Asianet Suvarna News Asianet Suvarna News

ದ್ವೀಪದಿಂದ ಮೇಲುಕ್ಕಿ ಬಂದ ಲಾವಾ..! ಬೆಂಕಿಯ ಕೆನ್ನಾಲಿಗೆಗೆ ಗ್ರಾಮವೇ ನಾಶ

Sep 23, 2021, 1:03 PM IST

ಇಲ್ಲೊಂದು ಕಡೆ ಜ್ವಾಲಮುಖಿ ಸ್ಫೋಟಗೊಂಡಿದ್ದು ಊರಿಗೆ ಊರೇ ಧಗಧಗನೆ ಉರಿದಿದೆ. ಮನೆಯ ಈಜುಕೊಳಕ್ಕೂ ಲಾವಾರಸ ಅಪ್ಪಳಿಸಿದೆ. ಸ್ಪೇನ್‌ನ ಕ್ಯಾನರಿ ದ್ವೀಪ ಸಮೂಹದಲ್ಲಿರುವ ಲಾ ಲಾಪಾಲ್ಮಾಮಾ ದ್ವೀಪ ಸಮೂಹದಲ್ಲಿ ಲಾವಾರಸ ಹೊರ ಬಂದಿದ್ದು ಎಲ್ಲೆಡೆ ಬೆಂಕಿ ಕಾಣಿಸಿಕೊಂಡಿದೆ. ಈ ದೃಶ್ಯಗಳೇ ನೋಡೋಕೆ ಭಯಂಕರವಾಗಿದೆ.

ದುಬಾರಿ ಬೈಕ್ ಕ್ಷಣ ಮಾತ್ರದಲ್ಲಿ ಪುಡಿಪುಡಿ..! ರಸ್ತೆಗೆ ಬಿದ್ದ ಬೈಕರ್

ಈ ದುರಂತದಲ್ಲಿ ಬಹಳಷ್ಟು ಮನೆಗಳು ನಾಶವಾಗಿದೆ. ಪ್ರಾಣಹಾನಿ ತಪ್ಪಿಸಲು 5 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತ ಮಾಡಲಾಗಿದೆ. ಇದೀಗ ಜ್ವಾಲಾಮುಖಿಯ ಲಾವಾರಸ ಮನೆಯ ಈಜುಕೊಳಕ್ಕೆ ಬಿದ್ದಿರುವ ವಿಡಿಯೋ ವೈರಲ್ ಆಗುತ್ತಿದೆ. ಬೆಂಕಿ ಬಿದ್ದ ಕೂಡಲೇ ಈಜುಕೊಳದ ನೀರು ಕುದಿಯುವುದರೊಂದಿಗೆ ವಿಷಕಾರಿ ಅನಿಲವೈ ಹೆಚ್ಚಾಗಿರುವ ವಿಡಿಯೋ ನೋಡುಗರನ್ನೇ ಬೆಚ್ಚಿಬೀಳಿಸುವಂತಿದೆ.