ನೆತನ್ಯಾಹು ಶಾಂತಿಮಂತ್ರ VS ಖಮೇನಿ ಯುದ್ಧತಂತ್ರ: ಇಸ್ರೇಲಿನ ನಿದ್ದೆಗೆಡಿಸಿದ್ದೇಕೆ ಇರಾನಿನ ಸೀಕ್ರೆಟ್ ವೆಪನ್?
ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದು, ಯುದ್ಧದ ಭೀತಿ ಎದುರಾಗಿದೆ. ಇರಾನ್ ಯುದ್ಧಕ್ಕೆ ಸಿದ್ಧವಾಗಿರುವುದಾಗಿ ಘೋಷಿಸಿದ್ದು, ಜಗತ್ತಿನಾದ್ಯಂತ ಆತಂಕ ಮನೆಮಾಡಿದೆ.
ದಿನಕಳೆದ ಹಾಗೆಲ್ಲಾ ನೂರೆಂಟು ಬದಲಾವಣೆಗಳಾಗ್ತಾ ಇದಾವೆ.. ಆದ್ರೆ ಬದಲಾಗದೇ ಉಳಿದಿರೋದು ಮಾತ್ರ, ಯುದ್ಧಭಯ.. ಅದು ಹುಟ್ಟಿಸಿರೋ ಜೀವಭಯ-ಜೀವನ ಭಯ.. ಮಧ್ಯಪ್ರಾಚ್ಯ ರಣರಂಗವಾಗಿ ಬದಲಾಗಿ ವರ್ಷವೇ ಕಳೆದಿದೆ.. ಆದ್ರೆ, ಇವತ್ತಿಗೂ ಯುದ್ಧವಲ್ಲದ ಯುದ್ಧ ನಡೀತಲೇ ಇದೆ.. ಈಗ ಅದನ್ನ ಪೂರ್ಣ ಪ್ರಮಾಣದ ಯುದ್ಧವಾಗಿಸೋಕೆ, ಯುದ್ಧ ಮಾಡಿ ಶತ್ರುದೇಶನಾ ಸರ್ವನಾಶ ಮಾಡೋದಕ್ಕೆ ಇರಾನ್ ಸನ್ನದ್ಧವಾಗಿದೆ.. ಇರಾನ್ ಯುದ್ಧದಾಹ ಕಂಡು, ಜಗತ್ತೇ ಅರೆಕ್ಷಣ ಬೆಚ್ಚಿ ಬಿದ್ದಿದೆ.. ಅಷ್ಟಕ್ಕೂ, ಯುದ್ಧ ಕಾರ್ಮೋಡ ಕವಿದಿರೋ ದೇಶಗಳ ಪರಿಸ್ಥಿತಿ ಹೇಗಿದೆ? ಯುದ್ಧ ಯಾವಾಗ ಆರಂಭಗೊಳ್ಳಲಿದೆ? ಆ ಕುರಿತಾದ ಆತಂಕಕಾರಿ, ಕಳವಳಕಾರಿ ಮಾಹಿತಿ, ಇಲ್ಲಿದೆ ನೋಡಿ..
ಇಸ್ರೇಲಿನ ಶತ್ರುಗಳ ಸಂಖ್ಯೆನ, ಈಗ ಬೆರಳು ಮಡಿಚಿ ಹೇಳೋಕೆ ಸಾಧ್ಯವಿಲ್ಲ.. ದಿನಕ್ಕೊಂದು ದಾಳಿ, ದಿನಕ್ಕೊಂದು ಭೀಭತ್ಸಕ್ಕೆ ವೇದಿಕೆಯಾಗಿಬಿಟ್ಟಿದೆ, ಈ ಇಸ್ರೇಲ್.. ಹಾಗಾದ್ರೆ, ಈ ರಣಘೋರಕ್ಕೆಲ್ಲಾ ಕಡೆ ಯಾವಾಗ? ಈ ಪ್ರಶ್ನೆಗೆ ಇಸ್ರೇಲ್ ಕೊಡೋ ಉತ್ತರ ಏನು?ನೋಡಿ ಇವತ್ತಿನ ಸುವರ್ಣ ಫೋಕಸ್