
ಸೋಲದ ಸಿಂಹ ಇರಾನ್, ದಿಕ್ಕು ತಪ್ಪಿದ ದೊಡ್ಡಣ್ಣನ ಸೈನ್ಯ; ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿದೆ ಅಮೆರಿಕದ ಘೋರ ವೈಫಲ್ಯ
ವಿಶ್ವದ ದೊಡ್ಡಣ್ಣ ಅಮೆರಿಕ ಅಜೇಯ ಎಂಬುದು ಕೇವಲ ಭ್ರಮೆ. ವಿಯೆಟ್ನಾಂನಿಂದ ಅಫ್ಘಾನಿಸ್ತಾನದವರೆಗೆ, ಅಮೆರಿಕವು ಹಲವಾರು ಯುದ್ಧಗಳಲ್ಲಿ ಸೋತು ಸುಣ್ಣವಾಗಿದೆ. ಈ ಲೇಖನವು ಅಮೆರಿಕದ ಸೈನ್ಯದ ಘೋರ ವೈಫಲ್ಯಗಳು ಮತ್ತು ಅದರ ರಕ್ತಸಿಕ್ತ ಇತಿಹಾಸದ ಕರಾಳ ಸತ್ಯಗಳನ್ನು ವಿವರಿಸುತ್ತದೆ.
ವಿಶ್ವದ ದೊಡ್ಡಣ್ಣ ಅಮೆರಿಕ ಅಖಾಡಕ್ಕಿಳಿದ್ರೆ ಎದುರಾಳಿ ಧೂಳೀಪಟವಾಗೋದು ಖಚಿತ ಅನ್ನೋ ಮಾತು ದಶಕಗಳಿಂದಲೂ ಇದೆ. ಆದರೆ, ಇತಿಹಾಸದ ರಕ್ತಸಿಕ್ತ ಪುಟಗಳನ್ನು ತಿರುವಿ ಹಾಕಿದಾಗ ಕಾಣುವ ಚಿತ್ರಣವೇ ಬೇರೆ. ಜಪಾನ್ ಮೇಲೆ ಅಣುಬಾಂಬ್ ಹಾಕಿ ಅಜೇಯ ಎನಿಸಿಕೊಂಡ ಅಮೆರಿಕ, ಅಲ್ಲಿಂದಾಚೆಗೆ ಅದೆಷ್ಟು ಯುದ್ಧಗಳಲ್ಲಿ ಸೋತು ಸುಣ್ಣವಾಗಿದೆ ಗೊತ್ತಾ.? ವಿಯೆಟ್ನಾಂನ ದಟ್ಟ ಅರಣ್ಯಗಳಿಂದ ಅಫ್ಘಾನಿಸ್ತಾನದ ಗುಡ್ಡಗಾಡುಗಳವರೆಗೆ, ಶಕ್ತಿಶಾಲಿ ಸೈನ್ಯವಿದ್ದರೂ ಅಮೆರಿಕ ಬೆನ್ನು ತೋರಿಸಿ ಓಡಿದ್ದು ಏಕೆ..? ಡಾಲರ್.. ಡಾಲರ್ ಹಣ ಸುರಿದರೂ ದೊಡ್ಡಣ್ಣನ ಲೆಕ್ಕಾಚಾರ ಉಲ್ಟಾ ಹೊಡೆಯುತ್ತಿರೋದ್ಯಾಕೆ..? ಅಮೆರಿಕದ ಅಸಲಿ ಪವರ್ ಮತ್ತು ಫಜೀತಿಯ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.
Add Asianetnews Kannada as a Preferred Source
