- Home
- Entertainment
- Cine World
- ತಂದೆ-ಗೆಳೆಯ ಅಲ್ಲ ,ಜಾಹ್ನವಿ ಕಪೂರ್‌ಗೆ 4.99 ಕೋಟಿ ರೂ ಲ್ಯಾಂಬೋರ್ಗಿನಿ ಗಿಫ್ಟ್ ಕೊಟ್ಟಿದ್ದು ಯಾರು?
ತಂದೆ-ಗೆಳೆಯ ಅಲ್ಲ ,ಜಾಹ್ನವಿ ಕಪೂರ್‌ಗೆ 4.99 ಕೋಟಿ ರೂ ಲ್ಯಾಂಬೋರ್ಗಿನಿ ಗಿಫ್ಟ್ ಕೊಟ್ಟಿದ್ದು ಯಾರು?
ಜಾಹ್ನವಿ ಕಪೂರ್ ಮನೆಗೆ ಪರ್ಪಲ್ ಬಣ್ಣದ 4.99 ಕೋಟಿ ರೂ ಮೌಲ್ಯದ ಲ್ಯಾಂಬೋರ್ಗಿನಿ ಕಾರು ಉಡುಗೊರೆಯಾಗಿ ಬಂದಿದೆ. ಇದರ ಜೊತೆಗೆ ದೊಡ್ಡ ಗಿಫ್ಟ್ ಬಾಕ್ಸ್ ಕೂಡ ಕಳುಹಿಸಲಾಗಿದೆ. ಈ ಕಾರನ್ನು ತಂದೆ ಬೋನಿ ಕಪೂರ್ ಅಥವಾ ಗೆಳೆಯ ಶಿಖರ್ ಪಹಾರಿಯಾ ಗಿಫ್ಟ್ ಕೊಟ್ಟಿಲ್ಲ, ಹಾಗಾದರೆ ಜಾಹ್ನವಿ ಕಪೂರ್‌ಗೆ ಈ ದುಬಾರಿ ಉಡುಗೊರೆ ಕೊಟ್ಟಿದ್ದು ಯಾರು?

ನಟಿ ಜಾಹ್ನವಿ ಕಪೂರ್ ಬಾಲಿವುಡ್‌ನಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ಭಾರಿ ಜನಪ್ರಿಯರಾಗಿದ್ದಾರೆ. ಜಾಹ್ನವಿ ಕಪೂರ್ ಬಳಿ ಹಲವು ಕಾರುಗಳಿವೆ. ಆದರೆ ಜಾಹ್ನವಿಗೆ ಲ್ಯಾಂಬೋರ್ಗಿನಿ ಕಾರು ತುಂಬಾ ಇಷ್ಟ. ಖರೀದಿ ಮಾತ್ರ ಸಾಧ್ಯವಾಗಿರಲಿಲ್ಲ. ಇದೀಗ ಜಾಹ್ನವ ಕಪೂರ್‌ಗೆ ಬರೋಬ್ಬರಿ 4.99 ಕೋಟಿ ರೂಪಾಯಿ ಮೌಲ್ಯದ ಲ್ಯಾಂಬೋರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದ. ಈ ಕಾರನ್ನು ತಂದೆ ಬೋನಿ ಕಪೂರ್ ಆಗಲಿ, ಗೆಳೆಯ ಶಿಖರ್ ಪಹಾರಿಯಾ ಆಗಲಿ ಉಡುಗೊರೆ ನೀಡಿಲ್ಲ. ಹಾಗಾದರೆ ಜಾಹ್ನವಿ ಕಪೂರ್‌ಗೆ ಕಾರು ಉಡುಗೊರೆ ಕೊಟ್ಟಿದ್ದು ಯಾರು? ಅನ್ನು ಕುತೂಹಲಕ್ಕೂ ಉತ್ತರ ಸಿಕ್ಕಿದೆ.
4.99 ಕೋಟಿ ರೂಪಾಯಿ ಎಕ್ಸ್ ಶೋ ಮೌಲ್ಯದ ಈ ದುಬಾರಿ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದು ಜಾಹ್ನವಿ ಕಪೂರ್ ಆತ್ಮೀಯ ಹೆಳತಿ ಅನನ್ಯಾ ಬಿರ್ಲಾ. ಗಾಯಕಿ ಹಾಗೂ ಉದ್ಯಮಿಯಾಗಿರುವ ಅನನ್ಯಾ ಬಿರ್ಲಾ ಸಾವಿರಾರು ಕೋಟಿ ರೂಪಾಯಿ ಆಸ್ತಿಯ ಒಡತಿ ಕಾರಣ ಈ ಅನನ್ಯಾ ಬಿರ್ಲಾ ಭಾರತದ ಶ್ರೀಮಂತ ಉದ್ಯಮಿ ಕುಮಾರ್ ಮಂಗಲಂ ಮತ್ತು ನೀರ್ಜಾ ಬಿರ್ಲಾ ಅವರ ಪುತ್ರಿ. ಕಪೂರ್‌ಗೆ ಕಾರಿನ ಜೊತೆಗೆ ದೊಡ್ಡ ಗಿಫ್ಟ್ ಕೂಡ ಕೊಟ್ಟಿದ್ದಾರೆ.
ಜಾನ್ವಿ ಮತ್ತು ಅನನ್ಯಾ ಹಲವು ವರ್ಷಗಳಿಂದ ಸ್ನೇಹಿತರು. ಅನನ್ಯಾ ಕೃತಜ್ಞತೆ ಸಲ್ಲಿಸಲು ಈ ಗಿಫ್ಟ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರಣ ಜಾನ್ವಿ ಕಪೂರ್, ಉದ್ಯಮಿ ಅನನ್ಯಾ ಅವರ ಮೇಕಪ್ ಬ್ರಾಂಡ್‌ನ ರಾಯಭಾರಿಯಾಗಲಿದ್ದಾರೆ. ಸಂಭಾವನೆ ರೂಪದಲ್ಲಿ ಒಂದಷ್ಟು ಕೋಟಿ ರೂಪಾಯಿ ಮೊತ್ತವನ್ನು ಜಾಹ್ನವಿಗೆ ನೀಡಲಾಗಿದೆ. ಇದರ ಜೊತೆಗೆ ಕಾರು ಕೂಡ ಗಿಫ್ಟ್ ಆಗಿ ನೀಡಿದ್ದಾರೆ.
ಅನನ್ಯಾ ಬಿರ್ಲಾ 2016 ರಲ್ಲಿ ಸಂಗೀತ ವೃತ್ತಿಜೀವನ ಪ್ರಾರಂಭಿಸಿದರು. ಈಗ ಸೌಂದರ್ಯ ಉದ್ಯಮದಲ್ಲಿ ಹೊಸ ಪ್ರಯತ್ನ ಮಾಡುತ್ತಿದ್ದಾರೆ. ಅವರ ಈ ನಡೆ ಎಲ್ಲರಿಗೂ ಇಷ್ಟವಾಗಿದೆ. ಜೊತೆಗೆ ತಂದೆಯ ಉದ್ಯಮ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಇದೀಗ ಅವರ ಮೇಕಅಪ್ ಬ್ರ್ಯಾಂಡ್ ಮೂಲಕ ಉದ್ಯಮ ವಿಸ್ತರಿಸುತ್ತಿದ್ದಾರೆ.