ವರ್ಕ್ ಫ್ರಮ್ ಹೋಮ್ ಬೇಕೇ ಬೇಕು ಎಂದು ಉದ್ಯೋಗಿಗಳು ಪಟ್ಟು ಹಿಡಿದಿದ್ದಾರೆ. ಸರಿ ಎಂದ ಬಾಸ್, ಉದ್ಯೋಗಿಗಳ ಲ್ಯಾಪ್‌ಟಾಪ್‌ನಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ. ಇಷ್ಟೇ ನೋಡಿ ಕೋಲಾಹಲ ಸೃಷ್ಟಿಯಾಗಿದೆ. 23 ಮಂದಿ ರಾಜೀನಾಮೆ ನೀಡಿದ್ದಾರೆ.

ಟೆಕ್ಸಾಸ್ (ಸೆ.14) ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ಹಲವು ಕಂಪನಿಗಳು ತೆಗೆದು ಹಾಕಿದೆ. ಕಡ್ಡಾಯವಾಗಿ ಕಚೇರಿಗೆ ಹಾಜರಾಗಲು ಸೂಚಿಸಿದೆ. ಇದರ ನಡುವೆಯು ಕೆಲ ಕಂಪನಿಗಳು ಉದ್ಯೋಗಿಗಳ ಮನವಿ ಮೇರೆಗೆ ವರ್ಕ್ ಫ್ರಮ್ ಹೋಮ್ ನೀಡಿದೆ. ಹೀಗೆ ಉದ್ಯೋಗಿಗಳ ಮನವಿಗೆ ಒಕೆ ಎಂದ ಬಾಸ್, ವರ್ಕ್ ಫ್ರಮ್ ಹೋಮ್‌ಗೆ ಅವಕಾಶ ಮಾಡಿದ್ದಾರೆ. ಆದರೆ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳ ಲ್ಯಾಪ್‌ಟಾಪ್‌ನಲ್ಲಿ ಕ್ಯಾಮೆರಾ ಅಳವಡಿಸಿ ನೀಡಿದ್ದಾರೆ. ಇಷ್ಟೇ ನೋಡಿ ಕೋಲಾಹಲ ಸೃಷ್ಟಿಯಾಗಿದೆ. ಒಂದೇ ವಾರದಲ್ಲಿ 23 ಮಂದಿ ರಾಜೀನಾಮೆ ನೀಡಿದ ಘಟನೆ ಯುಎಸ್‌ನಲ್ಲಿ ನಡೆದಿದೆ.

ಮನೆಯಿಂದ ಕೆಲಸ ಮಾಡೋ ಉದ್ಯೋಗಿಗಳಿಗೆ ಕ್ಯಾಮೆರಾ ಕಣ್ಗಾವಲು

ಅಮೆರಿಕದ ಬಿಲೇನಿಯರ್ ಅಟಾರ್ನಿ ಜಾನ್ ಮಾರ್ಗನ್ ತನ್ನ ಕಂಪನಿಯ ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡುವಂತೆ ಆದೇಶಿಸಿದ್ದಾರೆ. ಆದರೆ ಕೆಲ ಉದ್ಯೋಗಿಗಳು ತಮಗೆ ಕಚೇರಿಗೆ ಹಾಜರಾಗಲು ಸಾಧ್ಯವಾಗಲ್ಲ ಎಂದು ಮನವಿ ಮಾಡಿದ್ದಾರೆ. ಸರಿ ಎಂದ ಬಾಸ್ ನೀವು ಮನೆಯಿಂದ ಮಾಡುವಾಗ ಕಂಪನಿ ಮಾನಿಟರ್ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕೋಲಾಹಲ ಸೃಷ್ಟಿಸಿದ ಕ್ಯಾಮೆರಾ

ಮನೆಯಿಂದ ಕೆಲಸ ಮಾಡುತ್ತೇವೆ ಎಂದು ತೆರಳಿದ ಉದ್ಯೋಗಿಗಳು ಕೆಲಸ ಆರಂಭಿಸಿದ್ದಾರೆ. ಕ್ಯಾಮೆರಾ ಮೂಲಕ ಕಚೇರಿಯ ಹೆಚ್ಆರ್ ವಿಭಾಗ ಮಾನಿಟರ್ ಮಾಡಲು ಆರಂಭಿಸಿದೆ. ಈ ವೇಳೆ ಮನೆಯಿಂದೆ ಕೆಲಸ ಮಾಡುವ ಉದ್ಯೋಗಿಗಳು ಕೆಲಸ ಬಿಟ್ಟು ಇನ್ನುಳಿದ ಎಲ್ಲಾ ಕೆಲಸ ಮಾಡುತ್ತಿರುವುದಾಗಿ ಪತ್ತೆಯಾಗಿದೆ. ಈ ಕುರಿತು ಹೆಚ್ಆರ್ ವಿಭಾಗ ಎಚ್ಚರಿಕೆ ಸಂದೇಶ ಬರುತ್ತಿದ್ತಂತೆ ಬರೋಬ್ಬರಿ 23 ಮಂದಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ಕೆಲಸವೂ ಬೇಡ, ಕಚೇರಿಯೂ ಬೇಡ

23 ಮಂದಿ ಉದ್ಯೋಗಿಗಳು ರಾಜೀನಾಮೆ ನೀಡಿದ ಬೆನ್ನಲ್ಲೇ ಕಂಪನಿ ಮಾಲೀಕ ಮಾರ್ಗನ್ ಪ್ರತಿಕ್ರಿಯಿಸಿದ್ದಾರೆ. ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡಲು ನಿರಾಕರಿಸಿದ್ದರು. ವೈಯುಕ್ತಿಕ ಕಾರಣಗಳಿರುತ್ತೆ ಅನ್ನೋ ಕಾರಣಕ್ಕೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಲ್ಯಾಪ್‌ಟಾಪ್ ಕ್ಯಾಮೆರಾದಲ್ಲಿ ನಿಮ್ಮ ಕಣ್ಗಾವಲು ಮಾಡಲಾಗುತ್ತದೆ. ಪ್ರತಿ ನಿಮಿಷವೂ ಟ್ರಾಕ್ ಆಗುತ್ತೆ ಎಂದು ಮೊದಲೇ ಹೇಳಿದ್ದೇವೆ. ಇದೇ ಕಾರಣದಿಂದ ಒಂದೇ ವಾರದಲ್ಲಿ 23 ಮಂದಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದ ಉದ್ಯೋಗಿಗಳಿಗೆ ಕೆಲಸ ಬೇಕಿರಲಿಲ್ಲ, ಕೇವಲ ವೇತನ ಮಾತ್ರ ಬೇಕಿತ್ತು. ಅದು ಸಾಧ್ಯವಿಲ್ಲ ಎಂದು ಮಾರ್ಗನ್ ಹೇಳಿದ್ದಾರೆ.