Asianet Suvarna News Asianet Suvarna News

24 ಗಂಟೆ, 30 ಸಾವಿರ ಸೈನಿಕರು, 3 ಹೆಲಿಕ್ಯಾಪ್ಟರ್ ಉಡಿಸ್: ಪುಟಿನ್-ವ್ಯಾಗ್ನರ್ ಯುದ್ಧ ನಿಲ್ಲಿಸಿದ್ದು ಯಾರು..?

ಬೆಲರೂಸ್‌ ಅಧ್ಯಕ್ಷ ಅಲೆಕ್ಸಾಂಡರ್‌ ಸಂಧಾನ ಯಶಸ್ವಿ
ಬಂಡಾಯಕ್ಕೆ ಬೆದರಿ ಕ್ಷಮಾದಾನ ನೀಡಿದ ಪುಟಿನ್‌
ವಾಗ್ನರ್‌ ಪಡೆ ವಿರುದ್ಧ ಕ್ರಮ ಕೈಗೊಳ್ಳಲ್ಲ ಎಂದ ರಷ್ಯಾ
 

First Published Jun 26, 2023, 11:15 AM IST | Last Updated Jun 26, 2023, 11:15 AM IST

ವಿಶ್ವದ ಅತ್ಯಂತ ಬಲಾಢ್ಯ ದೇಶಗಳಲ್ಲಿ ಒಂದಾಗಿರುವ ರಷ್ಯಾ ವಿರುದ್ಧ ಖಾಸಗಿ ಸೇನೆ ‘ವಾಗ್ನರ್‌’ ಸಾರಿದ್ದ ಬಂಡಾಯ ಅಧಿಕೃತವಾಗಿ ಶಮನವಾಗಿದೆ. ಆದರೆ, ಈ ಬಂಡಾಯವು ಯಾವುದೇ ದಮನಕಾರಿ ಕ್ರಮದ ಮೂಲಕ ಶಮನವಾಗದೆ, ‘ಕ್ಷಮಾದಾನ’ದಲ್ಲಿ ಅಂತ್ಯವಾಗಿದೆ. ರಾಜಧಾನಿ ಮಾಸ್ಕೋವನ್ನು ತೆಕ್ಕೆಗೆ ತೆಗೆದುಕೊಂಡು ಪುಟಿನ್‌ ಸರ್ಕಾರದ ಪದಚ್ಯುತಿಗೆ ಹೊರಟಿದ್ದ ಪ್ರಿಗೋಝಿನ್‌ ಹಾಗೂ ಆತನ ನೇತೃತ್ವದ ವಾಗ್ನರ್‌ ಪಡೆಯ ಯಾರೊಬ್ಬರ ವಿರುದ್ಧವೂ ರಷ್ಯಾ ಕ್ರಮ ಕೈಗೊಳ್ಳದೇ ಇರಲು ಒಪ್ಪಿಗೆ ನೀಡಿದೆ.ಉಕ್ರೇನ್‌ ಸಮರ ಸೇರಿದಂತೆ ರಷ್ಯಾ ನಡೆಸಿದ ಯುದ್ಧಗಳಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಿದ ವ್ಯಾಗ್ನರ್‌ ಪಡೆಯ ಪ್ರಿಗೋಝಿನ್‌ ಶನಿವಾರ ರಷ್ಯಾದ ವಿರುದ್ಧವೇ ದಂಗೆ ಸಾರಿದ್ದರು. ತಮ್ಮ ಪಡೆಯ ಸಾಧನೆಯನ್ನು ಮರೆಮಾಚಿ, ತಮ್ಮನ್ನೇ ದಮನಗೊಳಿಸಲು ರಷ್ಯಾ ರಕ್ಷಣಾ ಸಚಿವ ಹಾಗೂ ಸೇನಾ ಮುಖ್ಯಸ್ಥರು ಮುಂದಾಗಿದ್ದಾರೆ ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ದೇಶದ ನಡುವಿನ ಅಂತರ್‌ಯುದ್ಧವನ್ನು ಬೆಲರೂಸ್‌ ಅಧ್ಯಕ್ಷ ಅಲೆಕ್ಸಾಂಡರ್‌ ಸಂಧಾನದ ಮೂಲಕ ನಿಲ್ಲಿಸಿದ್ದಾರೆ.

ಇದನ್ನೂ ವೀಕ್ಷಿಸಿ:  5 ವರ್ಷಗಳ ಹಿಂದೆ ಮುಚ್ಚಿದ್ದೇಕೆ ಸಿಎಂ ಕಚೇರಿಯ ದಕ್ಷಿಣ ದ್ವಾರ !?: ಮೌಢ್ಯಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ ..!

Video Top Stories