ಇರಾನ್-ಅಮೆರಿಕ ಶತ್ರುಗಳು ಅಲ್ಲ, ಯುರೋಪ್ ಅಥವಾ ನೆರೆಹೊರೆ ರಾಷ್ಟ್ರಗಳ ಮೇಲೆ ದ್ವೇಷವಿಲ್ಲ: ಇರಾನ್ ಅಧ್ಯಕ್ಷ ಪತ್ರ

ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಅಮೆರಿಕದ ಜನರಿಗೆ ಪತ್ರ ಬರೆದಿದ್ದು, ಇರಾನ್ ಎಂದಿಗೂ ಯುದ್ಧವನ್ನು ಆರಂಭಿಸಿಲ್ಲ ಮತ್ತು ಕೇವಲ ಆತ್ಮರಕ್ಷಣೆಗಾಗಿ ಹೋರಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ದೇಶದ ಮೇಲೆ ದಾಳಿ ಮಾಡಿದವರನ್ನು ಧೈರ್ಯದಿಂದ ಹಿಮ್ಮೆಟ್ಟಿಸಲಾಗಿದೆ ಎಂದಿದ್ದಾರೆ.

Share this Video
  • FB
  • Linkdin
  • Whatsapp

ಇರಾನ್‌ನ ಜನರಿಗೆ ಅಮೆರಿಕ, ಯುರೋಪ್ ಅಥವಾ ನೆರೆಹೊರೆಯ ದೇಶಗಳ ಜನರ ಮೇಲೆ ಯಾವುದೇ ದ್ವೇಷವಿಲ್ಲ. ತಮ್ಮ ದೀರ್ಘ ಇತಿಹಾಸದಲ್ಲಿ ವಿದೇಶಿ ಹಸ್ತಕ್ಷೇಪಗಳನ್ನು ಎದುರಿಸಿದ್ದರೂ, ಈಗ ಜಾಗತಿಕ ಮಟ್ಟದಲ್ಲಿ ಇರಾನ್‌ನ್ನು ಚಿತ್ರಿಸುವ ರೀತಿ ಅಚ್ಚರಿಯನ್ನುಂಟುಮಾಡಿದೆ ಎಂದಿದ್ದಾರೆ. ಅಮೆರಿಕದ ಜನರಿಗೆ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಪತ್ರ ಬರೆದು ಮಧ್ಯಪ್ರಾಚ್ಯ ಸಂಘರ್ಷ. ಇರಾನ್ ಎಂದಿಗೂ ಯುದ್ಧವನ್ನು ಮೊದಲು ಆರಂಭಿಸಿಲ್ಲ. ದಾಳಿಕೋರರನ್ನ ಇರಾನ್ ಸೇನೆಯೂ ಹಿಮ್ಮೆಟ್ಟಿಸಿದೆ ಅಷ್ಟೇ’ ಎಂದು ಅಮೆರಿಕಕ್ಕೆ ಇರಾನ್ ಅಧ್ಯಕ್ಷ ನಾಲ್ಕು ಪುಟಗಳ ಪತ್ರ ಬರೆದಿದ್ದು ಮಾತುಕತೆ ಸಿದ್ಧ ಎಂಬರ್ಥದಲ್ಲಿ ಇರಾನ್ ಪತ್ರವಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇತ್ತೀಚೆಗೆ ಇದೇ ನೆಲೆಗಳಿಂದ ಅಮೆರಿಕ ನಡೆಸಿದ ಆಕ್ರಮಣಗಳು ಮಿಲಿಟರಿ ಉಪಸ್ಥಿತಿ ಎಷ್ಟು ಅಪಾಯಕಾರಿ ಎಂದು ತೋರಿಸಿದೆ, ನಮ್ಮ ಮೇಲೆ ದಾಳಿ ಮಾಡಿದವರನ್ನ ಧೈರ್ಯದಿಂದ ಹಿಮ್ಮೆಟ್ಟಿಸುತ್ತೇವೆ. ಇರಾನ್ ಕಾನೂನು ಬದ್ಧ ಆತ್ಮರಕ್ಷಣೆಗಾಗಿ ಹೋರಾಟ ಮಾಡ್ತಿದೆ.ನಾವು ಯುದ್ಧ ಮಾಡುತ್ತಿಲ್ಲ... ಇರಾನ್-ಅಮೆರಿಕ ಶತ್ರುಗಳು ಅಲ್ಲ. ಈ ಯುದ್ಧ ಅಮೆರಿಕದ ಜನರ ಯಾವ ಹಿತಾಸಕ್ತಿ ಈಡೇರುತ್ತಿವೆ? ಇರಾನ್‌ನಿಂದ ಅಂತಹ ಯಾವುದೇ ಭೌತಿಕ ಬೆದರಿಕೆ ಇತ್ತೇ? ಇತಿಹಾಸದಲ್ಲಿ ಇರಾನ್ ಎಷ್ಟೋ ಆಕ್ರಮಣಕಾರರನ್ನು ಕಂಡಿದೆ. ಅವರೆಲ್ಲರೂ ಈಗ ಇತಿಹಾಸದ ಕಸದ ಬುಟ್ಟಿಗೆ ಸೇರಿದ್ದಾರೆ..! ಇರಾನ್ ಜನರು ಇಂದಿಗೂ ಘನತೆಯಿಂದ ಬದುಕುತ್ತಿದ್ದಾರೆ.

Related Video