ಮಷಿನ್ ಮೇಲೆ ಮಲಗಿಸಿ ಗಗನಸಖಿಯರಿಗೆ ಮಾಡ್ತಿರೋದೇನು? ವೈರಲ್ ವಿಡಿಯೋ ನೋಡಿ ನೆಟ್ಟಿಗರು ಶಾಕ್!
ಇಲ್ಲೊಂದು ಮಷಿನ್ ಮೇಲೆ ಗಗನಸಖಿಯರನ್ನು ಮಲಗಿಸಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿ ಶಾಕ್ಗೊಂಡಿರುವ ನೆಟ್ಟಿಗರು ಹೇಳ್ತಿರೋದೇನು? ನಿಜವಾಗಿ ಆಗಿದ್ದೇನು?

ವಿಮಾನದಲ್ಲಿರುವ ಪರಿಚಾರಿಕೆಯರು ಅರ್ಥಾತ್ ಗಗನಸಖಿಯರಿಗೆ ಅವರದ್ದೇ ಆದ ವಿಶೇಷತೆ ಇದೆ. ಗಗನಸಖಿಯರಾಗುವುದು ಸುಲಭದ ಮಾತು ಕೂಡ ಅಲ್ಲ. ಅವರಿಗೂ ಹಲವಾರು ರೀತಿಯ ಟ್ರೇನಿಂಗ್ಗಳನ್ನು ನೀಡಲಾಗುತ್ತದೆ. ಆಹಾ! ದಿನನಿತ್ಯವೂ ವಿಮಾನದಲ್ಲಿಯೇ ಇರುತ್ತಾರೆ, ಏನು ಸುಖ ಎಂದು ಒಮ್ಮೆಯೂ ವಿಮಾನ ಹತ್ತದವರು ಅಂದುಕೊಳ್ಳುತ್ತಾರೆ. ಆದರೆ ಪ್ರತಿದಿನವೂ ವಿಮಾನದಲ್ಲಿ ಪ್ರಯಾಣಿಸುವ ಅವರ ಕಷ್ಟ ಅವರಿಗೆ ಮಾತ್ರ ಗೊತ್ತು. ನೋಡಲು ಸುಂದರವಾಗಿದ್ದರೆ ಸಾಕು, ಈ ಉದ್ಯೋಗ ಸುಲಭದಲ್ಲಿ ಸಿಕ್ಕಿಬಿಡುತ್ತದೆ ಎಂದುಕೊಳ್ಳುವವರೇ ಹೆಚ್ಚು. ಆದರೆ ಈ ಹುದ್ದೆ ಏರಲು ಸಾಕಷ್ಟು ಅರ್ಹತೆಗಳೂ ಇರಬೇಕು. ಇದು 9-5 ಜಾಬ್ ಅಲ್ಲ. ದಿನದ 24 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ. ಯಾವುದೇ ಪರಿಸ್ಥಿತಿಯಲ್ಲಿ ಶಾಂತ ಮತ್ತು ತಾಳ್ಮೆ ತುಂಬಾ ಅಗತ್ಯವಾಗಿರಬೇಕು. ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳುವ ಅಪಾಯವೂ ಇವರ ಬೆನ್ನಹಿಂದೆಯೇ ಇರುತ್ತದೆ. ಮಾತ್ರವಲ್ಲದೇ ವಿಮಾನದಲ್ಲಿ ಏನಾದರೂ ಸಮಸ್ಯೆಯಾದಾಗ ಪ್ರಯಾಣಿಕರ ಪ್ರಾಣ ಕಾಪಾಡುವ ಜವಾಬ್ದಾರಿ ಕೂಡ ಗಗನಸಖಿಯರ ಮೇಲೆ ಇರುತ್ತದೆ. ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಪ್ರಯಾಣಿಕರ ಪ್ರಾಣ ಕಾಪಾಡಿದ ಗಗನಸಖಿಯರ ಉದಾಹರಣೆಗಳೂ ಸಾಕಷ್ಟಿವೆ.
ವಿಮಾನದಲ್ಲಿ ಬರುವ ಪ್ರಯಾಣಿಕರು ಎಂದರೆ ಬಸ್ನಲ್ಲಿ ಹೋಗುವ ಪ್ರಯಾಣಿಕರಂತೆ ಅಲ್ಲ. ಅಂದರೆ, ಬಸ್ನಲ್ಲಿ ಪ್ರಯಾಣಿಕರು ಮಾಡುವ ಕಿತಾಪತಿಗಳಿಗೆ ಕಂಡಕ್ಟರ್ಗಳು ತಿರುಗೇಟು ನೀಡಬಹುದು, ಬಾಯಿ ಜೋರು ಮಾಡಬಹುದು. ಆದರೆ ವಿಮಾನಗಳಲ್ಲಿ ಹಾಗಲ್ಲ. ಪ್ರಯಾಣಿಕರು ಏನೇ ಮಾಡಿದರೂ ಗಗನಸಖಿಯರು ಅದನ್ನೆಲ್ಲಾ ಸಹಿಸಿಕೊಂಡು ತಾಳ್ಮೆಯಿಂದ ವರ್ತಿಸಬೇಕು. ಸುಂದರ ಗಗನಸಖಿಯರನ್ನು ಸುಖಾಸುಮ್ಮನೇ ಪದೇ ಪದೇ ಕರೆಯುವ ಪ್ರಯಾಣಿಕರೂ ಇರುತ್ತಾರೆ. ಪ್ರತಿಸಲವೂ ಅದೇ ನಗುಮೊಗದಿಂದ ಪ್ರಯಾಣಿಕರ ಬಳಿ ಹೋಗಿ ಅವರ ಸೇವೆಗೆ ಸಿದ್ಧರಾಗಬೇಕು. ಹೋಟೆಲ್ಗಳ ಸಪ್ಲೈಯರ್ಗಳನ್ನು ಪದೇ ಪದೇ ಕರೆದು ಹಿಂಸಿಸಿದರೆ ಅವರಿಗೆ ಕೋಪ ಮಾಡಿಕೊಳ್ಳುವ ಅಧಿಕಾರ ಇರಬಹುದು. ಆದರೆ ಗಗನಸಖಿಯರು ಹಾಗಲ್ಲ. ಪ್ರಯಾಣಿಕರು ಎಷ್ಟೇ ಉಪಟಳ ನೀಡಿದರೂ, ಪದೇ ಪದೇ ಊಟ ಮತ್ತು ಉಪಹಾರಕ್ಕಾಗಿ ಬೇಡಿಕೆ ಇಟ್ಟರೂ ಆ ವಿಮಾನ ಸಂಸ್ಥೆಗಳ ನಿಯಮಕ್ಕೆ ಅನುಸಾರವಾಗಿ ಅಷ್ಟೇ ಕಾಳಜಿಯಿಂದ ಅದನ್ನು ಪ್ರಯಾಣಿಕರಿಗೆ ಪೂರೈಸಬೇಕು.
ಮದ್ವೆಯಾದ ಖುಷಿಯಲ್ಲಿ ಕಾಲೆತ್ತಲು ಹೋದ ಶ್ರೇಷ್ಠಾಳಿಗೆ ಆಗಬಾರದ್ದು ಆಗೋಯ್ತು! ಛೇ... ವಿಡಿಯೋನೂ ವೈರಲ್ ಆಯ್ತು
ಇದೇ ಕಾರಣಕ್ಕೆ, ಗಗನಸಖಿಯಾಗುವವರು ಹಲವಾರು ಸುತ್ತಿನ ಸಂದರ್ಶನಗಳು ಮತ್ತು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಅವರಿಗೆ ಅಗತ್ಯವಾದ ವಿಶ್ರಾಂತಿಯ ಅಗತ್ಯವೂ ಇರುತ್ತದೆ. ಹಾಗಿದ್ದರೆ ಗಗನಸಖಿಯರಿಗೆ ಹೇಗೆ ವಿಶ್ರಾಂತಿ ನೀಡಲಾಗುತ್ತದೆ ಎನ್ನುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇರುವುದು ಗಗನಸಖಿಯರಿಗೆ ವಿಶ್ರಾಂತಿಗಾಗಿ ಇರುವ ಮಷಿನ್ಗಳನ್ನು ಹೇಗೆ ಬಳಸಲಾಗುತ್ತದೆ ಎನ್ನುವುದು. ಆದರೆ ವೈರಲ್ ಆಗಿರೊ ವಿಡಿಯೋದಲ್ಲಿ ಇದು ಕನ್ಯತ್ವ ಪರೀಕ್ಷೆ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಅದರ ಪಕ್ಕದಲ್ಲಿಯೇ, ಈ ವಿಡಿಯೋ ಏನು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇದ್ದರೂ, ನೆಟ್ಟಿಗರು ಗೊತ್ತಲ್ಲ! ಎರಡು ಪ್ಯಾರಾಗಳನ್ನೂ ಓದುವಷ್ಟು ಪುರುಸೊತ್ತು ಇಲ್ಲ. ಫೋಟೋದ ಮೇಲೆ ಹಾಕಿರುವ ಕನ್ಯತ್ವ ಪರೀಕ್ಷೆಯನ್ನೇ ನಿಜ ಎಂದುಕೊಂಡು ಮನಸ್ಸಿಗೆ ಬಂದರೆ ಕಮೆಂಟ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಈ ವಿಡಿಯೋ ಇಷ್ಟೊಂದು ವೈರಲ್ ಕೂಡ ಆಗಿದೆ.
ಹಾಗಿದ್ದರೆ ನಿಜಕ್ಕೂ ಇದು ಏನು ಎಂದು ನೋಡುವುದಾದರೆ, ಈ ಕ್ಲಿಪ್‌ನಲ್ಲಿ ವಿಮಾನ ಸಿಬ್ಬಂದಿ ಹಾಗೂ ಗಗನಸಖಿಯರಿಗೆ ತರಬೇತಿ ಸಮಯದಲ್ಲಿ ಅವರ ಆಯಾಸ ಪರಿಹಾರಕ್ಕಾಗಿ ಈ ಮಷಿನ್ ಬಳಸಲಾಗುತ್ತದೆ. ಇದು ಗುರುತ್ವಾಕರ್ಷಣ ಖುರ್ಚಿಯಾಗಿದೆ. ಈ ಖುರ್ಚಿಯ ಮೇಲೆ ಸಿಬ್ಬಂದಿಯನ್ನು ಮಲಗಿಸಲಾಗುತ್ತದೆ. ಇದರಿಂದ ಹಲವಾರು ಪ್ರಯೋಜನಗಳು ಇವೆ. ಅವುಗಳಲ್ಲಿ ಮುಖ್ಯವಾದದ್ದು, ಸ್ನಾಯು ಒತ್ತಡವನ್ನು ನಿವಾರಿಸುವುದು- ಗುರುತ್ವಾಕರ್ಷಣೆಯ ಖುರ್ಚಿಗಳಲ್ಲಿ ಕಾಲುಗಳು ಮತ್ತು ಎದೆಯ ಬೆಂಬಲದೊಂದಿಗೆ ಮುಂದಕ್ಕೆ ಹೋಗಬಹುದಾಗಿದೆ. ಇದು ಸ್ನಾಯುಗಳ ಒತ್ತಡವನ್ನು ನಿವಾರಿಸುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ. ಇದು ದೀರ್ಘಕಾಲದವರೆಗೆ ನಿಂತು ಅಥವಾ ಚಲಿಸುವ ಸಿಬ್ಬಂದಿ ಸದಸ್ಯರಿಗೆ ವಿಶೇಷವಾಗಿ ಉಪಯುಕ್ತವಾಗಿದೆ. ಇನ್ನೊಂದು, ಗಗನಸಖಿಯರಿಗೆ ಉತ್ತಮ ಭಂಗಿ ಮತ್ತು ಕೋರ್ ಬಲಪಡಿಸಿಕೊಳ್ಳುವುದು ಅತ್ಯಗತ್ಯ. ಇದನ್ನು ಈ ಸಾಧನ ಮಾಡುತ್ತದೆ. ಸುದೀರ್ಘ ಪ್ರಯಾಣಿಸುವ ಸಮಯದಲ್ಲಿ ಸಿಬ್ಬಂದಿಗೆ ಈ ಖುರ್ಚಿಗಳು ಅವರ ರಕ್ತ ಪರಿಚಲನೆ ಸುಧಾರಿಸಲು ಮತ್ತು ಬೆನ್ನಿನ ಒತ್ತಡವನ್ನು ನಿವಾರಿಸಲು ಸಹಕಾರಿಯಾಗಿದೆ. ಹಾಗಿದ್ದರೆ ನಿಜಕ್ಕೂ ಇದು ಏನೆಂದು ಗೊತ್ತಾಯಿತಲ್ಲಾ? ಇನ್ನೇನಾದ್ರೂ ಇಂಥ ವಿಡಿಯೋಗಳು ಬಂದಾಗ ಪಕ್ಕದಲ್ಲಿ ಇರೋ ಅದರ ವಿಷಯಗಳನ್ನು ತಿಳಿದು ಕಮೆಂಟ್ ಮಾಡಲು ಮರೆಯಬೇಡಿ!
ಕಿಸ್ ಮಾಡಲು ಹೋದ್ರೆ ಅಲ್ಲಿ ಮುಟ್ಬೇಡಿ, ಇಲ್ಲಿ ಮುಟ್ಬೇಡಿ ಅಂತಾರೆ! ದುಃಖ ತೋಡಿಕೊಂಡ ಕಿಚ್ಚ ಸುದೀಪ್