MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ganesh Chaturthi 2026 Date & Time
Duleep Trophy Final
Sirsi-Haveri Highway
ED Raids Satish Jarkiholi
Bengaluru Flyovers
Valmiki Corporation Scam
Cauvery Water Issue
Bhadra Irrigation Project
Shivaraj Tangadagi vs Janardhan Reddy
Leelamma Ninna Ganda Yaramma
Karnataka Government Schools
Karnataka Gramanubhava Programme
  • Home
  • Entertainment
  • Irumudi Record: 105 ವರ್ಷಗಳ ದಾಖಲೆ ಬ್ರೇಕ್! ಬಾಹುಬಲಿ, RRR, ಪುಷ್ಪ ಸಿನಿಮಾಗಳಿಂದಲೇ ಆಗಲಿಲ್ಲ, ಇತಿಹಾಸ ಬರೆದ ರವಿತೇಜ ಸಿನಿಮಾ

Irumudi Record: 105 ವರ್ಷಗಳ ದಾಖಲೆ ಬ್ರೇಕ್! ಬಾಹುಬಲಿ, RRR, ಪುಷ್ಪ ಸಿನಿಮಾಗಳಿಂದಲೇ ಆಗಲಿಲ್ಲ, ಇತಿಹಾಸ ಬರೆದ ರವಿತೇಜ ಸಿನಿಮಾ

ಟಾಲಿವುಡ್‌ನಲ್ಲಿ ಕಳೆದ ವಾರ ಬಿಡುಗಡೆಯಾದ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಹಿಟ್ ಪಡೆದುಕೊಂಡಿದೆ. ಕಳೆದ ಮೂರು ದಿನಗಳಿಂದ ತೆಲುಗು ರಾಜ್ಯಗಳಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಜನರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ.

2 Min read
Author : Sumanth SN
Published : Aug 25 2026, 12:19 PM IST
Share this Photo Gallery
  • FB
  • TW
  • Linkdin
  • Whatsapp
17
ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಳ
Image Credit : Mythri Movie Makers

ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಳ

ಟಾಲಿವುಡ್‌ನಲ್ಲಿ ಕಳೆದ ವಾರ ಬಿಡುಗಡೆಯಾದ 'ಇರುಮುಡಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬಿಗ್ ಹಿಟ್ ಪಡೆದುಕೊಂಡಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಪಾಸಿಟಿವ್ ಪ್ರತಿಕ್ರಿಯೆ ಕೊಡುತ್ತಿರುವ ಕಾರಣ, ಸಿನಿಮಾಗೆ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದ ತೆಲುಗು ರಾಜ್ಯಗಳಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಜನರು ಮತ್ತೆ ಮತ್ತೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
105 ವರ್ಷಗಳಲ್ಲಿ ಇದೇ ಮೊದಲು!
Image Credit : Youtube Screenshot@MythriMovieMakers

105 ವರ್ಷಗಳಲ್ಲಿ ಇದೇ ಮೊದಲು!

ಇದರೊಂದಿಗೆ ಈ ಸಿನಿಮಾ ಹಲವು ದಾಖಲೆಯನ್ನು ನಿರ್ಮಿಸುತ್ತಿದೆ. 105 ವರ್ಷಗಳ ಟಾಲಿವುಡ್ ಸಿನಿಮಾ ದಾಖಲೆಗಳನ್ನು ಬ್ರೇಕ್ ಮಾಡಿದ್ದು, ಭಾನುವಾರ ತೆಲುಗು ರಾಜ್ಯಗಳಲ್ಲಿ ಹಾಕಿದ್ದ ಎಲ್ಲಾ ಶೋಗಳು ಹೌಸ್ ಫುಲ್ ಆಗುವ ಮೂಲಕ ದಾಖಲೆ ನಿರ್ಮಿಸಿದೆ. ಹೌದು, ಈ ರೀತಿ ನಡೆದಿರೋದು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಮೊದಲ ಬಾರಿಗೆ ಎಂದು ಸಿನಿಮಾ ವಿಶ್ಲೇಷಕರು ಹೇಳುತ್ತಿದ್ದಾರೆ.

Related Articles

Related image1
ಆಸ್ಟ್ರೇಲಿಯಾ ಪರ 13 ವರ್ಷ ಆಡಿದರು ಆಗಿಲ್ಲ, ಪೋರ್ಚುಗಲ್ ಪರ ಮೊದಲ ಶತಕ ಸಿಡಿಸಿದ RCB ಮಾಜಿ ಆಟಗಾರ
Related image2
Ravi Teja Investment: 12 ಲಕ್ಷ ಹೂಡಿಕೆ ಮಾಡಿದರೆ 100 ಕೋಟಿ ರೂ. ಲಾಭ; ನಟ ರವಿತೇಜ ಆಸ್ತಿ ಕುರಿತ ಶಾಕಿಂಗ್ ಸೀಕ್ರೆಟ್ ರಿವೀಲ್!
37
ಸಿನಿಮಾ ಚೆನ್ನಾಗಿದ್ದರೆ ಜನರು ಥಿಯೇಟರ್‌ಗೆ ಬರ್ತಾರೆ!
Image Credit : Instagram

ಸಿನಿಮಾ ಚೆನ್ನಾಗಿದ್ದರೆ ಜನರು ಥಿಯೇಟರ್‌ಗೆ ಬರ್ತಾರೆ!

ಸಿನಿಮಾ ಕಥೆ ಉತ್ತಮವಾಗಿದ್ದರೆ ಜನರು ಈಗಲೂ ಥಿಯೇಟರ್‌ಗೆ ಬರ್ತಾರೆ ಅನ್ನೋದಕ್ಕೆ ಈ ಸಿನಿಮಾ ಸಾಕ್ಷಿಯಾಗಿದೆ. ಚಿತ್ರಮಂದಿರಕ್ಕೆ ಬರುವುದನ್ನೇ ನಿಲ್ಲಿಸಿದ್ದ ಹಲವು ಮಂದಿಯನ್ನು ಕೈ ಹಿಡಿದು ಥಿಯೇಟರ್ ಮೆಟ್ಟಿಲು ಹತ್ತುವಂತೆ ಮಾಡಿದೆ. ಸದ್ಯ ಎರಡು ರಾಜ್ಯದಲ್ಲಿ ಸಿನಿಮಾ ಫೀವರ್ ಹೆಚ್ಚಾಗಿದೆ. ಇನ್ನು ಹಲವು ವರ್ಷಗಳಿಂದ ಸೂಪರ್ ಹಿಟ್ ಸಿನಿಮಾಗಾಗಿ ಕಾದುಕುಳಿತ್ತಿದ್ದ ರವಿತೇಜ ಅವರಿಗೂ ಇದು ಕಮ್‌ಬ್ಯಾಕ್ ಸಿನಿಮ ಎಂದು ಹೇಳಬಹುದು.

47
ಮಿಡಲ್ ಕ್ಲಾಸ್ ತಂದೆಯ ಜೀವನ, ಕಥೆಯಲ್ಲಿ ಟ್ವಿಸ್ಟ್!
Image Credit : Instagram

ಮಿಡಲ್ ಕ್ಲಾಸ್ ತಂದೆಯ ಜೀವನ, ಕಥೆಯಲ್ಲಿ ಟ್ವಿಸ್ಟ್!

ಒಂದು ಮಿಡಲ್ ಕ್ಲಾಸ್ ತಂದೆಯ ಪಾತ್ರದಲ್ಲಿ ರವಿತೇಜ್ ನಟಿಸಿದ್ದು, ನಿರ್ದೇಶಕ ತಾವು ಆಯ್ಕೆ ಮಾಡಿಕೊಂಡಿದ್ದ ಕಥೆಯನ್ನು ಯಾವುದೇ ಗೊಂದಲವಿಲ್ಲದೇ ಪ್ರೇಕ್ಷಕರು ಮುಂದಿಟ್ಟಿದ್ದಾರೆ. ಸಿನಿಮಾ ಕಥ ಹಲವರಿಗೆ ಗೊತ್ತಿದೆ ಅಂತ ಅನಿಸಿದರೂ, ಅದನ್ನು ವಿಶೇಷವಾಗಿ ಸಿನಿಮಾ ಪ್ರೇಮಿಗಳ ಮುಂದಿಟ್ಟಿದ್ದಾರೆ. ಒಂದು ಥ್ರಿಲ್ಲರ್ ಕಥೆಯನ್ನು ಭಕ್ತಿಪೂರ್ವಕವಾಗಿ ಹೊಸದಾಗಿ ಸಿನಿಮ್ಯಾಟಿಕ್ ರೂಪದಲ್ಲಿ ಹೇಳಲು ಯಶಸ್ವಿಯಾಗಿ, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಿದ್ದಾರೆ.

57
ಇರುಮುಡಿ ಭರ್ಜರಿ ಗಳಿಕೆ
Image Credit : Instagram

ಇರುಮುಡಿ ಭರ್ಜರಿ ಗಳಿಕೆ

ಸಿನಿಮಾ ಕಲೆಕ್ಷನ್‌ಗಳು ಉತ್ತಮವಾಗಿದ್ದು, ಮೂರು ದಿನದಲ್ಲಿ 72 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕಳೆದ ಒಂದು ದಶಕದಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ, ಕೇವಲ ಒಂದೂವರೆ ದಿನದಲ್ಲಿಯೇ ಜಾಗತಿಕ ಮಟ್ಟದಲ್ಲಿ ಹೂಡಿಕೆಯ ವೆಚ್ಚವನ್ನು ಮರುಗಳಿಸಿದ (break-even) ಏಕೈಕ ಗಮನಾರ್ಹ ಚಿತ್ರವಾಗಿ 'ಇರುಮುಡಿ' (Irumudi) ಹೊರಹೊಮ್ಮಿದೆ. ಈ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯನ್ನು ಕಂಡು ಸ್ವತಃ ವಾಣಿಜ್ಯ ವಲಯದವರೇ ಅಚ್ಚರಿಗೊಂಡಿರುವುದು ನಿಜಕ್ಕೂ ಗಮನಾರ್ಹ ಸಂಗತಿಯಾಗಿದೆ.

67
262 ನೈಟ್ ಶೋಗಳು ಹೌಸ್ ಫುಲ್!
Image Credit : Inastagram

262 ನೈಟ್ ಶೋಗಳು ಹೌಸ್ ಫುಲ್!

ಭಾನುವಾರ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಹಾಕಿದ್ದ ಶೋಗಳಲ್ಲಿ ಶೇಕಡಾ 97ರಷ್ಟು ಟಿಕೆಟ್‌ಗಳು ಮಾರಾಟವಾಗಿದ್ದು, ಅದರಲ್ಲೂ ಹೈದರಾಬಾದ್‌ ನಗರವೊಂದರಲ್ಲೇ ಹಾಕಿದ್ದ 262 ನೈಟ್ ಶೋಗಳು ಫುಲ್ ಆಗಿದೆ. ಮೈತ್ರಿ ಮ್ಯೂವಿ ಮೇಕರ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾ ತೆಲುಗು ರಾಜ್ಯಗಳಾದ ಪ್ರಮುಖ ನಗರಗಳಾದ ಹೈದರಾಬಾದ್, ವಿಶಾಖಪಟ್ಟಣ, ವಿಜಯವಾಡ ಸೇರಿದಂತೆ ಹಲವು ನಗರಗಳಲ್ಲಿ 500 ಹೆಚ್ಚು ಶೋಗಳಲ್ಲಿ ವಾರಾಂತ್ಯದಲ್ಲಿ ಹೌಸ್ ಫುಲ್ ಶೋ ಪ್ರದರ್ಶನ ಕಂಡಿದೆ.

77
ಸಿನಿಮಾ ಕಥೆ ಎಲ್ಲರಿಗೂ ಗೊತ್ತಿದೆ, ಆದರೆ ನಿರ್ದೇಶಕರು ಗೆದ್ದಿದ್ದು ಎಲ್ಲಿ?
Image Credit : Instagram

ಸಿನಿಮಾ ಕಥೆ ಎಲ್ಲರಿಗೂ ಗೊತ್ತಿದೆ, ಆದರೆ ನಿರ್ದೇಶಕರು ಗೆದ್ದಿದ್ದು ಎಲ್ಲಿ?

ಇನ್ನು, ಸಿನಿಮಾ ಕಥೆ ವಿಚಾರಕ್ಕೆ ಬಂದರೆ, ಆಂಧ್ರದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಅರಣ್ಯ ಪ್ರದೇಶದ ಸಮೀಪದ ಪೊಲ್ಲೂರು ಗ್ರಾಮದಲ್ಲಿ ತ್ರಿನಾಥ್ ರಾಮ್, ಕಾವೇರಿ ದಂಪತಿಯ ಮಗಳು ಮಣಿಕಂಠ ಜೊತೆ ಜೀವನ ನಡೆಸುತ್ತಿರುತ್ತಾರೆ. ಮಗಳು ಎಂದರೆ ತಂದೆಗೆ ಪ್ರಾಣ, ತಾನು ನೋಡಿದ ಪ್ರತಿ ಹೆಣ್ಣು ಮಗಳಲ್ಲಿಯೂ ತನ್ನ ಮಗಳನ್ನು ನೋಡುವ ಭಾವನೆಯನ್ನು ತಂದೆ ಹೊಂದಿರುತ್ತಾನೆ. ಆದರೆ ಆತನಿಗೆ ಇರುವ ಕುಡಿತದಿಂದ ದೂರವಿರಲೂ ಆತ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಅಯ್ಯಪ್ಪ ಮಾಲೆ ಧರಿಸುತ್ತಾನೆ. ಆ ಬಳಿಕ 41 ದಿನ ನಿಷ್ಠೆಯಿಂದ ಜೀವನ ನಡೆಸುತ್ತಾನೆ. ಇದೇ ಸಂದರ್ಭದಲ್ಲಿ ಗ್ರಾಮದ ಶಾಲೆಯಲ್ಲಿ ನಡೆದ ಘಟನೆ ಕಥೆಗೆ ಟ್ವಿಸ್ಟ್ ನೀಡುತ್ತದೆ. ಶಾಲೆಯ ಶಿಕ್ಷಕಿಯಿಂದ ಬಾಲಕಿಯೊಬ್ಬಳು ಸಾವನ್ನಪ್ಪುತ್ತಾಳೆ, ಟೀಚರ್ ಅಮಾನತು ಆಗುತ್ತಾಳೆ. ಆದರೆ ಆಕೆ ವಾಪಸ್ ಬಂದ ಬಳಿಕ ಏನೆಲ್ಲಾ ಟ್ವಿಸ್ಟ್‌ಗಳು ಸಿಗುತ್ತದೆ? ತ್ರಿನಾಥ್‌ಗೆ ಬಂದ ಸಮಸ್ಯೆ ಏನು? ಆತ ಮಾಲೆ ಏಕೆ ಧರಿಸುತ್ತಾನೆ? ಅನ್ನೋದನ್ನು ತಿಳಿದುಕೊಳ್ಳಲು ನೀವು ಸಿನಿಮಾ ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ಟಾಲಿವುಡ್
ಸಿನಿಮಾ
ಹೈದರಾಬಾದ್

Latest Videos
Recommended Stories
Recommended image1
68ನೇ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಶಾಲೆಗೆ, 7ನೇ ತರಗತಿ ಪರೀಕ್ಷೆಯಲ್ಲಿ ಫಸ್ಟ್‌ ಕ್ಲಾಸ್‌ ಜಸ್ಟ್‌ ಮಿಸ್
Recommended image2
ಬಿಗ್ ಬಾಸ್ ಇತಿಹಾಸದಲ್ಲೇ ದಾಖಲೆ ಬರೆದ ಕನ್ನಡ ರಿಯಾಲಿಟಿ ಶೋ; ಹಿಂದಿ, ತೆಲುಗು, ಮಲಯಾಳಂ ಎಲ್ಲೂ ನಡೆದಿಲ್ಲ!
Recommended image3
Karna Serial ರೋಚಕ ಟ್ವಿಸ್ಟ್​: ಈಡೇರಿತು ಭುವೇಶ್ವರಿಯ ಆಸೆ; ಮಗನಿಗಿಟ್ಟ ಬಾಳೆಯಲ್ಲಿ ಕರ್ಣನ ಊಟ
Related Stories
Recommended image1
ಆಸ್ಟ್ರೇಲಿಯಾ ಪರ 13 ವರ್ಷ ಆಡಿದರು ಆಗಿಲ್ಲ, ಪೋರ್ಚುಗಲ್ ಪರ ಮೊದಲ ಶತಕ ಸಿಡಿಸಿದ RCB ಮಾಜಿ ಆಟಗಾರ
Recommended image2
Ravi Teja Investment: 12 ಲಕ್ಷ ಹೂಡಿಕೆ ಮಾಡಿದರೆ 100 ಕೋಟಿ ರೂ. ಲಾಭ; ನಟ ರವಿತೇಜ ಆಸ್ತಿ ಕುರಿತ ಶಾಕಿಂಗ್ ಸೀಕ್ರೆಟ್ ರಿವೀಲ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved