ಲಾಕ್ ಡೌನ್ ನಡುವೆ ಬೆಂಗ್ಳೂರಲ್ಲಿ ನಶೆರಾಣಿಯರ ಪುಂಟಾಟ, ಪೊಲೀಸರ ಮೇಲೆ ಕಾರು ಹತ್ತಿಸಲು ನೋಡಿದ್ರು!

ಲಾಕ್ ಡೌನ್ ನಡುವೆ ಯುವತಿಯರ ಪುಂಡಾಟ/ ನಶೆಯಲ್ಲಿದ್ದ ಯುವತಿಯರಿಂದ ಪೊಲೀಸರಿಗೆ ಅವಾಜ್/ ಪೊಲೀಸರ ಮೇಲೆ ಕಾರು ಹತ್ತಿಸಲು ನೋಡಿದ ಹೆಣ್ಣ ಮಕ್ಕಳು/ ಪರಾರಿಯಾಗಿರುವ ಯುವತಿಯ್ರಿಗಾಗಿ ಹುಟುಕಾಟ

First Published Apr 19, 2020, 4:05 PM IST | Last Updated Apr 19, 2020, 4:07 PM IST

ಬೆಂಗಳೂರು(ಏ. 19) ಒಂದು ಕಡೆ ಲಾಕ್ ಡೌನ್ ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗಲು ಪೊಲೀಸ್ ಮತ್ತು ಆಡಳಿತ ಹರಸಾಹಸ ಮಾಡುತ್ತಿದೆ. ಈ ನಡುವೆ ಪುಂಡರ ಕಾಟ ಎದುರಾದರೆ.

ಬೆಂಗಳೂರಿನ ಲೀಲಾ ಪ್ಯಾಲೇಸ್ ಚೆಕ್ ಪೋಸ್ಟ್ ಬಳಿ ಯುವತಿಯರೇ ಪುಂಡಾಟ ನಡೆಸಿದ್ದಾರೆ.  ನಶೆಯಲ್ಲಿದ್ದ ಯುವತಿಯರ  ಅಸುರಕ್ಷಿತ ಡ್ರೈವಿಂಗ್ ಕಂಡು ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದಾರೆ

1.ಕಿ.ಮೀ ದೂರ ಚೇಸ್ ಮಾಡಿ ಯುವತಿಯರನ್ನ ತಡೆದು ನಿಲ್ಲಿಸಿದ ಜೆ ಬಿ ನಗರ ಪೊಲೀಸರಿಗೆ ಯುವತಿರು ಅಂಥದ್ದೇ ಉತ್ತರ ನೀಡಿದ್ದಾರೆ.  ನಮ್ ಹತ್ರ ಪಾಸ್ ಇದೆ, ನಮಗೆ ಮೇಲಾಧಿಕಾರಿಗಳು ಗೊತ್ತು ಎಂದು ಆವಾಜ್ ಹಾಕಿದ್ದಾರೆ.

ವುಹಾನ್ ಲ್ಯಾಬ್ ನ ಶಾಕಿಂಗ್ ಪೋಟೋ ರಿವೀಲ್

ಪ್ರಶ್ನಿಸಿದ ಯುವಕರೊಂದಿಗೂ ವಾಗ್ವಾದ ನಡೆಸಿದ್ದಾರೆ.  ಸಾಧ್ಯವಾದ್ರೆ ಹಿಡಿಯಿರಿ ಎಂದು ಅವಾಜ್ ಹಾಕಿದ್ದು ಅಲ್ಲದೇ  ಇನ್ಸ್ಪೆಕ್ಟರ್ ಮೇಲೆ ಕಾರು ಹತ್ತಿಸಲು ಯತ್ನಿಸಿ ಕಾಲ್ಕಿತ್ತಿದ್ದಾರೆ. ಪುಂಡ ಯುವತಿಯರ ಹುಡುಕಾಟ ಜೋರಾಗಿಯೇ ನಡೆದಿದೆ. ರಾಜ್ಯಾದ್ಯಂತ ಲಾಕ್ ಡೌನ್ ಸಡಿಲ  ಮಾಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಇಂಥ ಘಟನೆಗಳು ನಡೆದಾಗ ಮತ್ತಷ್ಟು ಆತಂಕ ಹೆಚ್ಚಾಗುವುದು ಸಹಜ. 

Video Top Stories