ಆಸ್ತಿಗಾಗಿ ದಾಯಾದಿಗಳ ಬಡಿದಾಟ, ಮೊದಲನೇ ಹೆಂಡ್ತಿ ಮೇಲೆ ಪತಿ, ಎರಡನೇ ಹೆಂಡ್ತಿ ಮಕ್ಕಳಿಂದ ಹಲ್ಲೆ!

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ  ದಾಯಾದಿಗಳ ನಡುವೆ ಕಿತ್ತಾಟ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ನಡೆದಿದೆ.  

Share this Video
  • FB
  • Linkdin
  • Whatsapp

ಯಾದಗಿರಿ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ಕಿತ್ತಾಟ ತಾರಕಕ್ಕೇರಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ನಡೆದಿದೆ. ಶಿವಪ್ಪ ಆದಾಪುರ ಎಂಬುವವರು ಎರಡು ಮದುವೆಯಾಗಿದ್ದು, ಅವರ ಮೊದಲ ಹೆಂಡತಿ ಮೇಲೆ ಎರಡನೇ ಹೆಂಡತಿ ಮಕ್ಕಳು ಹಾಗೂ ಗಂಡ ಶಿವಪ್ಪ ಆದಾಪುರ ಸೇರಿ ಹಲ್ಲೆ ಮಾಡಿದ್ದಾರೆ. ದೊಣ್ಣೆಯಿಂದ ಗಂಡ ಶಿವಪ್ಪ ಆದಾಪುರ ಹಾಗೂ ಮಗ ಗದ್ದೆಪ್ಪ ಇಬ್ಬರು ಸೇರಿ ಮೊದಲ ಹೆಂಡತಿ ದ್ಯಾಮವ್ವ ಕಮಲಾಪುರ ಹಾಗೂ ಮಕ್ಕಳಾದ ಯಮುನವ್ವ ಹಾಗೂ ಮುದುಕವ್ವ ಮೇಲೆ ಹಲ್ಲೆ ಮಾಡಿದ್ದಾರೆ. ಗಂಡ ಹಾಗೂ ಎರಡನೇ ಹೆಂಡತಿ ಮಕ್ಕಳ ಹಲ್ಲೆಯಿಂದಾಗಿ ಮೊದ ಹೆಂಡತಿ ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಕೊಡೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇವರ ಗಲಾಟೆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Related Video