಸ್‌ಸ್ಟಾಪ್‌ಗಳನ್ನೇ ಮುಚ್ಚಿಹಾಕಿದ 'ಬ್ಯಾನರ್‌' ಕೃಷ್ಣಪ್ಪ!

ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಜನ್ಮದಿನದ ಪ್ರಯುಕ್ತ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕಿ ಬಸ್‌ಸ್ಟಾಪ್‌ ಮುಚ್ಚಲಾಗಿದೆ. ಡಿ.ಕೆ. ಶಿವಕುಮಾರ್‌ ಸೂಚನೆಗಳನ್ನು ಬಿಬಿಎಂಪಿ ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಪೂರ್ತಿ ಓದಿ
6:28 PM IST

ಬಿಬಿಎಂಪಿ ಹವಾಮಾನ ಕ್ರಿಯಾಕೋಶ ಫೆಲೋಶಿಪ್‌ಗೆ ಅರ್ಜಿ ಆಹ್ವಾನ!

ಬೆಂಗಳೂರು ಹವಾಮಾನ ಕ್ರಿಯಾ ಕೋಶವು ಎರಡು ಫೆಲೋಶಿಪ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 30, 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ
6:13 PM IST

ಗರ್ಭಪಾತ ಹಕ್ಕು ಮಾನವ ಹಕ್ಕಾಗಬೇಕು- ನ್ಯಾಯಮೂರ್ತಿ ಅಶೋಕ್ ಹಿಂಚಿಗೇರಿ

ಸಂವಿಧಾನದ 21ನೇ ವಿಧಿಯನ್ವಯ ಮಹಿಳೆಗೆ ಮಗುವನ್ನು ಹೆರುವ ಅಥವಾ ಹೆರದಿರುವ ಹಕ್ಕಿದೆ ಎಂದು ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಹೇಳಿದ್ದಾರೆ. ಗರ್ಭಪಾತ ಕಾಯ್ದೆಯಲ್ಲಿ ಸುಧಾರಣೆಯ ಅವಶ್ಯಕತೆಯಿದ್ದು, ಗರ್ಭಿಣಿ ಮಹಿಳೆಯನ್ನು ಅಧಿಕಾರಶಾಹಿ ಪ್ರಕ್ರಿಯೆಗೆ ಒಳಪಡಿಸಬಾರದು ಎಂದು ಅವರು ತಿಳಿಸಿದರು.

ಪೂರ್ತಿ ಓದಿ
6:02 PM IST

ಅಭಿಮಾನಿಗಳಿಗೆ ವಿಡಿಯೋ ಮೂಲಕ ಮಹತ್ವದ ಮೆಸೇಜ್ ಕೊಟ್ಟ ರಶ್ಮಿಕಾ ಮಂದಣ್ಣ

ಸಿಕಂದರ್ ಬಳಿಕ ಸಣ್ಣ ಬ್ರೇಕ್ ಪಡೆದ ರಶ್ಮಿಕಾ ಮಂದಣ್ಣ ಇದೀಗ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ರಾತ್ರಿಯಿಡಿ ಶೂಟಿಂಗ್ ಮಾಡಿ ಬೆಳಗ್ಗೆ ನಿದ್ದೆ ಗಣ್ಣಿನಲ್ಲೇ ಮಹತ್ವದ ಸಂದೇಶ ಕೊಟ್ಟಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳಿಗೆ ವಿಡಿಯೋ ಮೂಲಕ ರಶ್ಮಿಕಾ ಮಂದಣ್ಣ ಹೇಳಿದ್ದೇನು?
 
ಪೂರ್ತಿ ಓದಿ
5:55 PM IST

Breaking: ನ್ಯಾಷನಲ್‌ ಹೆರಾಲ್ಡ್‌ ಕೇಸ್‌, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇಡಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. 661 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಡಿ ನೋಟಿಸ್ ಜಾರಿ ಮಾಡಿತ್ತು.

ಪೂರ್ತಿ ಓದಿ
5:35 PM IST

ಕೆಟ್ಟ ಶಕುನವೋ? ಅದೃಷ್ಟದ ಸೂಚನೆಯೋ? ಪೂರಿ ಜಗನ್ನಾಥ ದೇವಸ್ಥಾನದ ಮೇಲೆ ಧ್ವಜದ ರೀತಿಯ ಬಟ್ಟೆ ಹಿಡಿದು ಹಾರಿದ ಗರುಡ!

ಒಡಿಶಾದ ಪೂರಿ ಜಗನ್ನಾಥ ದೇವಸ್ಥಾನದ ಮೇಲೆ ಗರುಡ ಪಕ್ಷಿ ಧ್ವಜದಂತಹ ಬಟ್ಟೆಯನ್ನು ಹಿಡಿದು ಹಾರಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಆಧ್ಯಾತ್ಮಿಕ ಚರ್ಚೆಗೆ ಕಾರಣವಾಗಿದ್ದು, ಕೆಲವರು ಇದನ್ನು ದೈವಿಕ ಚಿಹ್ನೆ ಎಂದರೆ, ಇನ್ನು ಕೆಲವರು ಕೆಟ್ಟ ಶಕುನ ಎಂದು ಭಾವಿಸಿದ್ದಾರೆ.

ಪೂರ್ತಿ ಓದಿ
5:24 PM IST

ಕೋಪದ ಕೈಗೆ ಬುದ್ಧಿಕೊಟ್ಟ ಗಂಡ: 8 ತಿಂಗಳ ಗರ್ಭಿಣಿ ಹೆಂಡ್ತಿನ ಕೊಂದೇ ಬಿಟ್ಟ

ವಿಶಾಖಪಟ್ಟಣದಲ್ಲಿ ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡ ಹೆಂಡತಿ ನಡುವಿನ ಸಣ್ಣ ವಾಗ್ವಾದವೊಂದು ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನ ಕೈಗೆ ಬುದ್ದಿಕೊಟ್ಟ ಗಂಡ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದಿದ್ದಾನೆ.

ಪೂರ್ತಿ ಓದಿ
5:15 PM IST

ಮಂಡ್ಯದ ನ್ಯಾಯದಾನದ ಮೇಲೆ ಕವಿದೀತೇ ಹುಬ್ಬಳ್ಳಿ ಎನ್‌ಕೌಂಟರ್ ಕಾರ್ಮೋಡ?

ಮಂಡ್ಯದಲ್ಲಿ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಪೊಲೀಸರು ಸತ್ಯವನ್ನು ಬಯಲುಗೊಳಿಸಿ ನ್ಯಾಯ ಒದಗಿಸಿದರು. ಆದರೆ ಹುಬ್ಬಳ್ಳಿಯಲ್ಲಿ ನಡೆದ ಎನ್‌ಕೌಂಟರ್ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಉಳಿದಿವೆ. ಈ ಎರಡೂ ಘಟನೆಗಳು ಭಾರತದಲ್ಲಿ ಮಕ್ಕಳ ಸುರಕ್ಷತೆ ಮತ್ತು ನ್ಯಾಯದಾನದ ಬಗ್ಗೆ ಚರ್ಚೆ ಹುಟ್ಟುಹಾಕಿವೆ.

ಪೂರ್ತಿ ಓದಿ
4:57 PM IST

ಮೇ.1 ರಿಂದ ಭಾರತದಲ್ಲಿ ಸ್ಯಾಟಲೈಟ್ ಆಧಾರಿತ ಟೋಲ್ ಸಂಗ್ರಹ, ಪ್ರತಿ ದಿನ 20 ಕಿ.ಮಿ ಉಚಿತ

ಭಾರತದಲ್ಲಿ ಹೆದ್ದಾರಿ ಟೋಲ್ ಸಂಗ್ರಹ ಫಾಸ್ಟ್ಯಾಗ್ ಮೂಲಕ ನಡೆಯುತ್ತಿದೆ. ಇದೀಗ ಮೇ. 1 ರಿಂದ ಸ್ಯಾಟಲೈಟ್ ಆಧಾರಿತ ಜಿಎನ್‌ಎಸ್‌ಎಸ್ ಟೋಲ್ ಸಂಗ್ರಹ ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ 20 ಕಿಲೋಮೀಟರ್ ಉಚಿತ ಪ್ರಯಾಣ ಸಿಗಲಿದೆ.

ಪೂರ್ತಿ ಓದಿ
4:42 PM IST

ಕರ್ನಾಟಕದ ರೈತರಿಗೆ ಸಂತಸದ ಸುದ್ದಿ ನೀಡಿದ ಐಎಂಡಿ, ಈ ವರ್ಷ ಸಾಮಾನ್ಯ ಮಾನ್ಸೂನ್‌!

ಭಾರತೀಯ ಹವಾಮಾನ ಇಲಾಖೆಯು 2025ರಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಾನ್ಸೂನ್ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ.

ಪೂರ್ತಿ ಓದಿ
4:38 PM IST

ಮದ್ವೆಗೆ ನಿರಾಕರಣೆ: ಬಾಯ್‌ಫ್ರೆಂಡ್‌ಗೆ 13 ಕಡೆ ಫ್ರಾಕ್ಚರ್‌ 17 ದಿನ ಆಸ್ಪತ್ರೆ ವಾಸ

ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಬಾಯ್‌ಫ್ರೆಂಡ್‌ಗೆ ಥಳಿಸಿದ ಪರಿಣಾಮವಾಗಿ ಆತನ ದೇಹದಲ್ಲಿ 13 ಮೂಳೆಗಳು ಮುರಿದಿವೆ. ಗುಲ್ಶನ್ ಎಂಬ ಯುವಕನಿಗೆ ಈ ಸ್ಥಿತಿ ಎದುರಾಗಿದ್ದು, ಆತ 17 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.

ಪೂರ್ತಿ ಓದಿ
4:27 PM IST

ಗೃಹಲಕ್ಷ್ಮಿ ಹಣದಲ್ಲಿ ಕೊರೆಸಿದರು ಬೋರು, ತೋಟಕ್ಕೆ ಬಂತು 3 ಇಂಚು ನೀರು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ತೆ-ಸೊಸೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಬೋರ್‌ವೆಲ್ ಕೊರೆಸಿ, ತಮ್ಮ ತೋಟಕ್ಕೆ ನೀರು ತಂದುಕೊಂಡಿದ್ದಾರೆ. 13 ತಿಂಗಳ ಗೃಹಲಕ್ಷ್ಮಿ ಹಣದಿಂದ ಬೋರ್‌ವೆಲ್ ಕೊರೆಸಿದ್ದು, ಈಗ 3 ಇಂಚಿನಷ್ಟು ನೀರು ಬರುತ್ತಿದೆ.

ಪೂರ್ತಿ ಓದಿ
4:12 PM IST

ನ್ಯಾಯ ವಿತರಣೆಯಲ್ಲಿ ಕರ್ನಾಟಕವೇ ನಂಬರ್‌-1 ಎಂದ ಇಂಡಿಯಾ ಜಸ್ಟೀಸ್ ರಿಪೋರ್ಟ್!

ಭಾರತದ ಪೊಲೀಸ್ ಪಡೆಯಲ್ಲಿ ಹಿರಿಯ ಹುದ್ದೆಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ ಎಂದು ಹೊಸ ವರದಿಯೊಂದು ತಿಳಿಸಿದೆ. ಇಂಡಿಯಾ ಜಸ್ಟೀಸ್ ರಿಪೋರ್ಟ್ 2025 ರ ಪ್ರಕಾರ, ಪೊಲೀಸ್ ವ್ಯವಸ್ಥೆಯಲ್ಲಿರುವ ಮಹಿಳೆಯರಲ್ಲಿ ಶೇಕಡಾ 90 ರಷ್ಟು ಜನರು ಕಾನ್‌ಸ್ಟಾಬ್ಯುಲರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪೂರ್ತಿ ಓದಿ
4:08 PM IST

ಗೂಗಲ್ ಇಂಡಿಯಾಗೆ ರಾಜ್ಯ ಹೈಕೋರ್ಟ್ ಶಾಕ್,ಮಾಡಿದ ತಪ್ಪಿಗೆ 5 ಕೋಟಿ ದಂಡ!

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಗೂಗಲ್ ಇಂಡಿಯಾ ಮತ್ತು ಅದರ ಅಧಿಕಾರಿಗಳಿಗೆ ವಿಧಿಸಲಾದ ದಂಡದ ಶೇಕಡ 50 ರಷ್ಟು ಮೊತ್ತವನ್ನು ಬ್ಯಾಂಕ್ ಗ್ಯಾರಂಟಿಗಳ ರೂಪದಲ್ಲಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ. ಈ ಕುರಿತು ಇಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ.

ಪೂರ್ತಿ ಓದಿ
4:06 PM IST

ಕಡೇಚೂರು ಕೈಗಾರಿಕಾ ಪ್ರದೇಶ: ಸದ್ಯ ನಿರಾತಂಕ, ಮುಂದೆ ಕಾದಿದೆ ಆತಂಕ !

ಯಾದಗಿರಿ ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕೈಗಾರಿಕೆಗಳಿಂದ ಹೊರಹೊಮ್ಮುವ ಗಾಳಿ ಮತ್ತು ತ್ಯಾಜ್ಯದಿಂದ ಸುತ್ತಮುತ್ತಲಿನ ಹಳ್ಳಿಗಳ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಂದ ದೃಷ್ಟಿ, ಚರ್ಮರೋಗಗಳು, ಹೃದಯ, ಮೆದುಳು, ಕ್ಷಯ, ಅಸ್ತಮಾ ಮತ್ತು ಕಿಡ್ನಿ ವೈಫಲ್ಯದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದು ವರದಿಯಾಗಿದೆ.

ಪೂರ್ತಿ ಓದಿ
3:40 PM IST

ಐಪಿಎಲ್‌ನಲ್ಲಿ ಯಾರೂ ಮಾಡದ ರೆಕಾರ್ಡ್ ಬರೆದ ಎಂ ಎಸ್ ಧೋನಿ!

ಎಂ.ಎಸ್‌.ಧೋನಿ ಐಪಿಎಲ್‌ನಲ್ಲಿ 200 ಔಟ್‌ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ಲಖನೌ ವಿರುದ್ಧ ಗೆಲುವು ಸಾಧಿಸಿದೆ. ಋತುರಾಜ್‌ ಗಾಯಕ್ವಾಡ್‌ ಬದಲು ಆಯುಶ್‌ ಮಾಥ್ರೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಪೂರ್ತಿ ಓದಿ
3:33 PM IST

2 ಪ್ರಮುಖ ಟೋಲ್‌ ವಿನಾಯಿತಿ ಬಗ್ಗೆ ಸಾರಿಗೆ ಇಲಾಖೆ ಪ್ರಸ್ತಾವಣೆ ಪರಿಗಣಿಸಿದ ನಿರ್ಮಲಾ ಸೀತಾರಾಮನ್‌!

ರಸ್ತೆ ಸಾರಿಗೆ ಸಚಿವಾಲಯವು ಕಿರಿದಾದ ಹೆದ್ದಾರಿಗಳಲ್ಲಿ ಟೋಲ್ ವಿನಾಯಿತಿ ಮತ್ತು ಖಾಸಗಿ ಕಾರುಗಳಿಗೆ ವಾರ್ಷಿಕ ಟೋಲ್ ಪಾಸ್ ಪ್ರಸ್ತಾವನೆಗಳನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಿದೆ. ಅನುಮೋದನೆ ದೊರೆತರೆ ವೈಯಕ್ತಿಕ ವಾಹನ ಚಾಲಕರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ.

ಪೂರ್ತಿ ಓದಿ
3:32 PM IST

ಕೇರಳದಲ್ಲಿ ಕಂದಕಕ್ಕೆ ಉರುಳಿದ ಬಸ್: ಬಾಲಕಿ ಸಾವು

ಎರ್ನಾಕುಲಂನಲ್ಲಿ KSRTC ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 14 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ, ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಪೂರ್ತಿ ಓದಿ
3:21 PM IST

ಟಾಯ್ಲೆಟ್ ಪೇಪರ್‌ನಲ್ಲಿ ರಿಸಿಗ್ನೇಶನ್ ಲೆಟರ್, ಒಂದೇ ವಾಕ್ಯದಲ್ಲಿ ಕಂಪನಿ ಜನ್ಮಜಾಲಾಡಿದ ಉದ್ಯೋಗಿ

ಒಂದೇ ವಾಕ್ಯದಲ್ಲಿ ರಿಸೈನ್ ಲೆಟರ್ ಬರೆದು ಕೆಲಸಕ್ಕೆ ರಾಜೀನಾಮೆ ನೀಡಲಾಗಿದೆ. ವಿಶೇಷ ಅಂದರೆ ಈ ರಾಜೀನಾಮೆ ಪತ್ರ ಕೊಟ್ಟಿರುವುದು ಟಾಯ್ಲೆಟ್ ಪೇಪರ್‌ನಲ್ಲಿ. ಒಂದು ವಾಕ್ಯದಲ್ಲಿ ತನ್ನ ರಾಜೀನಾಮೆ, ಯಾವ ಕಾರಣಕ್ಕಾಗಿ ಈ ಪೇಪರ್ ಬಳಸಿದ್ದೇನೆ ಹಾಗೂ ಕಂಪನಿಯ ಜನ್ಮ ಜಾಲಾಡಿದ ಘಟನೆ ನಡೆದಿದೆ.

ಪೂರ್ತಿ ಓದಿ
3:21 PM IST

Breaking: ಮುಡಾ ಕೇಸ್‌ನಲ್ಲಿ ಸಿಎಂ ಸಿದ್ಧರಾಮಯ್ಯಗೆ ಬಿಗ್‌ ಶಾಕ್‌!

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಡಾ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್ ಬಿಗ್ ಶಾಕ್ ನೀಡಿದೆ. ಲೋಕಾಯುಕ್ತ ಪೊಲೀಸರಿಗೆ ತನಿಖೆ ಮುಂದುವರಿಸಲು ಸೂಚಿಸಿದ್ದು, ಬಿ ರಿಪೋರ್ಟ್ ಬಗ್ಗೆ ಯಾವುದೇ ಆದೇಶ ನೀಡಿಲ್ಲ. ಮೇ 7ರೊಳಗೆ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸಬೇಕು.

ಪೂರ್ತಿ ಓದಿ
3:03 PM IST

ಪತ್ನಿ ವಿರುದ್ಧ ದೂರು ನೀಡಿದ ಪತಿ: ಮಸೀದಿ ಮುಂದೆಯೇ ಯುವಕರ ಗುಂಪಿನಿಂದ ಮಹಿಳೆ ಮೇಲೆ ಹಲ್ಲೆ

ದಾವಣಗೆರೆಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಗಂಡ ದೂರು ನೀಡಿದ ನಂತರ ಯುವಕರ ಗುಂಪೊಂದು ಆತನ ಪತ್ನಿ ಮೇಲೆ ಹಲ್ಲೆ ನಡೆಸಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ
2:54 PM IST

ಒಮ್ಮೆ ವಕ್ಫ್‌ ಎಂದಾದರೆ, ಅದು ಶಾಶ್ವತವಾಗಿ ವಕ್ಫ್‌: ತಮಿಳುನಾಡು ಪ್ರಕರಣದ ಬಗ್ಗೆ ಕಾಂಗ್ರೆಸ್‌ ಶಾಸಕನ ಪ್ರತಿಕ್ರಿಯೆ!

ತಮಿಳುನಾಡಿನಲ್ಲಿ ವಕ್ಫ್ ಮಂಡಳಿಯು ಗ್ರಾಮವೊಂದಕ್ಕೆ ನೋಟಿಸ್ ನೀಡಿದ್ದು, ಆಸ್ತಿ ವಕ್ಫ್‌ಗೆ ಸೇರಿದೆ ಎಂದು ಹೇಳಿಕೊಂಡಿದೆ. ಕಾಂಗ್ರೆಸ್ ಶಾಸಕರು ವಕ್ಫ್ ಆಸ್ತಿಯ ಶಾಶ್ವತತೆಯ ಬಗ್ಗೆ ಹೇಳಿಕೆ ನೀಡಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಪೂರ್ತಿ ಓದಿ
2:41 PM IST

ಮನಕಲುಕುವ ವಿಡಿಯೋ, ಅನಾರೋಗ್ಯ ಪೀಡಿತ ತಂದೆಯನ್ನು ತಳ್ಳೋ ಗಾಡಿಯಲ್ಲಿ ಆಸ್ಪತ್ರೆಗೆ ಕರೆತಂದ ಬಾಲಕ

ಆ್ಯಂಬುಲೆನ್ಸ್‌ಗೆ ದುಡ್ಡಿಲ್ಲ, ಯಾರಿಗೆ ಕರೆ ಮಾಡಬೇಕು ಅನ್ನೋದು ಗೊತ್ತಿಲ್ಲ. ಇತ್ತ ತಂದೆಯ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ತಳ್ಳೋ ಸೈಕಲ್ ಗಾಡಿಯಲ್ಲಿ ಮಲಗಿಸಿ ತಂದೆಯನ್ನು ಆಸ್ಪತ್ರೆಗೆ ಬಾಲಕ ಕರೆ ತಂದ ವಿಡಿಯೋ ಹಲವು ಪ್ರಶ್ನೆ ಹುಟ್ಟು ಹಾಕಿದೆ.
 
ಪೂರ್ತಿ ಓದಿ
1:48 PM IST

ವಿಟಮಿನ್ ಬಿ12 ಕೊರತೆ: ಲಕ್ಷಣಗಳು, ಕಾರಣಗಳು & ಪರಿಹಾರಗಳು!

ವಿಟಮಿನ್ ಬಿ12 ಕೊರತೆ ಭಾರತದಲ್ಲಿ ಸಾಮಾನ್ಯವಾಗಿದೆ, ಅದರಲ್ಲೂ ಯುವ ವೃತ್ತಿಪರರಲ್ಲಿ. ದಣಿವು, ತಲೆತಿರುಗುವಿಕೆ, ಮತ್ತು ಮರೆವು ಇದರ ಲಕ್ಷಣಗಳಾಗಿದ್ದು, ಸಸ್ಯಾಹಾರಿ ಆಹಾರ ಮತ್ತು ಜಡ ಜೀವನಶೈಲಿಯಿಂದ ಇದು ಉಂಟಾಗುತ್ತದೆ.

ಪೂರ್ತಿ ಓದಿ
1:26 PM IST

ಕಸ ಸಂಗ್ರಹಗಾರರ ಪ್ರತಿಭಟನೆಯಿಂದಾಗಿ ಕೊಳೆತು ನಾರುತ್ತಿರುವ ಬ್ರಿಟಿಷರ ಬರ್ಮಿಂಗ್‌ ಹ್ಯಾಮ್‌

ಬರ್ಮಿಂಗ್‌ಹ್ಯಾಮ್‌ನಲ್ಲಿ ಕಸ ಸಂಗ್ರಹಕಾರರ ಪ್ರತಿಭಟನೆಯಿಂದ ನಗರದಲ್ಲಿ ಕಸದ ರಾಶಿ ಹೆಚ್ಚಾಗಿದೆ. ಇದರಿಂದ ಇಲಿಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಪರಿಸ್ಥಿತಿ ನಿಭಾಯಿಸಲು ಮಿಲಿಟರಿ ಸಿಬ್ಬಂದಿಯನ್ನು ಕರೆಯಲು ಸರ್ಕಾರ ಮುಂದಾಗಿದೆ.

ಪೂರ್ತಿ ಓದಿ
1:24 PM IST

ಬೆಂಗಳೂರು ಎಫ್‌ಸಿ ಟೀಮ್‌ ಮಾಲೀಕ, ಅಭಿಮಾನಿಗಳ ಮೇಲೆ ಪಟಾಕಿ ತೂರಿದ ಬಗಾನ್‌ ಫ್ಯಾನ್ಸ್‌, ದೂರು ದಾಖಲು!

ಕೋಲ್ಕತ್ತಾದಲ್ಲಿ ನಡೆದ ಐಎಸ್‌ಎಲ್ ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ಅಭಿಮಾನಿಗಳು ಮತ್ತು ಮಾಲೀಕರ ಮೇಲೆ ಪಟಾಕಿ ಎಸೆದ ಘಟನೆಯನ್ನು ಬಿಎಫ್‌ಸಿ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಎಐಎಫ್‌ಎಫ್ ಮತ್ತು ಎಫ್‌ಎಸ್‌ಡಿಎಲ್ ಗೆ ದೂರು ದಾಖಲಿಸಿದೆ.

ಪೂರ್ತಿ ಓದಿ
1:22 PM IST

ನಾಸಾದಲ್ಲಿ ಭಾರತೀಯ ಮೂಲದ ನೀಲಾ ರಾಜೇಂದ್ರ ವಜಾ: ಕಾರಣವೇನು?

ಅಮೆರಿಕದ ನಾಸಾದಲ್ಲಿ ಉನ್ನತ ಅಧಿಕಾರಿಯಾಗಿದ್ದ ಭಾರತೀಯ ಮೂಲದ ನೀಲಾ ರಾಜೇಂದ್ರ ಅವರನ್ನು ವಜಾ ಮಾಡಲಾಗಿದೆ. ಅಧ್ಯಕ್ಷ ಟ್ರಂಪ್ ಅವರ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಾಸಾ ತಿಳಿಸಿದೆ.

ಪೂರ್ತಿ ಓದಿ
12:57 PM IST

ಸೈಫ್‌ ಅಲಿ ಖಾನ್‌ಗೆ ಚೂರಿ ಇರಿತ ಆಗಿದ್ದೇ ಅನುಮಾನ, ಎಲ್ಲೂ ಮ್ಯಾಚ್‌ ಆಗ್ತಿಲ್ಲ ಆರೋಪಿಯ ಬೆರಳಚ್ಚು!

ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಸೈಫ್‌ ಅಲಿ ಖಾನ್‌ಗೆ ಚೂರಿ ಇರಿತ ಆಗಿರುವುದೇ ಅನುಮಾನ ಎನ್ನುವಂಥ ಮಾತುಗಳು ಕೇಳಿಬರುತ್ತಿವೆ. ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದಲ್ಲಿ ಮುಂಬೈ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಬೆರಳಚ್ಚುಗಳು ಹೊಂದಿಕೆಯಾಗುತ್ತಿಲ್ಲ.

ಪೂರ್ತಿ ಓದಿ
12:52 PM IST

ಕಳೆದ ಥರ ಅಲ್ಲ ಇದು, ಇದೇ ನಿಜವಾದ ಎಂಗೇಜ್‌ಮೆಂಟ್‌: ಕಿಡಿಗೇಡಿಗಳಿ ಎಚ್ಚರಿಕೆ ಕೊಟ್ಟ ವೈಷ್ಣವಿ ಗೌಡ ತಾಯಿ

ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಪರರಾಜ್ಯದ ಅನುಕೂಲ್‌ ಮಿಶ್ರಾ ಜೊತೆ ಎಂಗೇಜ್‌ ಆಗಿದ್ದಾರೆ. ಈ ವೇಳೆ ವೈಷ್ಣವಿ ತಾಯಿ, ಭಾನು ಅವರು, “ಈ ಹಿಂದಿನ ಥರ ಅಲ್ಲ ಇದು” ಎಂದು ಹೇಳಿಕೆ ಕೊಟ್ಟಿದ್ದಾರೆ.
 
ಪೂರ್ತಿ ಓದಿ
12:51 PM IST

ಹಳ್ಳೀಲಿ ಬ್ಯುಸಿನೆಸ್ ಮಾಡಲು ಈ ಯೋಜನೆ ಅತ್ಯುತ್ತಮ, ಸರ್ಕಾರ ಸಹಾಯ ಮಾಡುತ್ತೆ, ನೀವೂ ಶ್ರೀಮಂತರಾಗುತ್ತೀರಿ!

ಗ್ರಾಮೀಣ ಭಾರತದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ, ರಾಷ್ಟ್ರೀಯ ಜಾನುವಾರು ಮಿಷನ್, ಮತ್ತು ಸ್ಟಾರ್ಟ್ಅಪ್ ಇಂಡಿಯಾ ಯೋಜನೆಗಳು ಆರ್ಥಿಕ ನೆರವು ಮತ್ತು ತರಬೇತಿಯನ್ನು ಒದಗಿಸುತ್ತವೆ.

ಪೂರ್ತಿ ಓದಿ
12:28 PM IST

ತಮಿಳುನಾಡಿನ ವೆಲ್ಲೂರಿನ ಇಡೀ ಗ್ರಾಮ ತನ್ನದು ಎಂದ ವಕ್ಫ್‌, 150 ಕುಟುಂಬಕ್ಕೆ ನೋಟಿಸ್‌!

ತಮಿಳುನಾಡಿನ ವೆಲ್ಲೂರಿನಲ್ಲಿ ವಕ್ಫ್ ಮಂಡಳಿಯು ಗ್ರಾಮದ ಜಾಗವನ್ನು ಖಾಲಿ ಮಾಡುವಂತೆ 150 ಕುಟುಂಬಗಳಿಗೆ ನೋಟಿಸ್ ನೀಡಿದೆ. ಇದು ವಿಜಯಪುರದ ಘಟನೆಯನ್ನು ನೆನಪಿಸುತ್ತದೆ, ಅಲ್ಲಿ ವಕ್ಫ್‌ನಿಂದ ರೈತರು ತೊಂದರೆ ಅನುಭವಿಸಿದ್ದರು. ಸರ್ಕಾರ ಮಧ್ಯಪ್ರವೇಶಿಸಿ ರಕ್ಷಣೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪೂರ್ತಿ ಓದಿ
12:17 PM IST

55 ಕೋಟಿ ಅಕ್ರಮ ಹಣ ವರ್ಗಾವಣೆ, ಸೋನಿಯಾ ಅಳಿಯ ವಾದ್ರಾಗೆ ಇಡಿ ಸಮನ್ಸ್!

ಭೂ ವ್ಯವಹಾರದ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ನೀಡಿದ್ದ ಸಮನ್ಸ್‌ಗೆ ಗೈರಾದ ಕಾರಣ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಪೂರ್ತಿ ಓದಿ
12:01 PM IST

ಹುಬ್ಬಳ್ಳಿ ಎನ್‌ಕೌಂಟರ್ vs ಮಂಡ್ಯದ ನ್ಯಾಯದಾನ: ಮಕ್ಕಳ ಅ*ಚಾರದ ಎರಡು ಪ್ರಕರಣಗಳು

ಮಂಡ್ಯ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಅತ್ಯಾ*ಚಾರ ಪ್ರಕರಣಗಳಲ್ಲಿ ಪೊಲೀಸರು ಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಂಡ್ಯದಲ್ಲಿ ಆರೋಪಿಗೆ ನ್ಯಾಯಾಂಗದ ಮೂಲಕ ಶಿಕ್ಷೆಯಾದರೆ, ಹುಬ್ಬಳ್ಳಿಯಲ್ಲಿ ಎನ್‌ಕೌಂಟರ್ ಮಾಡಲಾಗಿದೆ. 

ಪೂರ್ತಿ ಓದಿ
12:00 PM IST

ಬಾಹ್ಯಾಕಾಶ ಪ್ರಯಾಣ ಮಾಡಿ ಯಶಸ್ವಿಯಾಗಿ ಭೂಮಿಗೆ ಮರಳಿದ ಪಾಪ್‌ ಸ್ಟಾರ್‌ ಕೇಟಿ ಪೆರ್ರಿ!

ಬ್ಯೂ ಆರಿಜಿನ್‌ನ ಪೂರ್ಣ ಮಹಿಳಾ ಗಗನಯಾತ್ರಿಗಳ ತಂಡವು ಯಶಸ್ವಿಯಾಗಿ ಬಾಹ್ಯಾಕಾಶ ಯಾತ್ರೆ ಮುಗಿಸಿ ವಾಪಾಸಾಗಿದೆ. ಈ ತಂಡದಲ್ಲಿ ಪಾಪ್‌ ಸಿಂಗರ್‌, ಪತ್ರಕರ್ತರು, ವಿಜ್ಞಾನಿಗಳು ಮತ್ತು ಹೋರಾಟಗಾರ್ತಿಯರು ಸೇರಿದ್ದಾರೆ.

ಪೂರ್ತಿ ಓದಿ
11:54 AM IST

ಅನುಕೂಲ್‌ ಮಿಶ್ರಾ ಯಾರು? ಏನು ಕೆಲಸ?; ಈ ಹಿಂದಿ ಹುಡುಗನ ಬಗ್ಗೆ ಮೌನ ಮುರಿದ ಸೀತಾರಾಮ ವೈಷ್ಣವಿ ಗೌಡ

ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅನುಕೂಲ್‌ ಮಿಶ್ರಾ ಜೊತೆ ಎಂಗೇಜ್‌ ಆಗಿದ್ದಾರೆ. ಅನುಕೂಲ್‌ ಯಾರು? ಎಲ್ಲಿಯವರು ಎಂದು ಅನೇಕರಿಗೆ ಪ್ರಶ್ನೆ ಇರುತ್ತದೆ. ಇದಕ್ಕೀಗ ವೈಷ್ಣವಿ ಅವರೇ ಉತ್ತರ ಕೊಟ್ಟಿದ್ದಾರೆ.

ಪೂರ್ತಿ ಓದಿ
11:43 AM IST

ಮೈಮೇಲಿರುವ ಬಟ್ಟೆ ಬಿಟ್ಟರೆ ಬೇರೇನೂ ಉಳಿದಿಲ್ಲ: ಮುರ್ಷಿದಾಬಾದ್ ವಕ್ಫ್‌ ಹಿಂಸಾಚಾರ ಸಂತ್ರಸ್ತರ ಗೋಳು

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ವಕ್ಫ್ ಮಸೂದೆ ವಿರೋಧಿಸಿ ನಡೆದ ಹಿಂಸಾಚಾರದಿಂದ ಸಂತ್ರಸ್ತರಾದವರು ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಮನೆ ಮಠ ಕಳೆದುಕೊಂಡು, ಜೀವ ಉಳಿಸಿಕೊಂಡು ಬಂದಿರುವ ಸಂತ್ರಸ್ತರ ಕಣ್ಣೀರ ಕಥೆಗಳು ಹೇಳತೀರದಾಗಿವೆ.

ಪೂರ್ತಿ ಓದಿ
11:30 AM IST

ಕಾಡಾನೆ ದಾಳಿ: ಜೀಪ್ ರೇಸ್‌ನಲ್ಲಿದ್ದ ಯುವಕ ಅದೃಷ್ಟವಶಾತ್ ಪಾರು!

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಅಕ್ರಮ ಜೀಪ್ ರೇಸ್ ನಡೆಯುತ್ತಿದ್ದಾಗ ಕಾಡಾನೆಯೊಂದು ದಾಳಿ ಮಾಡಿದೆ. ಅದೃಷ್ಟವಶಾತ್ ಯುವಕನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅರಣ್ಯ ಇಲಾಖೆಯ ಅನುಮತಿ ಪಡೆಯದೆ ರೇಸ್ ಆಯೋಜಿಸಲಾಗಿತ್ತು.

ಪೂರ್ತಿ ಓದಿ
11:29 AM IST

ಲಖನೌ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್‌ ಮೇಲೆ ಮ್ಯಾಚ್‌ ಫಿಕ್ಸಿಂಗ್ ಆರೋಪ! ಬ್ಯಾನ್ ಮಾಡಲು ಆಗ್ರಹ

ಲಖನೌ ವಿರುದ್ಧ ಚೆನ್ನೈ ಗೆದ್ದ ಬೆನ್ನಲ್ಲೇ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ಟಾಸ್ ವೇಳೆ ಧೋನಿ ನಿರ್ಧಾರ ಗುಟ್ಟಾಗಿ ಹೇಳಿದ್ದೇಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ
11:19 AM IST

ತುಮಕೂರು ರೈಲು ನಿಲ್ದಾಣದ ಹೆಸರು ಬದಲಾವಣೆ ಪ್ರಸ್ತಾವನೆಗೆ ಅನುಮೋದನೆ ನೀಡಿದ ಸರ್ಕಾರ

Tumakuru Railway Station: ತುಮಕೂರು ರೈಲು ನಿಲ್ದಾಣದ ಹೆಸರನ್ನು ಮರುನಾಮಕರಣ ಮಾಡಲು ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. 

ಪೂರ್ತಿ ಓದಿ
11:18 AM IST

ಮಾರುಕಟ್ಟೆಗೆ ಬಂದ ಲೆನೆವೋ ರೋಲೆಬೆಲ್‌ ಲ್ಯಾಪ್‌ಟಾಪ್‌, 14 ಇಂಚಿನ ಸ್ಕ್ರೀನ್‌ ನಿಮಿಷದಲ್ಲೇ 16 ಇಂಚಿನ ಸ್ಕ್ರೀನ್‌ ಆಗುತ್ತೆ!

ಲೆನೆವೊ ತನ್ನ ರೋಲೆಬಲ್ ಲ್ಯಾಪ್‌ಟಾಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ, ಇದು 14 ಇಂಚಿನಿಂದ 16.2 ಇಂಚಿಗೆ ಬದಲಾಗುವ ಡಿಸ್‌ಪ್ಲೇ ಹೊಂದಿದೆ. ಇಂಟೆಲ್ ಕೋರ್ i7 ಚಿಪ್, 32GB RAM, ಮತ್ತು 1TB ವರೆಗಿನ SSD ಸ್ಟೋರೇಜ್ ಇದರಲ್ಲಿದೆ.

ಪೂರ್ತಿ ಓದಿ
11:14 AM IST

ಪ್ರಧಾನಿ ಮೋದಿ ಗಂಡ್ಸು, ಕಾಂಗ್ರೆಸ್‌ನವರಂತೆ ಹೆಂಗಸರಲ್ಲ: ಸಂಸದ ಜಿಗಜಿಣಗಿ ಕಿಡಿ

ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸದಿರುವ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಡ ಮುಸ್ಲಿಮರ ಆಸ್ತಿಯನ್ನು ಕಾಂಗ್ರೆಸ್ ನಾಯಕರು ಲಪಟಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೋದಿ ಗಂಡಸು ಇದ್ದಾರೆ, ಕಾಯ್ದೆ ಜಾರಿಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ
10:31 AM IST

ಪೋಷಕರಿಗೆ ತಿಳಿಯದೇ ಕಾರು ಏರಿದ ಇಬ್ಬರು ಪುಟಾಣಿಗಳು ಉಸಿರುಕಟ್ಟಿ ಸಾವು

ತೆಲಂಗಾಣದಲ್ಲಿ ಆಟವಾಡುತ್ತಾ ಕಾರು ಸೇರಿದ ಇಬ್ಬರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಪೋಷಕರು ಮನೆಯೊಳಗೆ ಮಾತುಕತೆಯಲ್ಲಿ ತೊಡಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಪೂರ್ತಿ ಓದಿ
10:29 AM IST

ರಜತ್ 'ಮಚ್ಚು ರೀಲ್ಸ್': ವಿಡಿಯೋ ಡಿಲೀಟ್ ಮಾಡದ ಪೊಲೀಸರು! 10 ಲಕ್ಷ ವೀಕ್ಷಣೆ!

ನಟ ರಜತ್ ಅವರ ವಿವಾದಾತ್ಮಕ 'ಮಚ್ಚು ರೀಲ್ಸ್' ವಿಡಿಯೋ ಇನ್ನೂ ಇನ್‌ಸ್ಟಾಗ್ರಾಮ್‌ನಿಂದ ಡಿಲೀಟ್ ಆಗಿಲ್ಲ. ಪೊಲೀಸರು ಜೈಲಿಗೆ ಕಳುಹಿಸಿದರೂ ವಿಡಿಯೋ ತೆಗೆಯದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

ಪೂರ್ತಿ ಓದಿ
9:36 AM IST

PBKS vs KKR: ಬಲಿಷ್ಠ ಕೆಕೆಆರ್ ಸವಾಲು ಗೆಲ್ಲುತ್ತಾ ಪಂಜಾಬ್ ಕಿಂಗ್ಸ್‌?

ಪಂಜಾಬ್ ಕಿಂಗ್ಸ್ ಇಂದು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಕೆಕೆಆರ್ ತಂಡವನ್ನು ಕಟ್ಟಿಹಾಕಲು ಪಂಜಾಬ್ ಬೌಲರ್ ಗಳು ತಂತ್ರ ರೂಪಿಸಲಿದ್ದಾರೆ.

ಪೂರ್ತಿ ಓದಿ
9:30 AM IST

ಬಲಿ ನೀಡಲು ಮೇಕೆ ಕೊಂಡೊಯ್ಯುತ್ತಿದ್ದಾಗ ಅಪಘಾತ: ಕಾರಿನಲ್ಲಿದ್ದವರೆಲ್ಲರೂ ಸಾವು, ಬದುಕುಳಿದ ಮೇಕೆ

ಮಧ್ಯಪ್ರದೇಶದ ಜಬಲ್ಪುರದಲ್ಲಿ ಮೇಕೆ ಬಲಿ ನೀಡಲು ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ನಂತರ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಮೇಕೆ ಮಾತ್ರ ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದೆ.

ಪೂರ್ತಿ ಓದಿ
9:27 AM IST

ಮುಸ್ಲಿಂ ಮದುವೆ ಕುರಿತು ರಾಯರೆಡ್ಡಿ ವಿವಾದಾತ್ಮಕ ಹೇಳಿಕೆ, ತುರ್ತು ಸುದ್ದಿಗೋಷ್ಠಿ!

ಮುಸ್ಲಿಂ ಮದುವೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ, ತಮ್ಮ ಹೇಳಿಕೆಯಿಂದ ಉಂಟಾದ ವಿವಾದದ ಬೆನ್ನಲ್ಲೇ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಹೇಳಿಕೆಗೆ ರಾಯರೆಡ್ಡಿ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ.

ಪೂರ್ತಿ ಓದಿ
9:02 AM IST

ಸತತ 5 ಸೋಲಿನ ಬಳಿಕ ಕೊನೆಗೂ ಗೆದ್ದ ಸಿಎಸ್‌ಕೆ! ಪಂದ್ಯ ಗೆಲ್ಲಿಸಿದ ಧೋನಿ

ಚೆನ್ನೈ ಸೂಪರ್ ಕಿಂಗ್ಸ್ ಲಖನೌ ವಿರುದ್ಧ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಧೋನಿ ಮತ್ತು ಶಿವಂ ದುಬೆ ಅವರ ಅದ್ಭುತ ಆಟ ತಂಡಕ್ಕೆ ಜಯ ತಂದುಕೊಟ್ಟಿತು.

ಪೂರ್ತಿ ಓದಿ
9:02 AM IST

ಕೊಪ್ಪಳ: ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಮಾನ ಭಾಗ್ಯ!

ಕೊಪ್ಪಳದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಸ್ವಂತ ಖರ್ಚಿನಲ್ಲಿ 24 ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಹೈದರಾಬಾದ್‌ಗೆ ಕರೆದೊಯ್ಯಲು ಪರೀಕ್ಷೆ ನಡೆಸಿದ್ದಾರೆ. ಓದುವ ಮನೋಭಾವ ಹೆಚ್ಚಿಸಲು ಶಿಕ್ಷಕರು ಈ ನಿರ್ಧಾರ ಕೈಗೊಂಡಿದ್ದಾರೆ.

ಪೂರ್ತಿ ಓದಿ
8:52 AM IST

ವಕ್ಫ್ ಆಸ್ತಿ ಮೇಲೆ ಕಣ್ಣಿಟ್ಟವರ ಕಣ್ಣು ಕೀಳಿ ಎಂದ ಸಂಸದ; ಮೊದಲು ಷರಿಯಾ ಕಾನೂನು, ಬಳಿಕ ಸಂವಿಧಾನ ಎಂದ ಸಚಿವ

ಪಶ್ಚಿಮ ಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿಂಸಾಚಾರ ಭುಗಿಲೆದ್ದಿದೆ. ಟಿಎಂಸಿ ಸಂಸದರೊಬ್ಬರು ವಕ್ಫ್ ಆಸ್ತಿ ರಕ್ಷಣೆಗಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಜಾರ್ಖಂಡ್ ಸಚಿವರು ಷರಿಯಾ ಕಾನೂನು ಮೊದಲು ಎಂದಿದ್ದಾರೆ.

ಪೂರ್ತಿ ಓದಿ
8:41 AM IST

ಜಾತಿ ಗಣತಿ ವರದಿಗೆ ಹೆಬ್ಬಾಳ್ಕರ್ ಆಕ್ಷೇಪ ಬೆನ್ನಲ್ಲೇ ಇಂದು ಒಕ್ಕಲಿಗರ ಸಭೆ ಕರೆದ ಡಿಕೆಶಿ!

ಜಾತಿವಾರು ಗಣತಿ ವರದಿಯಲ್ಲಿ ಒಕ್ಕಲಿಗ ಸಮುದಾಯದ ಅಂಕಿ ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ವರದಿ ಬಗ್ಗೆ ಚರ್ಚಿಸಿ, ಸರ್ಕಾರದ ನಿಲುವು ನಿರ್ಧರಿಸುವ ಸಾಧ್ಯತೆ ಇದೆ.

ಪೂರ್ತಿ ಓದಿ
8:20 AM IST

'ಇನ್ನೊಮ್ಮೆ ಗಣತಿ ಮಾಡಿ..' ಜಾತಿ ಗಣತಿ ಸರಿಯಿದೆ ಎಂದ ಸರ್ಕಾರದ ವಿರುದ್ಧ ಸಚಿವೆಯೇ ಆಕ್ಷೇಪ!

ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾದ ಜಾತಿ ಗಣತಿ ವರದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವೀರಶೈವ-ಲಿಂಗಾಯತರನ್ನು ಪ್ರತ್ಯೇಕಿಸಿ ಗಣತಿ ಮಾಡಿರುವುದಕ್ಕೆ ಅವರು ತಕರಾರು ತೆಗೆದಿದ್ದಾರೆ.

ಪೂರ್ತಿ ಓದಿ
7:57 AM IST

ಶ್ರೀರಂಗಪಟ್ಟಣ: ಮತಾಂತರ ವಿರುದ್ಧ ಹಿಂದೂ ಸಂಘಟನೆಗಳಿಂದ ಇಂದು ಬೃಹತ್ ಪ್ರತಿಭಟನೆ!

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬಲವಂತದ ಮತಾಂತರದ ಆರೋಪದ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಿಷನರಿಗಳು ಹಣದ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಪೂರ್ತಿ ಓದಿ
7:50 AM IST

ಕಾಡುತ್ತಿರುವ ಹೌತಿ ಉಗ್ರರ ಹೆಡೆಮುರಿ ಕಟ್ಟಲು ಟ್ರಂಪ್ ಪ್ಲಾನ್‌ : ಇರಾನ್‌ಗೆ ಮತ್ತಷ್ಟು ಸಂಕಷ್ಟ

ಕೆಂಪು ಸಮುದ್ರದಲ್ಲಿ ಹುತಿ ಬಂಡುಕೋರರ ಹಾವಳಿ ತಡೆಯಲು ಅಮೆರಿಕ ಸಿದ್ಧತೆ ನಡೆಸಿದೆ. ವರದಿಗಳ ಪ್ರಕಾರ, 80,000 ಸೈನಿಕರನ್ನು ಯೆಮೆನ್‌ಗೆ ನಿಯೋಜಿಸಲು ಟ್ರಂಪ್ ಮುಂದಾಗಿದ್ದಾರೆ. ಇದು ಇರಾನ್‌ಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ.

ಪೂರ್ತಿ ಓದಿ
7:26 AM IST

ಮುಸ್ಲಿಂರಿಗೆ ಏಕೆ ಮೀಸಲಾತಿ ಕೊಡಬಾರದು? ಪ್ರಧಾನಿ ಮೋದಿಗೆ ಸಿಎಂ ಪ್ರಶ್ನೆ!

ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡಿದ್ದೇವೆ. ಮುಸ್ಲಿಮರಿಗೂ ನ್ಯಾಯ ಸಿಗಬೇಕು. ಮುಸ್ಲಿಮರಿಗೆ ಮೀಸಲಾತಿ ನೀಡಬಾರದು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ

11:51 PM IST:

ಬಾಲಿವುಡ್ ಬಾದ್‍ಶಾ, ಶಾರುಖ್ ಖಾನ್ ತಮ್ಮ 300 ಕೋಟಿ ಮೌಲ್ಯದ ಲಾಸ್ ಏಂಜಲೀಸ್ ಮನೆಯನ್ನು ದಿನಕ್ಕೆ 2 ಲಕ್ಷ ರೂಪಾಯಿಗಳಿಗೆ ಬಾಡಿಗೆಗೆ ನೀಡುತ್ತಿದ್ದಾರೆ. ಈ ಐಷಾರಾಮಿ ಮನೆಯ ವೈಶಿಷ್ಟ್ಯಗಳೇನು?

ಪೂರ್ತಿ ಓದಿ

11:16 PM IST:

ಬೆಂಗಳೂರಿನ 22 ವರ್ಷದ ಯುವತಿ ಜೊಮ್ಯಾಟೋ ಆ್ಯಪ್ ಮೂಲಕ ಆಹಾರವನ್ನು ಆರ್ಡರ್ ಮಾಡಿದಾಗ ವಿತರಣಾ ವ್ಯಕ್ತಿಯಿಂದ ಕಿರುಕುಳ ಅನುಭವಿಸಿದರು. ಈ ಬಗ್ಗೆ ದೂರು ನೀಡಿದ್ದು, ನನಗೆ ಜೀವ ಭಯ ಉಂಟಾಗಿದೆ ಎಂದು ಅಳಲು ತೊಡಿಕೊಂಡಿದ್ದಾರೆ.

ಪೂರ್ತಿ ಓದಿ

10:11 PM IST:

ಕಾಸರಗೋಡಿನಲ್ಲಿ ಕುಡಿದ ಮತ್ತಿನಲ್ಲಿ ಅಂಗಡಿ ಮಾಲೀಕನೋರ್ವ ಪಕ್ಕದ ಅಂಗಡಿಯ ಮಹಿಳೆಯ ಮೇಲೆ ಥಿನ್ನರ್ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ದೂರು ನೀಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಪೂರ್ತಿ ಓದಿ

10:08 PM IST:

ಕೇವಲ ಹತ್ತೇ ಹತ್ತೇ ನಿಮಿಷದಲ್ಲಿ ಸಿಮ್ ನಿಮ್ ಮನೆ ಬಾಗಿಲಿಗೆ ಡೆಲಿವರಿ ಆಗಲಿದೆ. ಏರ್ಟೆಲ್ ಸಿಮ್‌ಗಾಗಿ ಶಾಪ್, ರೇಟೇಲ್ ‌ಶಾಪ್ ಹೋಗಬೇಕಿಲ್ಲ. ಏನಿದು ಹೊಸ ಆಫರ್.

ಪೂರ್ತಿ ಓದಿ

9:47 PM IST:

ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಮಹಿಳೆಯರ ಸ್ವಭಾವದ ಬಗ್ಗೆ ಬಹಳಷ್ಟು ಬರೆದಿದ್ದಾರೆ. ಮಹಿಳೆಯರಲ್ಲಿ ಹುಟ್ಟಿನಿಂದಲೇ ಇರುವ 5 ಕೆಟ್ಟ ಹವ್ಯಾಸಗಳ ಬಗ್ಗೆಯೂ ಚಾಣಕ್ಯರು ಹೇಳಿದ್ದಾರೆ. ಅವರು ಬರೆದದ್ದನ್ನು ಎಲ್ಲರೂ ಸತ್ಯ ಎಂದು ಒಪ್ಪುತ್ತಾರೆ.

ಪೂರ್ತಿ ಓದಿ

9:31 PM IST:

ಅಕ್ರಮ ಸಂಬಂಧದ ಅಮಲಿನಲ್ಲಿ  ಮಹಿಳೆ ಮಾಡಿದ ಕೆಲಸ ತಾಯಿ ಕುಲಕ್ಕೆ ಅಪಮಾನ ಮಾಡುವಂತ ಕೆಲಸ ಮಾಡಿದ್ದಾಳೆ. ತನ್ನದೇ ಮಗಳ ಸ್ನಾನದ ವಿಡಿಯೋ, ಡ್ರೆಸ್ ಚೇಂಜ್ ವಿಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟ ಘಟನೆ ನಡೆದಿದೆ. ಮಹಾ ತಾಯಿ ಯ ನಡೆ ಹಿಂದೆ ಒಂದು ಕಾರಣವಿದೆ.

ಪೂರ್ತಿ ಓದಿ

9:08 PM IST:

ವೃದ್ಧ ದಂಪತಿಗಳು ಪ್ರೀತಿಯ ನೃತ್ಯದ ಮೂಲಕ ಝಡ್ ಜನರೇಷನ್ ಗೆ ಮಾದರಿಯಾಗಿದ್ದಾರೆ. ದೆಹಲಿಯ ಉದ್ಯಾನವನದಲ್ಲಿ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಪೂರ್ತಿ ಓದಿ

8:31 PM IST:

ಒಮ್ಮೆ ವಕ್ಪ್ ಆದರೆ ಮತ್ತೆ ಯಾವತ್ತೂ ವಕ್ಫ್, ಗ್ರಾಮಸ್ಥರೇ ಜಾಗ ಖಾಲಿ ಮಾಡಿ ಇಲ್ಲಾ ವಕ್ಫ್‌ಗೆ ಬಾಡಿಗೆ ಕೊಡಿ ಎಂದು ಕಾಂಗ್ರೆಸ್  ನಾಯಕ ಹೇಳಿದ್ದಾರೆ. ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.

ಪೂರ್ತಿ ಓದಿ

8:12 PM IST:

ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2025ರಲ್ಲಿ 4 ಭಾರತೀಯ ವಿಮಾನ ನಿಲ್ದಾಣಗಳು ಜಾಗತಿಕ ಟಾಪ್ 100 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 32ನೇ ಸ್ಥಾನದೊಂದಿಗೆ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.

ಪೂರ್ತಿ ಓದಿ

7:20 PM IST:

ಆಯೋಧ್ಯೆ ಶ್ರೀರಾಮ ಮಂದಿರದ ಮೇಲ ಪವಿತ್ರ ಕಳಶ ಪ್ರತಿಷ್ಠಾಪಿಸಿದ ಬೆನ್ನಲ್ಲೇ ಎದುರಾದ ಬಾಂಬ್ ಬೆದರಿಕೆಯಿಂದ ಭದ್ರತೆ ಹೆಚ್ಚಿಸಲಾಗಿದೆ. ಇದರ ನಡುವೆ ಬೆದರಿಕೆ ಹಾಕಿದ ಮೂಲ ಎಲ್ಲಿ ಅನ್ನೋದು ಸೈಬರ್ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪೂರ್ತಿ ಓದಿ

6:42 PM IST:

ಟ್ರಂಪ್ ತೆರಿಗೆ ಸುನಾಮಿಯಲ್ಲಿ ವಿಶ್ವದ ಪ್ರಮುಖ ಷೇರುಮಾರುಕಟ್ಟೆಗಳು ಪಾತಾಳಕ್ಕೆ ಕುಸಿದಿತ್ತು. ಭಾರತ ಕೂಡ ಹೊರತಾಗಿರಲಿಲ್ಲ. ಆದರೆ ಈ ಕುಸಿತವನ್ನು ಅಷ್ಟೇ ವೇಗದಲ್ಲಿ ಮೆಟ್ಟಿನಿಂತು ಆದ ನಷ್ಟವನ್ನೂ ಸಂಪೂರ್ಣವಾಗಿ ಭಾರತ ಸರಿದೂಗಿಸಿದೆ. ಈ ಮೂಲಕ ನಷ್ಟ ಸರಿದೂಗಿಸಿದ ವಿಶ್ವದ ಏಕೈಕ ಷೇರುಮಾರುಕಟ್ಟೆ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. 

ಪೂರ್ತಿ ಓದಿ

6:30 PM IST:

ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಜನ್ಮದಿನದ ಪ್ರಯುಕ್ತ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕಿ ಬಸ್‌ಸ್ಟಾಪ್‌ ಮುಚ್ಚಲಾಗಿದೆ. ಡಿ.ಕೆ. ಶಿವಕುಮಾರ್‌ ಸೂಚನೆಗಳನ್ನು ಬಿಬಿಎಂಪಿ ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಪೂರ್ತಿ ಓದಿ

6:28 PM IST:

ಬೆಂಗಳೂರು ಹವಾಮಾನ ಕ್ರಿಯಾ ಕೋಶವು ಎರಡು ಫೆಲೋಶಿಪ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 30, 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ

6:13 PM IST:

ಸಂವಿಧಾನದ 21ನೇ ವಿಧಿಯನ್ವಯ ಮಹಿಳೆಗೆ ಮಗುವನ್ನು ಹೆರುವ ಅಥವಾ ಹೆರದಿರುವ ಹಕ್ಕಿದೆ ಎಂದು ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಹೇಳಿದ್ದಾರೆ. ಗರ್ಭಪಾತ ಕಾಯ್ದೆಯಲ್ಲಿ ಸುಧಾರಣೆಯ ಅವಶ್ಯಕತೆಯಿದ್ದು, ಗರ್ಭಿಣಿ ಮಹಿಳೆಯನ್ನು ಅಧಿಕಾರಶಾಹಿ ಪ್ರಕ್ರಿಯೆಗೆ ಒಳಪಡಿಸಬಾರದು ಎಂದು ಅವರು ತಿಳಿಸಿದರು.

ಪೂರ್ತಿ ಓದಿ

6:02 PM IST:

ಸಿಕಂದರ್ ಬಳಿಕ ಸಣ್ಣ ಬ್ರೇಕ್ ಪಡೆದ ರಶ್ಮಿಕಾ ಮಂದಣ್ಣ ಇದೀಗ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ರಾತ್ರಿಯಿಡಿ ಶೂಟಿಂಗ್ ಮಾಡಿ ಬೆಳಗ್ಗೆ ನಿದ್ದೆ ಗಣ್ಣಿನಲ್ಲೇ ಮಹತ್ವದ ಸಂದೇಶ ಕೊಟ್ಟಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳಿಗೆ ವಿಡಿಯೋ ಮೂಲಕ ರಶ್ಮಿಕಾ ಮಂದಣ್ಣ ಹೇಳಿದ್ದೇನು?
 
ಪೂರ್ತಿ ಓದಿ

5:55 PM IST:

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. 661 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಡಿ ನೋಟಿಸ್ ಜಾರಿ ಮಾಡಿತ್ತು.

ಪೂರ್ತಿ ಓದಿ

5:35 PM IST:

ಒಡಿಶಾದ ಪೂರಿ ಜಗನ್ನಾಥ ದೇವಸ್ಥಾನದ ಮೇಲೆ ಗರುಡ ಪಕ್ಷಿ ಧ್ವಜದಂತಹ ಬಟ್ಟೆಯನ್ನು ಹಿಡಿದು ಹಾರಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಆಧ್ಯಾತ್ಮಿಕ ಚರ್ಚೆಗೆ ಕಾರಣವಾಗಿದ್ದು, ಕೆಲವರು ಇದನ್ನು ದೈವಿಕ ಚಿಹ್ನೆ ಎಂದರೆ, ಇನ್ನು ಕೆಲವರು ಕೆಟ್ಟ ಶಕುನ ಎಂದು ಭಾವಿಸಿದ್ದಾರೆ.

ಪೂರ್ತಿ ಓದಿ

5:24 PM IST:

ವಿಶಾಖಪಟ್ಟಣದಲ್ಲಿ ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡ ಹೆಂಡತಿ ನಡುವಿನ ಸಣ್ಣ ವಾಗ್ವಾದವೊಂದು ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನ ಕೈಗೆ ಬುದ್ದಿಕೊಟ್ಟ ಗಂಡ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದಿದ್ದಾನೆ.

ಪೂರ್ತಿ ಓದಿ

5:15 PM IST:

ಮಂಡ್ಯದಲ್ಲಿ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಪೊಲೀಸರು ಸತ್ಯವನ್ನು ಬಯಲುಗೊಳಿಸಿ ನ್ಯಾಯ ಒದಗಿಸಿದರು. ಆದರೆ ಹುಬ್ಬಳ್ಳಿಯಲ್ಲಿ ನಡೆದ ಎನ್‌ಕೌಂಟರ್ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಉಳಿದಿವೆ. ಈ ಎರಡೂ ಘಟನೆಗಳು ಭಾರತದಲ್ಲಿ ಮಕ್ಕಳ ಸುರಕ್ಷತೆ ಮತ್ತು ನ್ಯಾಯದಾನದ ಬಗ್ಗೆ ಚರ್ಚೆ ಹುಟ್ಟುಹಾಕಿವೆ.

ಪೂರ್ತಿ ಓದಿ

4:57 PM IST:

ಭಾರತದಲ್ಲಿ ಹೆದ್ದಾರಿ ಟೋಲ್ ಸಂಗ್ರಹ ಫಾಸ್ಟ್ಯಾಗ್ ಮೂಲಕ ನಡೆಯುತ್ತಿದೆ. ಇದೀಗ ಮೇ. 1 ರಿಂದ ಸ್ಯಾಟಲೈಟ್ ಆಧಾರಿತ ಜಿಎನ್‌ಎಸ್‌ಎಸ್ ಟೋಲ್ ಸಂಗ್ರಹ ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ 20 ಕಿಲೋಮೀಟರ್ ಉಚಿತ ಪ್ರಯಾಣ ಸಿಗಲಿದೆ.

ಪೂರ್ತಿ ಓದಿ

4:42 PM IST:

ಭಾರತೀಯ ಹವಾಮಾನ ಇಲಾಖೆಯು 2025ರಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಾನ್ಸೂನ್ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ.

ಪೂರ್ತಿ ಓದಿ

4:38 PM IST:

ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಬಾಯ್‌ಫ್ರೆಂಡ್‌ಗೆ ಥಳಿಸಿದ ಪರಿಣಾಮವಾಗಿ ಆತನ ದೇಹದಲ್ಲಿ 13 ಮೂಳೆಗಳು ಮುರಿದಿವೆ. ಗುಲ್ಶನ್ ಎಂಬ ಯುವಕನಿಗೆ ಈ ಸ್ಥಿತಿ ಎದುರಾಗಿದ್ದು, ಆತ 17 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.

ಪೂರ್ತಿ ಓದಿ

4:27 PM IST:

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ತೆ-ಸೊಸೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಬೋರ್‌ವೆಲ್ ಕೊರೆಸಿ, ತಮ್ಮ ತೋಟಕ್ಕೆ ನೀರು ತಂದುಕೊಂಡಿದ್ದಾರೆ. 13 ತಿಂಗಳ ಗೃಹಲಕ್ಷ್ಮಿ ಹಣದಿಂದ ಬೋರ್‌ವೆಲ್ ಕೊರೆಸಿದ್ದು, ಈಗ 3 ಇಂಚಿನಷ್ಟು ನೀರು ಬರುತ್ತಿದೆ.

ಪೂರ್ತಿ ಓದಿ

4:12 PM IST:

ಭಾರತದ ಪೊಲೀಸ್ ಪಡೆಯಲ್ಲಿ ಹಿರಿಯ ಹುದ್ದೆಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ ಎಂದು ಹೊಸ ವರದಿಯೊಂದು ತಿಳಿಸಿದೆ. ಇಂಡಿಯಾ ಜಸ್ಟೀಸ್ ರಿಪೋರ್ಟ್ 2025 ರ ಪ್ರಕಾರ, ಪೊಲೀಸ್ ವ್ಯವಸ್ಥೆಯಲ್ಲಿರುವ ಮಹಿಳೆಯರಲ್ಲಿ ಶೇಕಡಾ 90 ರಷ್ಟು ಜನರು ಕಾನ್‌ಸ್ಟಾಬ್ಯುಲರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪೂರ್ತಿ ಓದಿ

4:08 PM IST:

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಗೂಗಲ್ ಇಂಡಿಯಾ ಮತ್ತು ಅದರ ಅಧಿಕಾರಿಗಳಿಗೆ ವಿಧಿಸಲಾದ ದಂಡದ ಶೇಕಡ 50 ರಷ್ಟು ಮೊತ್ತವನ್ನು ಬ್ಯಾಂಕ್ ಗ್ಯಾರಂಟಿಗಳ ರೂಪದಲ್ಲಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ. ಈ ಕುರಿತು ಇಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ.

ಪೂರ್ತಿ ಓದಿ

4:06 PM IST:

ಯಾದಗಿರಿ ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕೈಗಾರಿಕೆಗಳಿಂದ ಹೊರಹೊಮ್ಮುವ ಗಾಳಿ ಮತ್ತು ತ್ಯಾಜ್ಯದಿಂದ ಸುತ್ತಮುತ್ತಲಿನ ಹಳ್ಳಿಗಳ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಂದ ದೃಷ್ಟಿ, ಚರ್ಮರೋಗಗಳು, ಹೃದಯ, ಮೆದುಳು, ಕ್ಷಯ, ಅಸ್ತಮಾ ಮತ್ತು ಕಿಡ್ನಿ ವೈಫಲ್ಯದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದು ವರದಿಯಾಗಿದೆ.

ಪೂರ್ತಿ ಓದಿ

3:40 PM IST:

ಎಂ.ಎಸ್‌.ಧೋನಿ ಐಪಿಎಲ್‌ನಲ್ಲಿ 200 ಔಟ್‌ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ಲಖನೌ ವಿರುದ್ಧ ಗೆಲುವು ಸಾಧಿಸಿದೆ. ಋತುರಾಜ್‌ ಗಾಯಕ್ವಾಡ್‌ ಬದಲು ಆಯುಶ್‌ ಮಾಥ್ರೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಪೂರ್ತಿ ಓದಿ

3:33 PM IST:

ರಸ್ತೆ ಸಾರಿಗೆ ಸಚಿವಾಲಯವು ಕಿರಿದಾದ ಹೆದ್ದಾರಿಗಳಲ್ಲಿ ಟೋಲ್ ವಿನಾಯಿತಿ ಮತ್ತು ಖಾಸಗಿ ಕಾರುಗಳಿಗೆ ವಾರ್ಷಿಕ ಟೋಲ್ ಪಾಸ್ ಪ್ರಸ್ತಾವನೆಗಳನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಿದೆ. ಅನುಮೋದನೆ ದೊರೆತರೆ ವೈಯಕ್ತಿಕ ವಾಹನ ಚಾಲಕರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ.

ಪೂರ್ತಿ ಓದಿ

3:32 PM IST:

ಎರ್ನಾಕುಲಂನಲ್ಲಿ KSRTC ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 14 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ, ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಪೂರ್ತಿ ಓದಿ

3:21 PM IST:

ಒಂದೇ ವಾಕ್ಯದಲ್ಲಿ ರಿಸೈನ್ ಲೆಟರ್ ಬರೆದು ಕೆಲಸಕ್ಕೆ ರಾಜೀನಾಮೆ ನೀಡಲಾಗಿದೆ. ವಿಶೇಷ ಅಂದರೆ ಈ ರಾಜೀನಾಮೆ ಪತ್ರ ಕೊಟ್ಟಿರುವುದು ಟಾಯ್ಲೆಟ್ ಪೇಪರ್‌ನಲ್ಲಿ. ಒಂದು ವಾಕ್ಯದಲ್ಲಿ ತನ್ನ ರಾಜೀನಾಮೆ, ಯಾವ ಕಾರಣಕ್ಕಾಗಿ ಈ ಪೇಪರ್ ಬಳಸಿದ್ದೇನೆ ಹಾಗೂ ಕಂಪನಿಯ ಜನ್ಮ ಜಾಲಾಡಿದ ಘಟನೆ ನಡೆದಿದೆ.

ಪೂರ್ತಿ ಓದಿ

3:21 PM IST:

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಡಾ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್ ಬಿಗ್ ಶಾಕ್ ನೀಡಿದೆ. ಲೋಕಾಯುಕ್ತ ಪೊಲೀಸರಿಗೆ ತನಿಖೆ ಮುಂದುವರಿಸಲು ಸೂಚಿಸಿದ್ದು, ಬಿ ರಿಪೋರ್ಟ್ ಬಗ್ಗೆ ಯಾವುದೇ ಆದೇಶ ನೀಡಿಲ್ಲ. ಮೇ 7ರೊಳಗೆ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸಬೇಕು.

ಪೂರ್ತಿ ಓದಿ

3:03 PM IST:

ದಾವಣಗೆರೆಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಗಂಡ ದೂರು ನೀಡಿದ ನಂತರ ಯುವಕರ ಗುಂಪೊಂದು ಆತನ ಪತ್ನಿ ಮೇಲೆ ಹಲ್ಲೆ ನಡೆಸಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ

2:54 PM IST:

ತಮಿಳುನಾಡಿನಲ್ಲಿ ವಕ್ಫ್ ಮಂಡಳಿಯು ಗ್ರಾಮವೊಂದಕ್ಕೆ ನೋಟಿಸ್ ನೀಡಿದ್ದು, ಆಸ್ತಿ ವಕ್ಫ್‌ಗೆ ಸೇರಿದೆ ಎಂದು ಹೇಳಿಕೊಂಡಿದೆ. ಕಾಂಗ್ರೆಸ್ ಶಾಸಕರು ವಕ್ಫ್ ಆಸ್ತಿಯ ಶಾಶ್ವತತೆಯ ಬಗ್ಗೆ ಹೇಳಿಕೆ ನೀಡಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಪೂರ್ತಿ ಓದಿ

2:41 PM IST:

ಆ್ಯಂಬುಲೆನ್ಸ್‌ಗೆ ದುಡ್ಡಿಲ್ಲ, ಯಾರಿಗೆ ಕರೆ ಮಾಡಬೇಕು ಅನ್ನೋದು ಗೊತ್ತಿಲ್ಲ. ಇತ್ತ ತಂದೆಯ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ತಳ್ಳೋ ಸೈಕಲ್ ಗಾಡಿಯಲ್ಲಿ ಮಲಗಿಸಿ ತಂದೆಯನ್ನು ಆಸ್ಪತ್ರೆಗೆ ಬಾಲಕ ಕರೆ ತಂದ ವಿಡಿಯೋ ಹಲವು ಪ್ರಶ್ನೆ ಹುಟ್ಟು ಹಾಕಿದೆ.
 
ಪೂರ್ತಿ ಓದಿ

1:48 PM IST:

ವಿಟಮಿನ್ ಬಿ12 ಕೊರತೆ ಭಾರತದಲ್ಲಿ ಸಾಮಾನ್ಯವಾಗಿದೆ, ಅದರಲ್ಲೂ ಯುವ ವೃತ್ತಿಪರರಲ್ಲಿ. ದಣಿವು, ತಲೆತಿರುಗುವಿಕೆ, ಮತ್ತು ಮರೆವು ಇದರ ಲಕ್ಷಣಗಳಾಗಿದ್ದು, ಸಸ್ಯಾಹಾರಿ ಆಹಾರ ಮತ್ತು ಜಡ ಜೀವನಶೈಲಿಯಿಂದ ಇದು ಉಂಟಾಗುತ್ತದೆ.

ಪೂರ್ತಿ ಓದಿ

1:26 PM IST:

ಬರ್ಮಿಂಗ್‌ಹ್ಯಾಮ್‌ನಲ್ಲಿ ಕಸ ಸಂಗ್ರಹಕಾರರ ಪ್ರತಿಭಟನೆಯಿಂದ ನಗರದಲ್ಲಿ ಕಸದ ರಾಶಿ ಹೆಚ್ಚಾಗಿದೆ. ಇದರಿಂದ ಇಲಿಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಪರಿಸ್ಥಿತಿ ನಿಭಾಯಿಸಲು ಮಿಲಿಟರಿ ಸಿಬ್ಬಂದಿಯನ್ನು ಕರೆಯಲು ಸರ್ಕಾರ ಮುಂದಾಗಿದೆ.

ಪೂರ್ತಿ ಓದಿ

1:24 PM IST:

ಕೋಲ್ಕತ್ತಾದಲ್ಲಿ ನಡೆದ ಐಎಸ್‌ಎಲ್ ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ಅಭಿಮಾನಿಗಳು ಮತ್ತು ಮಾಲೀಕರ ಮೇಲೆ ಪಟಾಕಿ ಎಸೆದ ಘಟನೆಯನ್ನು ಬಿಎಫ್‌ಸಿ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಎಐಎಫ್‌ಎಫ್ ಮತ್ತು ಎಫ್‌ಎಸ್‌ಡಿಎಲ್ ಗೆ ದೂರು ದಾಖಲಿಸಿದೆ.

ಪೂರ್ತಿ ಓದಿ

1:22 PM IST:

ಅಮೆರಿಕದ ನಾಸಾದಲ್ಲಿ ಉನ್ನತ ಅಧಿಕಾರಿಯಾಗಿದ್ದ ಭಾರತೀಯ ಮೂಲದ ನೀಲಾ ರಾಜೇಂದ್ರ ಅವರನ್ನು ವಜಾ ಮಾಡಲಾಗಿದೆ. ಅಧ್ಯಕ್ಷ ಟ್ರಂಪ್ ಅವರ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಾಸಾ ತಿಳಿಸಿದೆ.

ಪೂರ್ತಿ ಓದಿ

12:57 PM IST:

ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಸೈಫ್‌ ಅಲಿ ಖಾನ್‌ಗೆ ಚೂರಿ ಇರಿತ ಆಗಿರುವುದೇ ಅನುಮಾನ ಎನ್ನುವಂಥ ಮಾತುಗಳು ಕೇಳಿಬರುತ್ತಿವೆ. ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದಲ್ಲಿ ಮುಂಬೈ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಬೆರಳಚ್ಚುಗಳು ಹೊಂದಿಕೆಯಾಗುತ್ತಿಲ್ಲ.

ಪೂರ್ತಿ ಓದಿ

12:52 PM IST:

ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಪರರಾಜ್ಯದ ಅನುಕೂಲ್‌ ಮಿಶ್ರಾ ಜೊತೆ ಎಂಗೇಜ್‌ ಆಗಿದ್ದಾರೆ. ಈ ವೇಳೆ ವೈಷ್ಣವಿ ತಾಯಿ, ಭಾನು ಅವರು, “ಈ ಹಿಂದಿನ ಥರ ಅಲ್ಲ ಇದು” ಎಂದು ಹೇಳಿಕೆ ಕೊಟ್ಟಿದ್ದಾರೆ.
 
ಪೂರ್ತಿ ಓದಿ

12:51 PM IST:

ಗ್ರಾಮೀಣ ಭಾರತದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ, ರಾಷ್ಟ್ರೀಯ ಜಾನುವಾರು ಮಿಷನ್, ಮತ್ತು ಸ್ಟಾರ್ಟ್ಅಪ್ ಇಂಡಿಯಾ ಯೋಜನೆಗಳು ಆರ್ಥಿಕ ನೆರವು ಮತ್ತು ತರಬೇತಿಯನ್ನು ಒದಗಿಸುತ್ತವೆ.

ಪೂರ್ತಿ ಓದಿ

12:28 PM IST:

ತಮಿಳುನಾಡಿನ ವೆಲ್ಲೂರಿನಲ್ಲಿ ವಕ್ಫ್ ಮಂಡಳಿಯು ಗ್ರಾಮದ ಜಾಗವನ್ನು ಖಾಲಿ ಮಾಡುವಂತೆ 150 ಕುಟುಂಬಗಳಿಗೆ ನೋಟಿಸ್ ನೀಡಿದೆ. ಇದು ವಿಜಯಪುರದ ಘಟನೆಯನ್ನು ನೆನಪಿಸುತ್ತದೆ, ಅಲ್ಲಿ ವಕ್ಫ್‌ನಿಂದ ರೈತರು ತೊಂದರೆ ಅನುಭವಿಸಿದ್ದರು. ಸರ್ಕಾರ ಮಧ್ಯಪ್ರವೇಶಿಸಿ ರಕ್ಷಣೆ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪೂರ್ತಿ ಓದಿ

12:17 PM IST:

ಭೂ ವ್ಯವಹಾರದ ಹಣ ವರ್ಗಾವಣೆ ಹಗರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ನೀಡಿದ್ದ ಸಮನ್ಸ್‌ಗೆ ಗೈರಾದ ಕಾರಣ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಪೂರ್ತಿ ಓದಿ

12:01 PM IST:

ಮಂಡ್ಯ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಅತ್ಯಾ*ಚಾರ ಪ್ರಕರಣಗಳಲ್ಲಿ ಪೊಲೀಸರು ಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮಂಡ್ಯದಲ್ಲಿ ಆರೋಪಿಗೆ ನ್ಯಾಯಾಂಗದ ಮೂಲಕ ಶಿಕ್ಷೆಯಾದರೆ, ಹುಬ್ಬಳ್ಳಿಯಲ್ಲಿ ಎನ್‌ಕೌಂಟರ್ ಮಾಡಲಾಗಿದೆ. 

ಪೂರ್ತಿ ಓದಿ

12:00 PM IST:

ಬ್ಯೂ ಆರಿಜಿನ್‌ನ ಪೂರ್ಣ ಮಹಿಳಾ ಗಗನಯಾತ್ರಿಗಳ ತಂಡವು ಯಶಸ್ವಿಯಾಗಿ ಬಾಹ್ಯಾಕಾಶ ಯಾತ್ರೆ ಮುಗಿಸಿ ವಾಪಾಸಾಗಿದೆ. ಈ ತಂಡದಲ್ಲಿ ಪಾಪ್‌ ಸಿಂಗರ್‌, ಪತ್ರಕರ್ತರು, ವಿಜ್ಞಾನಿಗಳು ಮತ್ತು ಹೋರಾಟಗಾರ್ತಿಯರು ಸೇರಿದ್ದಾರೆ.

ಪೂರ್ತಿ ಓದಿ

11:54 AM IST:

ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅನುಕೂಲ್‌ ಮಿಶ್ರಾ ಜೊತೆ ಎಂಗೇಜ್‌ ಆಗಿದ್ದಾರೆ. ಅನುಕೂಲ್‌ ಯಾರು? ಎಲ್ಲಿಯವರು ಎಂದು ಅನೇಕರಿಗೆ ಪ್ರಶ್ನೆ ಇರುತ್ತದೆ. ಇದಕ್ಕೀಗ ವೈಷ್ಣವಿ ಅವರೇ ಉತ್ತರ ಕೊಟ್ಟಿದ್ದಾರೆ.

ಪೂರ್ತಿ ಓದಿ

11:43 AM IST:

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ವಕ್ಫ್ ಮಸೂದೆ ವಿರೋಧಿಸಿ ನಡೆದ ಹಿಂಸಾಚಾರದಿಂದ ಸಂತ್ರಸ್ತರಾದವರು ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಮನೆ ಮಠ ಕಳೆದುಕೊಂಡು, ಜೀವ ಉಳಿಸಿಕೊಂಡು ಬಂದಿರುವ ಸಂತ್ರಸ್ತರ ಕಣ್ಣೀರ ಕಥೆಗಳು ಹೇಳತೀರದಾಗಿವೆ.

ಪೂರ್ತಿ ಓದಿ

11:30 AM IST:

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಅಕ್ರಮ ಜೀಪ್ ರೇಸ್ ನಡೆಯುತ್ತಿದ್ದಾಗ ಕಾಡಾನೆಯೊಂದು ದಾಳಿ ಮಾಡಿದೆ. ಅದೃಷ್ಟವಶಾತ್ ಯುವಕನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅರಣ್ಯ ಇಲಾಖೆಯ ಅನುಮತಿ ಪಡೆಯದೆ ರೇಸ್ ಆಯೋಜಿಸಲಾಗಿತ್ತು.

ಪೂರ್ತಿ ಓದಿ

11:29 AM IST:

ಲಖನೌ ವಿರುದ್ಧ ಚೆನ್ನೈ ಗೆದ್ದ ಬೆನ್ನಲ್ಲೇ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದೆ. ಟಾಸ್ ವೇಳೆ ಧೋನಿ ನಿರ್ಧಾರ ಗುಟ್ಟಾಗಿ ಹೇಳಿದ್ದೇಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಪೂರ್ತಿ ಓದಿ

11:19 AM IST:

Tumakuru Railway Station: ತುಮಕೂರು ರೈಲು ನಿಲ್ದಾಣದ ಹೆಸರನ್ನು ಮರುನಾಮಕರಣ ಮಾಡಲು ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. 

ಪೂರ್ತಿ ಓದಿ

11:18 AM IST:

ಲೆನೆವೊ ತನ್ನ ರೋಲೆಬಲ್ ಲ್ಯಾಪ್‌ಟಾಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ, ಇದು 14 ಇಂಚಿನಿಂದ 16.2 ಇಂಚಿಗೆ ಬದಲಾಗುವ ಡಿಸ್‌ಪ್ಲೇ ಹೊಂದಿದೆ. ಇಂಟೆಲ್ ಕೋರ್ i7 ಚಿಪ್, 32GB RAM, ಮತ್ತು 1TB ವರೆಗಿನ SSD ಸ್ಟೋರೇಜ್ ಇದರಲ್ಲಿದೆ.

ಪೂರ್ತಿ ಓದಿ

11:14 AM IST:

ಬಿಜೆಪಿ ಸಂಸದ ರಮೇಶ ಜಿಗಜಿಣಗಿ, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸದಿರುವ ಬಗ್ಗೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಡ ಮುಸ್ಲಿಮರ ಆಸ್ತಿಯನ್ನು ಕಾಂಗ್ರೆಸ್ ನಾಯಕರು ಲಪಟಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೋದಿ ಗಂಡಸು ಇದ್ದಾರೆ, ಕಾಯ್ದೆ ಜಾರಿಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

10:31 AM IST:

ತೆಲಂಗಾಣದಲ್ಲಿ ಆಟವಾಡುತ್ತಾ ಕಾರು ಸೇರಿದ ಇಬ್ಬರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಪೋಷಕರು ಮನೆಯೊಳಗೆ ಮಾತುಕತೆಯಲ್ಲಿ ತೊಡಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಪೂರ್ತಿ ಓದಿ

10:29 AM IST:

ನಟ ರಜತ್ ಅವರ ವಿವಾದಾತ್ಮಕ 'ಮಚ್ಚು ರೀಲ್ಸ್' ವಿಡಿಯೋ ಇನ್ನೂ ಇನ್‌ಸ್ಟಾಗ್ರಾಮ್‌ನಿಂದ ಡಿಲೀಟ್ ಆಗಿಲ್ಲ. ಪೊಲೀಸರು ಜೈಲಿಗೆ ಕಳುಹಿಸಿದರೂ ವಿಡಿಯೋ ತೆಗೆಯದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

ಪೂರ್ತಿ ಓದಿ

9:36 AM IST:

ಪಂಜಾಬ್ ಕಿಂಗ್ಸ್ ಇಂದು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ಕೆಕೆಆರ್ ತಂಡವನ್ನು ಕಟ್ಟಿಹಾಕಲು ಪಂಜಾಬ್ ಬೌಲರ್ ಗಳು ತಂತ್ರ ರೂಪಿಸಲಿದ್ದಾರೆ.

ಪೂರ್ತಿ ಓದಿ

9:30 AM IST:

ಮಧ್ಯಪ್ರದೇಶದ ಜಬಲ್ಪುರದಲ್ಲಿ ಮೇಕೆ ಬಲಿ ನೀಡಲು ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ನಂತರ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಮೇಕೆ ಮಾತ್ರ ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದೆ.

ಪೂರ್ತಿ ಓದಿ

9:27 AM IST:

ಮುಸ್ಲಿಂ ಮದುವೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ, ತಮ್ಮ ಹೇಳಿಕೆಯಿಂದ ಉಂಟಾದ ವಿವಾದದ ಬೆನ್ನಲ್ಲೇ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಹೇಳಿಕೆಗೆ ರಾಯರೆಡ್ಡಿ ಸ್ಪಷ್ಟನೆ ನೀಡುವ ಸಾಧ್ಯತೆಯಿದೆ.

ಪೂರ್ತಿ ಓದಿ

9:02 AM IST:

ಚೆನ್ನೈ ಸೂಪರ್ ಕಿಂಗ್ಸ್ ಲಖನೌ ವಿರುದ್ಧ 5 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಧೋನಿ ಮತ್ತು ಶಿವಂ ದುಬೆ ಅವರ ಅದ್ಭುತ ಆಟ ತಂಡಕ್ಕೆ ಜಯ ತಂದುಕೊಟ್ಟಿತು.

ಪೂರ್ತಿ ಓದಿ

9:02 AM IST:

ಕೊಪ್ಪಳದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಸ್ವಂತ ಖರ್ಚಿನಲ್ಲಿ 24 ವಿದ್ಯಾರ್ಥಿಗಳನ್ನು ವಿಮಾನದಲ್ಲಿ ಹೈದರಾಬಾದ್‌ಗೆ ಕರೆದೊಯ್ಯಲು ಪರೀಕ್ಷೆ ನಡೆಸಿದ್ದಾರೆ. ಓದುವ ಮನೋಭಾವ ಹೆಚ್ಚಿಸಲು ಶಿಕ್ಷಕರು ಈ ನಿರ್ಧಾರ ಕೈಗೊಂಡಿದ್ದಾರೆ.

ಪೂರ್ತಿ ಓದಿ

8:52 AM IST:

ಪಶ್ಚಿಮ ಬಂಗಾಳದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿಂಸಾಚಾರ ಭುಗಿಲೆದ್ದಿದೆ. ಟಿಎಂಸಿ ಸಂಸದರೊಬ್ಬರು ವಕ್ಫ್ ಆಸ್ತಿ ರಕ್ಷಣೆಗಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಜಾರ್ಖಂಡ್ ಸಚಿವರು ಷರಿಯಾ ಕಾನೂನು ಮೊದಲು ಎಂದಿದ್ದಾರೆ.

ಪೂರ್ತಿ ಓದಿ

8:41 AM IST:

ಜಾತಿವಾರು ಗಣತಿ ವರದಿಯಲ್ಲಿ ಒಕ್ಕಲಿಗ ಸಮುದಾಯದ ಅಂಕಿ ಅಂಶಗಳ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್ ಅವರು ಒಕ್ಕಲಿಗ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ವರದಿ ಬಗ್ಗೆ ಚರ್ಚಿಸಿ, ಸರ್ಕಾರದ ನಿಲುವು ನಿರ್ಧರಿಸುವ ಸಾಧ್ಯತೆ ಇದೆ.

ಪೂರ್ತಿ ಓದಿ

8:20 AM IST:

ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾದ ಜಾತಿ ಗಣತಿ ವರದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವೀರಶೈವ-ಲಿಂಗಾಯತರನ್ನು ಪ್ರತ್ಯೇಕಿಸಿ ಗಣತಿ ಮಾಡಿರುವುದಕ್ಕೆ ಅವರು ತಕರಾರು ತೆಗೆದಿದ್ದಾರೆ.

ಪೂರ್ತಿ ಓದಿ

7:57 AM IST:

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬಲವಂತದ ಮತಾಂತರದ ಆರೋಪದ ವಿರುದ್ಧ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿವೆ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಿಷನರಿಗಳು ಹಣದ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಪೂರ್ತಿ ಓದಿ

7:50 AM IST:

ಕೆಂಪು ಸಮುದ್ರದಲ್ಲಿ ಹುತಿ ಬಂಡುಕೋರರ ಹಾವಳಿ ತಡೆಯಲು ಅಮೆರಿಕ ಸಿದ್ಧತೆ ನಡೆಸಿದೆ. ವರದಿಗಳ ಪ್ರಕಾರ, 80,000 ಸೈನಿಕರನ್ನು ಯೆಮೆನ್‌ಗೆ ನಿಯೋಜಿಸಲು ಟ್ರಂಪ್ ಮುಂದಾಗಿದ್ದಾರೆ. ಇದು ಇರಾನ್‌ಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆಯಿದೆ.

ಪೂರ್ತಿ ಓದಿ

7:26 AM IST: