ಇಸ್ರೇಲ್-ಹಮಾಸ್ ಕದನ : ಯುದ್ಧ 2ನೇ ಹಂತ ತಲುಪಿದೆ ಎಂದ ಇಸ್ರೇಲ್ ಪ್ರಧಾನಿ ನೆತನ್ಯಾಹು
ಸದ್ಯಕ್ಕೆ ಮುಗಿಯೋ ಹಾಗೆ ಕಾಣ್ತಿಲ್ಲ ಇಸ್ರೇಲ್-ಹಮಾಸ್ ಕಾಳಗ
ಹಮಾಸ್ ಉಗ್ರ ಸಂಘಟನೆ ನಿರ್ನಾಮಕ್ಕೆ ಇಸ್ರೇಲ್ ಸೇನೆ ಶಪಥ
ಗಾಜಾಪಟ್ಟಿಯಲ್ಲಿ ಭೂದಾಳಿಗೆ ಸನ್ನದ್ಧವಾಗಿರುವ ಇಸ್ರೇಲ್ ಪಡೆ
ಇಸ್ರೇಲ್-ಹಮಾಸ್ ಕದನ ಮತ್ತೊಂದು ಹಂತಕ್ಕೆ ತಲುಪಿದೆ. ಈ ಯುದ್ಧ ಎರಡನೇ ಹಂತಕ್ಕೆ ತಲುಪಿದೆ ಎಂದು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು(Benjamin Netanyahu) ಹೇಳಿದ್ದಾರೆ. ಒಂದೆಡೆ ಭೂದಾಳಿ ಮತ್ತೊಂದೆಡೆ ವೈಮಾನಿಕ ದಾಳಿಯನ್ನು ನಡೆಸಲಾಗುತ್ತಿದೆ. ಹಮಾಸ್ (Hamas) ಉಗ್ರರ ನಿರ್ನಾಮಕ್ಕೆ ಇಸ್ರೇಲ್(Israel) ಸೇನೆ ಶಪಥ ಮಾಡಿದ್ದು, ಗಾಜಾ ಗಡಿಯಲ್ಲಿ ಇಸ್ರೇಲ್‌ನಿಂದ ಸೀಮಿತ ಭೂದಾಳಿ ಮಾಡಲಾಗುತ್ತಿದೆ. ಉತ್ತರ ಗಾಜಾದಲ್ಲಿ ಹಮಾಸ್ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದೆ. ಹಮಾಸ್ ಜೊತೆಗಿನ ಯುದ್ಧ 2ನೇ ಹಂತ ತಲುಪಿದೆ. ಹಮಾಸ್ ಉಗ್ರ ಸಂಘಟನೆ ಬಲ ಕುಗ್ಗಿಸುವುದು, ಒತ್ತೆಯಾಳುಗಳ ಬಿಡುಗಡೆ ನಮ್ಮ ಗುರಿ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಸದ್ಯ ಗಾಜಾದೊಳಗೆ(Gaza) ಇಸ್ರೇಲ್ ಸೇನೆಯಿಂದ ಸೀಮಿತ ಭೂದಾಳಿ ನಡೆಸಲಾಗುತ್ತಿದ್ದು, ನಿರ್ದಿಷ್ಟ ಪ್ರದೇಶಗಳ ಮೇಲೆ ದಾಳಿ ಮಾಡಿ ಉಗ್ರರ ನೆಲೆಗಳ ಧ್ವಂಸ ಮಾಡುವ ಸಾಧ್ಯತೆ ಇದೆ. ಗಾಜಾದೊಳಗೆ ಯುದ್ಧಟ್ಯಾಂಕರ್, ಸೈನಿಕರನ್ನ ನುಗ್ಗಿಸಿದ ಇಸ್ರೇಲ್. ಸೀಮಿತ ದಾಳಿ ಬಗ್ಗೆ ಇಸ್ರೇಲ್ ಸೇನೆಯಿಂದಲೇ ವಿಡಿಯೋ ರಿಲೀಸ್ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ಇಸ್ರೇಲ್ ಬ್ರಹ್ಮಾಸ್ತ್ರ ಸ್ಪಾಂಜ್ ಬಾಂಬ್ ರಹಸ್ಯವೇನು..? ಏನಿದು ಸ್ಪಾಂಜ್ ಬಾಂಬ್..? ಎಷ್ಟು ವಿಷಕಾರಿ ಗೊತ್ತಾ..?