'ಆಗಸ್ಟ್ 25 ಬಿಗ್ ರಿವೀಲ್' ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೈಪ್ ಸೃಷ್ಟಿಸಿದ ವ್ಯಕ್ತಿಯೊಬ್ಬ, ದೊಡ್ಡ ರಹಸ್ಯ ಬಯಲು ಮಾಡುವುದಾಗಿ ನಂಬಿಸಿದ್ದ. ವಿಡಿಯೋ ನೋಡಲು ತಲಾ 500 ರೂ. ಪಡೆದು, ಕೊನೆಗೆ ಕೇವಲ ಮೋಟಿವೇಷನಲ್ ವಿಡಿಯೋ ಪೋಸ್ಟ್ ಮಾಡಿ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಸೋಶಿಯಲ್ ಮೀಡಿಯಾ ವೇದಿಕೆಯಲ್ಲಿ ಹೊಸ ವಿಚಾರವನ್ನು ಅಥವಾ ದೊಡ್ಡ ವಿಚಾರವೊಂದನ್ನು ರಿವೀಲ್ ಮಾಡ್ತೀವಿ ಎಂದು ಹೇಳಿ ನೆಟ್ಟಿಗರನ್ನು ವಂಚನೆ ಮಾಡಿ ಕೋಟಿ ಕೋಟಿ ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಯಾವುದೋ ಒಂದು ಪ್ರಮುಖ ವಿಚಾರವನ್ನು ರಿವೀಲ್ ಮಾಡುತ್ತೇನೆ ಎಂದು ಹೇಳಿ ದೊಡ್ಡ ಪ್ರಮಾಣದಲ್ಲಿ ಹಣ ಪಡೆದು ವಂಚನೆ ಮಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗಿದ್ದ ಆಗಸ್ಟ್ 25 ಬಿಗ್ ರಿವೀಲ್ ಹೆಸರಿನಲ್ಲಿ 8.5 ಕೋಟಿ ವಂಚನೆ ಮಾಡಿರುವ ಆರೋಪ ಈಗ ಭಾರೀ ಚರ್ಚೆಯಾಗುತ್ತಿದೆ.

ಹೈಪ್ ಕ್ರಿಯೇಟ್ ಮಾಡಿ ಟೆಲಿಗ್ರಾಮ್ ಲಿಂಕ್‌ನೊಂದಿಗೆ ವಂಚನೆ

'2026 ಆಗಸ್ಟ್ 25' ಎಂಬ ಹೆಸರಿನೊಂದಿಗೆ ಒಂದು ಸೋಶಿಯಲ್ ಮೀಡಿಯಾ ಖಾತೆಯನ್ನು ಓರ್ವ ವ್ಯಕ್ತಿ ಪ್ರಾರಂಭ ಮಾಡಿದ್ದ. ಆ ಬಳಿಕ ಸತತವಾಗಿ ಆತ ಈ ಆಕೌಂಟ್‌ನಲ್ಲಿ ರೀಲ್ಸ್ ಪೋಸ್ಟ್ ಮಾಡಿದ್ದ. ಆಗಸ್ಟ್ 25ರಂದು ನಾನು ಒಂದು ದೊಡ್ಡ ರಹಸ್ಯವನ್ನು ಬಯಲು ಮಾಡ್ತೀನಿ ಎಂದು ಪ್ರಚಾರ ಮಾಡಿದ್ದ. ಈ ವಿಡಿಯೋವನ್ನು ನೋಡಿದರೆ ಯಾರು ಪಶ್ಚಾತ್ತಾಪ ಮಾಡುವುದಿಲ್ಲ. ತಪ್ಪದೇ ತನ್ನ ಚಾನೆಲ್ ಫಾಲೋ ಮಾಡಿ ಎಂದು ನೆಟ್ಟಿರಿಗೆ ಮನವಿ ಮಾಡಿದ್ದ. ಈ ರೀಲ್ಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ಊಹೆಗೂ ಮೀರಿದ ರೀತಿಯಲ್ಲಿ ಮಿಲಿಯನ್ ಗಟ್ಟಲೇ ವಿವ್ಯೂಸ್ ಬಂದಿತ್ತು. ಇದರೊಂದಿಗೆ ನೆಟ್ಟಿಗರು ಕೂಡ ಆಸಕ್ತಿಯುತವಾಗಿ ಫಾಲೋ ಮಾಡಿದ್ದರು. ಇನ್‌ಸ್ಟಾದಲ್ಲಿ ಇಂತಹ ವಿಡಿಯೋ ಶೇರ್ ಮಾಡಿದರೆ ಡಿಲೀಟ್‌ ಮಾಡುವ ಅವಕಾಶ ಇರುತ್ತದೆ ಎಂದು ಅಲ್ಲಿಂದ ಎಲ್ಲರನ್ನು ಟೆಲಿಗ್ರಾಫ್‌ ಚಾನೆಲ್‌ ಲಿಂಕ್ ಶೇರ್ ಮಾಡಿದ್ದ. ಅಲ್ಲಿಂದ ತನ್ನ ಖಾತೆಯನ್ನು ಫಾಲೋ ಮಾಡಿ ಎಂದು ಮನವಿ ಮಾಡಿದ್ದ.

ಒಬ್ಬರಿಂದ 500 ರೂ, ಬರೋಬ್ಬರು 8.5 ಕೋಟಿ ಕಲೆಕ್ಷನ್!

ಈ ಕ್ರಿಯೇಟರ್‌ನನ್ನು ನಂಬಿದ್ದ ನೆಟ್ಟಿಗರು ಆತನ ಟೆಲಿಗ್ರಾಮ್‌ ಲಿಂಕ್‌ಅನ್ನು ಫಾಲೋ ಮಾಡಿದ್ದರು. ಆದರೆ ಇಲ್ಲಿಯೇ ಶಾಕ್ ಎದುರಾಗಿತ್ತು. ತಾನು ಶೇರ್ ಮಾಡುವ ಸಂಚಲನಾತ್ಮಕ ವಿಡಿಯೋ ನೋಡಬೇಕು ಎಂದರೆ ಪ್ರತಿಯೊಬ್ಬರು 500 ರೂಪಾಯಿ ಪಾವತಿ ಮಾಡುವಂತೆ ಷರತ್ತು ಹಾಕಿದ್ದ. ನೆಟ್ಟಿಗರು ಕೂಡ ಈತ ಏನೋ ದೊಡ್ಡ ವಿಚಾರ ರಿವೀಲ್ ಮಾಡುತ್ತಾನೆ, ನಾವು ಮೊದಲು ನೋಡೋಣಾ ಅಂತ ಬರೋಬ್ಬರಿ 1 ಲಕ್ಷದ 66 ಸಾವಿರ ಮಂದಿ ಒಬ್ಬರಿಗೆ 500 ರೂಪಾಯಿಯಂತೆ ಹಣ ಪಾವತಿ ಮಾಡಿದ್ದರು. ಇದರಂತೆ ಆತನಿಗೆ ನೆಟ್ಟಿಗರು ಬರೋಬ್ಬರಿ 8 ಕೋಟಿ 50 ಸಾವಿರ ಮಂದಿ ನಗದು ಪಾವತಿಯಾಗಿತ್ತು ಎಂಬ ಆರೋಪಗಳು ಕೇಳಿ ಬಂದಿತ್ತು.

ಆದರೆ ಅಷ್ಟು ಹಣ ಪಾವತಿ ಮಾಡಿದ ಬಳಿಕ ಆತ ವಿಡಿಯೋ ಬಿಡುಗಡೆ ಮಾಡಿದ್ದ. ಹಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಪ್ರಚಾರ ಮಾಡಿದ್ದ 'ಬಿಗ್ ರಿವೀಲ್' ವಿಡಿಯೋದಲ್ಲಿ ಆತನ ಒಂದು ಮೋಟಿವೇಷನಲ್ ವಿಡಿಯೋವನ್ನು ಆತ ಪೋಸ್ಟ್ ಮಾಡಿ ಕೈತೊಳೆದುಕೊಂಡಿದ್ದ. ಇದರೊಂದಿಗೆ ಹಣಕೊಟ್ಟಿದ್ದ ಸಾವಿರಾರು ಮಂದಿಗೆ ಶಾಕ್ ಎದುರಾಗಿತ್ತು.

Scroll to load tweet…

ಭಾರೀ ಪ್ರಮಾಣದಲ್ಲಿ ನಿರೀಕ್ಷೆ ಮೂಡಿಸಿ, ಒಬ್ಬರ ಬಳಿ 500 ರೂಪಾಯಿಯಂತೆ ಕೋಟಿ ಕೋಟಿ ಹಣ ವಸೂಲಿ ಮಾಡಿ ನಿರಾಸೆ ಮೂಡಿಸಿದ್ದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಸಾವಿರಾರು ಮಂದಿ ಇದನ್ನು ಒಂದು ಯೋಜನೆ ಪ್ರಕಾರ ಮಾಡಿ ಒಟ್ಟಾರೆ 8.5 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಈ ಕುರಿತಂತೆ ಎನ್‌ಡಿ ಟಿವಿ ವರದಿಯನ್ನು ಪ್ರಕಟ ಮಾಡಿದ್ದು, ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.