ಈ ಚುನಾವಣೆಗೆ ಟ್ರಂಪ್ V/S ಕಮಲಾ ಹ್ಯಾರಿಸ್ ಫೈಟ್..? ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ ಜೋ ಬೈಡನ್..?
ಗುಂಡಿನ ದಾಳಿ ನಂತರ ಟ್ರಂಪ್ ಮೇಲೆ ಅನುಕಂಪದ ಅಲೆ
ಟ್ರಂಪ್ ಅನುಕಂಪದಲೆಯಲ್ಲಿ ಮಂಕಾದ ಬೈಡನ್ ವರ್ಚಸ್ಸು
ಬೈಡನ್ ವಿರುದ್ಧ ಟ್ರಂಪ್‌ಗೆ ಸುಲಭ ಗೆಲುವು ಸಿಗಲಿದೆಯಂತೆ
ಬೈಡನ್ ಬದಲಿಗೆ ಕಮಲಾ ಹ್ಯಾರಿಸ್ ಅಭ್ಯರ್ಥಿಯಾಗಿ ಕಣಕ್ಕೆ
ಈ ವರ್ಷ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ( US presidential election)ನಡೆಯಲಿದೆ. ಈ ಚುನಾವಣೆಗೆ ಟ್ರಂಪ್ ಮತ್ತು ಬೈಡನ್ (Joe Biden) ಮಧ್ಯೆ ಪೈಪೋಟಿ ಇರಲಿದೆ ಎಂದು ಹೇಳಲಾಗುತ್ತಿತ್ತು. ಆದ್ರೆ ಈಗ ಇದ್ದಕ್ಕಿದ್ದಂತೆ ಅಮೆರಿಕಾದಲ್ಲಿ(America) ಬದಲಾವಣೆ ಗಾಳಿ ಬೀಸಿದೆ. ಇದ್ದಕ್ಕಿದ್ದಂತೆ ಬೈಡನ್ ವರ್ಚಸ್ಸು ಕಡಿಮೆಯಾಗಿದೆ. ಹೀಗಾಗಿ ಬೈಡನ್ ಚುನಾವಣೆಯಿಂದ ಹಿಂದೆ ಸರಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಅಮೆರಿಕಾದಲ್ಲಿ ಈ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. 2024ರ ನವೆಂಬರ್ 5ರಂದು ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಎಲೆಕ್ಷನ್‌ಗೆ ಇನ್ನು ಮೂರುವರೆ ತಿಂಗಳು ಬಾಕಿ ಇದೆ. ಸಧ್ಯ ಅಮೆರಿಕಾ ಅಧ್ಯಕ್ಷರಾಗಿರುವ ಬೈಡನ್ ಎರಡನೇ ಅವಧಿಗೆ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಹಾಗೆನೆ ಕಳೆದ ಬಾರಿ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ (Donald Trump) ರಿಪಬ್ಲಿಕನ್ ಪಕ್ಷದಿಂದ ಮತ್ತೆ ಸ್ಪರ್ಧೆಯಲ್ಲಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಹಾಲಿ ಅಧ್ಯಕ್ಷ ಬೈಡನ್ ಮತ್ತು ಮಾಜಿ ಅಧ್ಯಕ್ಷ ಟ್ರಂಪ್ ಮಧ್ಯ ಬಿಗ್ ಫೈಟ್ ಇರಲಿದೆ ಎಂದು ಹೇಳಲಾಗುತ್ತಿತ್ತು. ಆದ್ರೆ, ಕಳೆದ ಕೆಲ ದಿನಗಳ ಹಿಂದೆ ಟ್ರಂಪ್ ವರ್ಚಸ್ಸಿನ ಮುಂದೆ ಬೈಡನ್ ಮಂಕಾಗಿದ್ದಾರೆ. ಟ್ರಂಪ್ ವಿರುದ್ಧ ಗೆಲ್ಲುವ ಶಕ್ತಿಯನ್ನು ಬೈಡನ್ ಕಳೆದುಕೊಂಡಿದ್ದಾರೆ. ಹೀಗಾಗಿ ಅಧ್ಯಕ್ಷೀಯ ಚುನಾವಣೆಯಿಂದ ಬೈಡನ್ ಹಿಂದೆ ಸರಿಯಲಿದ್ದಾರೆ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.
ಇದನ್ನೂ ವೀಕ್ಷಿಸಿ: ಹೇಗಿದೆ ಗೊತ್ತಾ ‘ಎಕ್ಸ್’ ಖಾತೆಯಲ್ಲಿ ಮೋದಿ ಹಾದಿ..? ಯಾವ್ಯಾವ ರಾಜಕಾರಣಿಗಳಿಗೆ ಎಷ್ಟೆಷ್ಟು ಫಾಲೋವರ್ಸ್?