2ನೇ ಗೆಲುವಿಗೆ ಟ್ರಂಪ್ ಮಾಡಿಕೊಂಡಿದ್ದ ಲೆಕ್ಕಾಚಾರವೇನು?

ಸಾಲು ಸಾಲು ವಿವಾದ, ದಾಳಿಗಳ ನಡುವೆಯೂ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉದ್ಯಮಿಗಳ ಬೆಂಬಲ, ಭಾರತೀಯರ ಬೆಂಬಲ ಸೇರಿದಂತೆ ಹಲವು ಕಾರಣಗಳಿಂದ ಟ್ರಂಪ್ ಗೆಲುವು ಸಾಧ್ಯವಾಗಿದೆ.

First Published Nov 9, 2024, 8:52 AM IST | Last Updated Nov 9, 2024, 8:52 AM IST

ಜಗತ್ತನ್ನೇ ಕುತೂಹಲ ಗೂಡಾಗಿಸಿದ್ದ ಅಮೆರಿಕಾ ಚುನಾವಣೆಯಲ್ಲಿ ಟ್ರಂಪ್ ಮತ್ತೆ ಗೆದ್ದಿದ್ದಾರೆ. ಇನ್ನೇನು ಅಧೀಕೃತ ಘೋಷಣೆಯೊಂದೇ ಬಾಕಿ. ಟ್ರಂಪ್ ಮೇಲೆ ಸಾಲು ಸಾಲು ವಿವಾದಗಳಿದ್ದವು. ಚುನಾವಣೆ ಸಂದರ್ಭದಲ್ಲಿ ಅವರ ಮೇಲೆ ಎರಡು ಬಾರಿ ದಾಳಿ ನಡೆದಿತ್ತು. ಈಗ ಅದೆಲ್ಲವನ್ನು ಗೆದ್ದು ಟ್ರಂಪ್ ಮತ್ತೊಮ್ಮೆ ಅಮೆರಿಕಾದ ಅಧಿಪತಿಯಾಗಿದ್ದಾರೆ. ಹಾಗಿದ್ರೆ ಟ್ರಂಪ್ ಗೆಲುವಿಗೆ ಪ್ರಮುಖ ಕಾರಣಗಳೇನು? ಅಮೆರಿಕಾ ಮತದಾರ ಮತ್ತೊಮ್ಮೆ ಟ್ರಂಪ್ರನ್ನು ಗೆಲ್ಲಿಸಿದ್ದು ಏಕೆ? ಇದೆಲ್ಲವನ್ನು ಇಲ್ಲಿ ನೋಡೋಣ. 

ಎರಡನೇ ಬಾರಿ ಅಮೆರಿಕಾ ಗದ್ದುಗೆ ಚುಕ್ಕಾಣಿ ಹಿಡಿಯಲು ಡೊನಾಲ್ಡ್ ಟ್ರಂಪ್ ಅತ್ಯಂತ ಕಾತುರರಾಗಿದ್ದಾರೆ. ಈ ಬಾರಿ ಗೆದ್ದೇ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿದ್ದ ಟ್ರಂಪ್ ಈ ಗೆಲುವಿಗಾಗಿ ಇನ್ನಿಲ್ಲದ ಸಾಹಸ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್‌ಗೆ ಅಮೆರಿಕದ ಪ್ರಮುಖ ಉದ್ಯಮಿಗಳು ಸಪೋರ್ಟ್ ಮಾಡಿದ್ದಾರೆ. ಹಾಗೆನೇ ಭಾರತೀಯರ ಬೆಂಬಲವೂ ಟ್ರಂಪ್‌ಗೆ ಸಿಕ್ಕಿದೆ. ಈ ರೀತಿ ಇನ್ನು ಕೆಲ ಪ್ರಮುಖ ಕಾರಣಗಳಿಂದ ಟ್ರಂಪ್ ಗೆಲುವಿನ ಗದ್ದುಗೆ ಏರುವ ಹಂತದಲ್ಲಿದ್ದಾರೆ. 

ಈ ಎಲ್ಲ ಲೆಕ್ಕಾಚಾರಗಳಿಂದ ಟ್ರಂಪ್ ಎರಡನೇ ಬಾರಿ ಗೆದ್ದು ಅಮೆರಿಕದ ದೊಡ್ಡಣ್ಣನಾಗಿದ್ದಾರೆ. ಹಾಗಿದ್ರೆ ಟ್ರಂಪ್ ಗೆಲುವನ್ನು ಜಗತ್ತು ಹೇಗೆ ಸ್ವೀಕರಿಸಿದೆ? ಟ್ರಂಪ್ ಗೆಲುವಿನಿಂದ ಜಗತ್ತಿನಲ್ಲಿ ಏನೆಲ್ಲ ಬದಲಾವಣೆಗಳಾಗಲಿವೆ. ಅಮೆರಿಕಾ ಚುನಾವಣೆಯನ್ನು ಜಗತ್ತು ತುಂಬಾ ಕುತೂಹಲದಿಂದ ನೋಡುತ್ತಿತ್ತು. ಜಗತ್ತಿಗೆ ಈ ಕುತೂಹಲ ಈ ಬಾರಿ ಮಾತ್ರವಲ್ಲ. ಅಮೆರಿಕಾದಲ್ಲಿ ನಡೆಯುವ ಪ್ರತಿ ಚುನಾವಣೆಗೂ ಜಗತ್ತು ಇಷ್ಟೇ ಕುತೂಹಲದಿಂದ ನೋಡುತ್ತಿರುತ್ತೆ. 

ಟ್ರಂಪ್ ವಿದೇಶ ನೀತಿ ತುಂಬಾನೇ ಚೆನ್ನಾಗಿದೆ. ತಮ್ಮ ಅಚ್ಚುಕಟ್ಟಾದ ವಿದೇಶಿ ನೀತಿಯಿಂದಲೇ ಟ್ರಂಪ್ ಅಮೆರಿಕಾವನ್ನು ಶಿಸ್ತಿನಿಂದ ಮುಂದುವರೆಸಿಕೊಂಡು ಹೋಗ್ತಾರೆ. ಮುಂದಿನ ವರ್ಷ ಜನವರಿ 20ರಂದು ಟ್ರಂಪ್ ಅಧಿಕಾರ ಸ್ವೀಕರಿಸಲಿದ್ದಾರೆ. ಅದರ ನಂತರ ಅಮೆರಿಕಾ ಮತ್ತು ಜಗತ್ತಿನಲ್ಲಿ ಏನೆಲ್ಲ ಬದಲಾವಣೆಗಳಾಗಲಿವೆ ಅನ್ನೋದನ್ನು ಕಾದು ನೋಡಬೇಕಿದೆ. ಇದಾಗಿತ್ತು ಈ ಕ್ಷಣದ ಸ್ಪೆಷಲ್ ನೇರ.. ದಿಟ್ಟ.. ನಿರಂತರ ಸುದ್ದಿಗಾಗಿ ನೋಡ್ತಾ ಇರಿ ಏಷ್ಯಾನೆಟ್ ಸುವರ್ಣ ನ್ಯೂಸ್.