5 ವರ್ಷಗಳ ಹಿಂದೆ ಮುಚ್ಚಿದ್ದೇಕೆ ಸಿಎಂ ಕಚೇರಿಯ ದಕ್ಷಿಣ ದ್ವಾರ !?: ಮೌಢ್ಯಕ್ಕೆ ಸೆಡ್ಡು ಹೊಡೆದ ಸಿದ್ದರಾಮಯ್ಯ ..!

ದಕ್ಷಿಣ ದ್ವಾರ ತೆರೆಸಿ ವಾಸ್ತು ಪಾಠ ಮಾಡಿದ "ವಾಸ್ತು"ರಾಮಯ್ಯ..!
ಮೌಢ್ಯತೆಯ ಕಟ್ಟರ್ ವಿರೋಧಿಯಿಂದ ಮತ್ತೊಮ್ಮೆ ಮಾದರಿ ನಡೆ
ಅಂದು ಚಾಮರಾಜನಗರಕ್ಕೆ ಅಂಟಿದ್ದ ಕಳಂಕ ತೊಳೆದಿದ್ದರು ಸಿದ್ದು..!

Share this Video
  • FB
  • Linkdin
  • Whatsapp

ದಳಪತಿ ಕುಮಾರಸ್ವಾಮಿ ಮುಚ್ಚಿಸಿದ್ದ ದಕ್ಷಿಣ ದ್ವಾರವನ್ನು ಸಿಎಂ ಸಿದ್ದರಾಮಯ್ಯ ತೆರೆಸಿದ್ದಾರೆ. ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯ ದಕ್ಷಿಣ ಬಾಗಿಲಿಗೆ ಐದು ವರ್ಷಗಳ ನಂತರ ಮುಕ್ತಿ ಭಾಗ್ಯವನ್ನು ಸಿಎಂ ಸಿದ್ದರಾಮಯ್ಯ ಕರುಣಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ತುಂಬಾನೇ ಕಲರ್'ಫುಲ್ ವ್ಯಕ್ತಿತ್ವ. ಅವರೊಳಗೊಬ್ಬ ನವರಸ ನಾಯಕನಿದ್ದಾನೆ. ಸಿದ್ದು ಹಾಸ್ಯಕ್ಕೂ ಸೈ, ರಣಘರ್ಜನೆಗೂ ಸೈ.ಇನ್ನು ದೇವ್ರು-ದಿಂಡ್ರು ಅಂತ ಬಂದ್ರೆ ಸಿದ್ದರಾಮಯ್ಯನವರು ನಾಸ್ತಿಕನಂತೂ ಅಲ್ಲವೇ ಅಲ್ಲ, ಹಾಗಂತ ಕಟ್ಟರ್ ಆಸ್ತಿಕನೂ ಅಲ್ಲ. ಅವ್ರಿಗೆ ದೇವರ ಮೇಲಿರೋ ಭಕ್ತಿ ಎಷ್ಟು ಬೇಕು ಅಷ್ಟೇ. ಅದು ಭಕ್ತ ಮತ್ತು ಭಗವಂತನಿಗೆ ಸಂಬಂಧಿಸಿದ್ದು ಅಂತ ನಂಬಿದವರು ಸಿದ್ದರಾಮಯ್ಯ.ಮೌಢ್ಯತೆಯನ್ನು ಸದಾ ವಿರೋಧಿಸುವ ಸಿದ್ದರಾಮಯ್ಯ, ಈಗ ದಕ್ಷಿಣ ದ್ವಾರ ಭೇದಿಸೋ ಮೂಲಕ ಮೌಢ್ಯತೆಗೆ ಮತ್ತೊಮ್ಮೆ ಸಡ್ಡು ಹೊಡೆದು ನಿಂತಿದ್ದಾರೆ.

ಇದನ್ನೂ ವೀಕ್ಷಿಸಿ: ಆರ್‌ಎಸ್ಎಸ್‌ ಸಮನ್ವಯ ಬೈಠಕ್‌: ಪುತ್ತೂರು ಗಲಾಟೆ, ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಸಾಧ್ಯತೆ

Related Video