ಹೇಡಿ, ಸ್ವಾರ್ಥಿ ಅಧ್ಯಕ್ಷ ಅಶ್ರಫ್ ಘನಿ, ಪುಕ್ಕಲು ಸೇನೆ: ಅಫ್ಘನ್ ನಾಗರೀಕರು ಅತಂತ್ರ

ಆಷ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ 4 ಕಾರುಗಳಲ್ಲಿ ಹಾಗೂ 1 ಹೆಲಿಕಾಪ್ಟರ್‌ನಲ್ಲಿ ಹಣ ತುಂಬಿಕೊಂಡು ದೇಶ ಬಿಟ್ಟು ಹೋಗಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ತುಂಬಲಾಗದೇ ಒಂದಷ್ಟು ಹಣವನ್ನು ಬಿಟ್ಟು ಹೋಗಿದ್ದಾರೆ ನಾಲ್ಕು ಕಾರುಗಳಲ್ಲಿ ತುಂಬಾ ಹಣವನ್ನು ತುಂಬಲಾಗಿತ್ತು. 

First Published Aug 18, 2021, 12:10 PM IST | Last Updated Aug 18, 2021, 12:16 PM IST

ಕಾಬೂಲ್ (ಆ. 18):  ಆಷ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್‌ ಘನಿ 4 ಕಾರುಗಳಲ್ಲಿ ಹಾಗೂ 1 ಹೆಲಿಕಾಪ್ಟರ್‌ನಲ್ಲಿ ಹಣ ತುಂಬಿಕೊಂಡು ದೇಶ ಬಿಟ್ಟು ಹೋಗಿದ್ದಾರೆ. ನಾಲ್ಕು ಕಾರುಗಳಲ್ಲಿ ತುಂಬಾ ಹಣವನ್ನು ತುಂಬಲಾಗಿತ್ತು. ಮತ್ತಷ್ಟು ಹಣವನ್ನು ಹೆಲಿಕಾಪ್ಟರ್‌ನಲ್ಲಿ ತುಂಬಲಾಯಿತು. ಆದರೆ ಸಂಪೂರ್ಣ ಹಣವನ್ನು ತುಂಬಲು ಸಾಧ್ಯವಾಗಲಿಲ್ಲ. ಒಂದಷ್ಟು ಹಣ ರಸ್ತೆಯ ಮೆಲೆ ಬಿತ್ತು ಎಂದು ರಷ್ಯಾ ರಾಯಭಾರ ಕಛೇರಿಯ ವಕ್ತಾರರಾದ ನಿಕಿತಾ ಇಶ್ಶೆಂಕೋ ಹೇಳಿದ್ದಾರೆ.

ಅಫ್ಘಾನ್ ಮುಸ್ಲಿಮರನ್ನು ಭಾರತಕ್ಕೆ ಕರೆಸಿಕೊಳ್ಳಿ; ದೇಶದಲ್ಲಿ ಶುರುವಾಯ್ತು ಅಭಿಯಾನ!

'ಈ ದಿನ ನನಗೆ ಕಠಿಣವಾಗಿತ್ತು. ಕಾಬೂಲ್‌ ಅರಮನೆ ಆಕ್ರಮಿಸಲು ಬರುತ್ತಿರುವ ತಾಲಿಬಾನಿಗಳನ್ನು ಎದುರಿಸಿ ನಿಲ್ಲಬೇಕೋ ಅಥವಾ 20 ವರ್ಷಗಳಿಂದ ರಕ್ಷಣೆ ಮಾಡಿದ್ದ ಮಾಡಿದ್ದ ಆಷ್ಘಾನಿಸ್ತಾನವನ್ನು ತೊರೆದು ಹೋಗಬೇಕೋ ಎನ್ನುವ ಆಯ್ಕೆಯಲ್ಲಿ ಸಿಲುಕಿಕೊಂಡಿದ್ದೆ. ಬಿಟ್ಟು ಹೋದರೆ ಅಸಂಖ್ಯಾತ ಪ್ರಜೆಗಳು ಹುತಾತ್ಮರಾಗುತ್ತಾರೆ. ಕಾಬೂಲ್‌ ನಗರವು ಹಾಳಾಗುತ್ತದೆ. ನನ್ನನ್ನು ಪದಚ್ಯುತಗೊಳಿಸಲು ಕಾಬೂಲ್‌ ಜನರ ಮೇಲೆ ದಾಳಿ ನಡೆಸಲು ಸಿದ್ದ ಎಂದು ತಾಲಿಬಾನ್‌ ಹೇಳಿದೆ. ಹಾಗಾಗಿ ರಕ್ತಪಾತವನ್ನು ತಪ್ಪಿಸಲು ದೇಶ ಬಿಡುತ್ತಿದ್ದೇನೆ' ಎಂದು ಅಶ್ರಫ್‌ ಘನಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಘನಿ ನಡೆಯ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.