ವಿಜಯಪುರ ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ ತಾಯಿ ಮತ್ತು ಐವರು ಮಕ್ಕಳೂ ಸೇರಿದಂತೆ ಒಟ್ಟು ಆರು ಶವಗಳು ಪತ್ತೆಯಾಗಿವೆ. ಈ ಹಿಂದೆ ನಾಪತ್ತೆ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.

ವಿಜಯಪುರ: ವಿಜಯಪುರ ನಗರದ ಹೊರ ವಲಯದಲ್ಲಿರುವ ಭೂತನಾಳ ಕೆರೆಯಲ್ಲಿ ಹೆಣಗಳ ರಾಶಿ ತೇಲಿ ಬಂದಿದ್ದು, ಸ್ಥಳೀಯರಲ್ಲಿ ಆತಂ ಮೂಡಿಸಿದೆ. ಭೂತನಾಳ ಕೆರೆಯಲ್ಲಿ ಒಟ್ಟು 6 ಶವ ಪತ್ತೆಯಾಗಿದ್ದು, ಇದರಲ್ಲಿ ತಾಯಿ ಸೇರಿ ಮಕ್ಕಳು ಶವಗಳು ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಭೂತನಾಳ ಕೆರೆಯಲ್ಲಿ ತೇಲಿದ ಆರು ಶವಗಳ ರಹಸ್ಯ!

ಇಬ್ಬರು ಗಂಡು ಮಕ್ಕಳು, ಮೂವರು ಬಾಲಕಿಯರು ಸೇರಿದಂತೆ ಓರ್ವ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಮೊದಲು ಕೆರೆ ನೋಡಲು ಬಂದ ಪ್ರವಾಸಿಗರು ಇರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ನೀರಿನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡುವ ಕೆಲಸ ಮಾಡಿದ್ದಾರೆ.

ಆತ್ಮಹತ್ಯೆಗೆ ಶರಣಾಗಿರುವ ನಿರೀಕ್ಷೆ!

ಸ್ಥಳಕ್ಕೆ ಭೇಟಿ ನೀಡಿರುವ ಆದರ್ಶ ನಗರ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದ್ದು, ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ. ಮೃತ ಆರು ಮಂದಿಯಲ್ಲಿ ತಾಯಿ ಸೇರಿದಂತೆ ಐವರು ಮಕ್ಕಳು ಎಂದು ಪೊಲೀಸರು ಗುರುತಿಸಿದ್ದಾರೆ.

ಆಗಸ್ಟ್ 24ರಂದು ನಾಪತ್ತೆ ಪ್ರಕರಣ ದಾಖಲು

ಇಬ್ಬರು ಗಂಡು ಮಕ್ಕಳು, ಮೂರು ಹೆಣ್ಣು ಮಕ್ಕಳು, ಒಬ್ಬ ಮಹಿಳೆ (ತಾಯಿ) ಎಂದು ಗುರುತಿಸಿರುವ ಪೊಲೀಸರು, ನಾಪತ್ತೆ ಪ್ರಕರಣಗಳ ಬಗ್ಗೆ ಮಾಹಿತಿ ಕಲೆಹಾಕಿದ್ದುರ. ಈ ವೇಳೆ ಮೃತರು ವಿಜಯಪುರ ತೊರವಿ ಮೂಲದವರು ಎಂದು ತಿಳಿದು ಬಂದಿದ್ದು, ತಾಯಿ ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ನಾಪತ್ತೆ ಪ್ರಕರಣ ದಾಖಲಾಗಿದ್ದು, ಆಗಸ್ಟ್ 24ರ ಸೋಮವಾರ ಆರು ಮಂದಿ ನಾಪತ್ತೆಯಾಗಿರುವ ಬಗ್ಗೆ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಸ್ಥಳೀಯರು ಹೇಳಿದ್ದೇನು?

ಈ ಬಗ್ಗೆ ಮಾತನಾಡಿರುವ ಸ್ಥಳೀಯರಾದ ಸಂತೋಷ ಎಂಬವರು, ಬೆಳಗ್ಗೆ 8 ಗಂಟೆಯ ಸಮಯದಲ್ಲಿ ವಾಕಿಂಗ್ ಮಾಡಲು ಬಂದಿದ್ದೇವು. ಈ ಸಂದರ್ಭದಲ್ಲಿ ಕೆರೆಯ ನೀರಿನಲ್ಲಿ ಹೆಣಗಳು ತೇಲಿ ಬಂದಿತ್ತು. ಆಗ ನಾವು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದೇವು. ಒಂದೇ ಕಡೆ ಒಟ್ಟು ಆರು ಮಂದಿಯ ಮೃತ ದೇಹ ಕಾಣಿಸಿತ್ತು, ಅದರಲ್ಲಿ ಮಕ್ಕಳ ಮೃತದೇಹ ಇರೋದು ನೋಡಿದ್ದೇವು. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಮೃತದೇಹಗಳನ್ನು ಹೊರ ತೆಗೆಯುವ ಕೆಲಸ ಮಾಡಿದ್ದಾರೆ. ಮೃತರ ಬಗ್ಗೆ ನಮಗೆ ಇಲ್ಲ ಎಂದಿದ್ದಾರೆ.

ಎಸ್‌ಪಿ ಹೇಳಿದ್ದೇನು?

ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಎಸ್ಪಿ ಲಕ್ಷ್ಮಣ ನಿಂಬರಗಿ, ನಮಗೆ ಇಂದು ಬೆಳಗ್ಗೆ 8:45ಕ್ಕೆ ಮೃತದೇಹಗಳು ಕೆರೆಯಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದೇವು. ಸೋಮವಾರ ನಾಪತ್ತೆ ಪ್ರಕರಣವನ್ನು ಮೃತ ಮಹಿಳೆಯ ಗಂಡ ದೂರು ನೀಡಿದ್ದರು. ಮನೆಯಲ್ಲಿದ್ದ ಐದು ಮಕ್ಕಳು ಹಾಗೂ ಶ್ರವಣ ದೋಷವಿರುವ ಮಗುವನ್ನು ಹಾಸ್ಟೆಲ್‌ನಲ್ಲಿ ಇಟ್ಟಿದ್ದರು. ಆ ಮಗುವನ್ನು ತಾಯಿ ಕರೆದುಕೊಂಡು ಬಂದಿದ್ದು ತಿಳಿದು ಬಂದಿದೆ. ತನಿಖೆ ಕೈಗೊಂಡ ಸಂದರ್ಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮನೆಲ್ಲಿಯೇ ಮೊಬೈಲ್ ಬಿಟ್ಟು ಬಂದಿದ್ದರು. ಗಂಡನ ಮನೆಯ್ಲಿ ಶ್ರವಣದ ಹಬ್ಬದ ಅಡುಗೆ ಮಾಡುವ ಸಂದರ್ಭದಲ್ಲಿ ಗಲಾಟೆ ಆಗಿತ್ತು ಎಂಬ ಮಾಹಿತಿ ಇದೆ. ಈಗ ಇದು ಆತ್ಮಹತ್ಯೆಯೇ ಅಥವಾ ಬೇರೆ ಸಂಶಯಗಳ ಆಧಾರದ ಮೇಲೆ ತನಿಖೆ ಕೈಗೊಂಡಿದ್ದು, ಎಫ್‌ಎಸ್‌ಎಲ್ ವರದಿಗೆ ಕಳುಹಿಸುತ್ತೇವೆ. ಕುಟುಂಬಸ್ಥರು, ಗಂಡನ ಬಳಿ ಈ ಬಗ್ಗೆ ಮಾಹಿತಿ ಪಡೆದುಕೊಂಡು ಮುಂದಿನ ತನಿಖೆ ನಡೆಯಲಿದೆ ಎಂದು ಹೇಳಿದರು.