Asianet Suvarna News Asianet Suvarna News

ಹೊಸ ಮಾದರಿಯ ಕೊರೋನಾ, ಶೇ. 70 ರಷ್ಟು ಹೆಚ್ಚು ಮಾರಕ : WHO ವಾರ್ನಿಂಗ್!

ಕೊರೋನಾ ರೂಪಾಂತರಗೊಂಡು ಸೃಷ್ಟಿಯಾಗಿರುವ ಹೊಸ ವೈರಸ್ ಜನರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಒಂದು ವಾರದಲ್ಲಿ ಸಾವಿರ ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದೆ. 

First Published Dec 22, 2020, 12:03 PM IST | Last Updated Dec 22, 2020, 2:58 PM IST

ಬ್ರಿಟನ್(ಡಿ.22): ಕೊರೋನಾ ರೂಪಾಂತರಗೊಂಡು ಸೃಷ್ಟಿಯಾಗಿರುವ ಹೊಸ ವೈರಸ್ ಜನರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಒಂದು ವಾರದಲ್ಲಿ ಸಾವಿರ ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದೆ. 

ಲಾಕ್ ಡೌನ್ ನಡುವೆ ಬೆಂಗ್ಳೂರಲ್ಲಿ ನಶೆರಾಣಿಯರ ಪುಂಟಾಟ, ಪೊಲೀಸರ ಮೇಲೆ ಕಾರು ಹತ್ತಿಸಲು ನೋಡಿದ್ರು!

ಒಂದೇ ವಾರದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಹರಡಿದ ಪರಿಣಾಮ ಬ್ರಿಟನ್ ಸರ್ಕಾರ ದೇಶದಲ್ಲಿ ಹೈಅಲರ್ಟ್ ಘೋಷಿಸಿದೆ. ಆಸ್ಪತ್ರೆಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಲಂಡನ್ ಸೇರಿ ಅನೇಕ ಕಡೆ ಲಾಕ್‌ಡೌಔನ್ ಹೇರಲಾಗಿದೆ. 

ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದವರಿಗೆ ಕೊರೋನಾ ಸೋಂಕು!

ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಈ ಬಗ್ಗೆ ಖಡಕ್ ವಾರ್ನಿಂಗ್ ಲಭಿಸಿದ್ದು, ರೂಪಾಂತರಗೊಂಡ ಈ ವೈರಸ್ ಕೊರೋನಾಗಿಂತಲೂ ಶೇ. 70 ರಷ್ಟು ಹೆಚ್ಚು ಮಾರಕ ಎಂದಿದೆ.