ಇರಾನಿಗೆ ಸಹಾಯ ಮಾಡಿತಾ ಟ್ರಂಪ್ ಸಸ್ಪೆನ್ಸ್ ಗೇಮ್? ದೊಡ್ಡಣ್ಣ ಕೈಬಿಟ್ಟರೆ ಏನು ಮಾಡಲಿದೆ ನೆತನ್ಯಾಹು ಪಡೆ?

ಇಡೀ ಜಗತ್ತಿನ ಮೇಲೇ ತನ್ನ ಪ್ರಭಾವ ಬೀರೋದಂತೂ ಸತ್ಯ.. ಅದೇನಾಗಿರಲಿದೆ? ಈ ಕಡೆ ಅಮೆರಿಕಾ ಅಧ್ಯಕ್ಷರು, ಅದೇನು ಮಾತಾಡ್ತಾರೋ ಏನೋ ಅನ್ನೋ ಕುತೂಹಲ ಕೌತುಕ ಕಾಡ್ತಾ ಇದ್ರೆ, ಆ ಇರಾನ್ನಲ್ಲಿ ಬೇರೆಯದೇ ರೀತಿಯ ಆಟ ಶುರುವಾಗಿದೆ.

Share this Video
  • FB
  • Linkdin
  • Whatsapp

ಬರೋಬ್ಬರಿ 32 ದಿನಗಳ ಹಿಂದೆ ಶುರುವಾದ ರಣಭೀಕರ ಯುದ್ಧ, ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ ಅನ್ನುಸ್ತಿದೆ.. ಅದಕ್ಕೆ ಕಾರಣ, ಅಮೆರಿಕಾ ಅಧ್ಯಕ್ಷರ ಒಂದು ಸಂದೇಶ.. ನಾಳೆ ಬರ್ತೀನಿ, ಬಂದು ಅಮೆರಿಕನ್ನರಿಗೆ ಒಂದು ಸಂದೇಶ ಹೇಳ್ತೀನಿ ಅಂತ ಸೂಚನೆ ಕೊಟ್ಟಿದಾರೆ. ಆ ಸಂದೇಶ ಏನು ಅನ್ನೋದೇ ಜಗತ್ತನ್ನ ಕಾಡ್ತಾ ಇರೋ ಬಿಲಿಯನ್ ಡಾಲರ್ ಪ್ರಶ್ನೆ.. ಈಗಾಗ್ಲೇ ಯುದ್ಧವನ್ನೇ ಗೆದ್ದ ಹಾಗೆ ಮೆರೀತಿರೋ ಟ್ರಂಪ್, ವಿಜಯಘೋಷ ಮಾಡ್ತಾರೋ, ಅಥವಾ ಗೆಲ್ಲಲೇಬೇಕು ಅಂತ ಹಠಕ್ಕೆ ಬಿದ್ದು, ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಬರೀತಾರೋ ಗೊತ್ತಿಲ್ಲ.. ಆದ್ರೆ ಅದರ ಪರಿಣಾಮ, ಪ್ರಭಾವ, ಜಗತ್ತಿನ ಮೇಲೆ ತನ್ನ ಆಟ ಶುರುಮಾಡಿದೆ. ಈ ಕುತೂಹಲಕ್ಕೆ ಉತ್ತರ ಸಿಗೋಕೆ ಕೆಲವೇ ಗಂಟೆಗಳಷ್ಟೇ ಬಾಕಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದ್ರೆ ಆ ಉತ್ತರ, ಇಡೀ ಜಗತ್ತಿನ ಮೇಲೇ ತನ್ನ ಪ್ರಭಾವ ಬೀರೋದಂತೂ ಸತ್ಯ.. ಅದೇನಾಗಿರಲಿದೆ? ಈ ಕಡೆ ಅಮೆರಿಕಾ ಅಧ್ಯಕ್ಷರು, ಅದೇನು ಮಾತಾಡ್ತಾರೋ ಏನೋ ಅನ್ನೋ ಕುತೂಹಲ ಕೌತುಕ ಕಾಡ್ತಾ ಇದ್ರೆ, ಆ ಇರಾನ್ನಲ್ಲಿ ಬೇರೆಯದೇ ರೀತಿಯ ಆಟ ಶುರುವಾಗಿದೆ. ಅಷ್ಟಕ್ಕೂ ಇಷ್ಟೆಲ್ಲಾ ಕುತೂಹಲ ಮೂಡಿಸಿರೋ ಟ್ರಂಪ್ ಭಾಷಣ, ಅದೇನು ಪರಿಣಾಮ ಬೀರುತ್ತೆ? ಅಸಲಿಗೆ ಟ್ರಂಪ್ ಉದ್ದೇಶ ಇರೋದು, ಯುದ್ಧ ಗೆದ್ದೆ ಅಂತ ಘೋಷಿಸಿಕೊಳ್ಳೋದೋ, ಅಥವಾ ಯಾರೂ ಊಹಿಸದ ಟ್ವಿಸ್ಟ್ ಏನಾದ್ರೂ ಇದೆಯೋ? ಡೊನಾಲ್ಡ್ ಟ್ರಂಪ್, ಇನ್ನೇನು ಕೆಲವೇ ಗಂಟೆಗಳಲ್ಲಿ ಭಾಷಣ ಮಾಡ್ತೀನಿ ಅಂತ ಹೇಳಿದಾರೆ.. ಅವರು ಮಾತಾಡಿದ ನಂತರ ಏನಾಗಬಹುದು? ಆ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Related Video