ಹೇಗಿದೆ ಗೊತ್ತಾ ‘ಎಕ್ಸ್’ ಖಾತೆಯಲ್ಲಿ ಮೋದಿ ಹಾದಿ..? ಯಾವ್ಯಾವ ರಾಜಕಾರಣಿಗಳಿಗೆ ಎಷ್ಟೆಷ್ಟು ಫಾಲೋವರ್ಸ್?

ಮೋದಿ ಹಿಂದಿದ್ದಾರೆ 10 ಕೋಟಿ ಅಭಿಮಾನಿಗಳು
ಜಗತ್ತಿನ ಟಾಪ್ ಶ್ರೀಮಂತನೇ ಮೋದಿ ಅಭಿಮಾನಿ
ಲೋಕನಾಯಕನ ಕೀರ್ತಿಗೆ ಮತ್ತೊಂದು ಕಿರೀಟ

First Published Jul 22, 2024, 10:41 AM IST | Last Updated Jul 22, 2024, 10:41 AM IST

ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಗದ್ದುಗೆ ಏರುವ ಮೂಲಕ ದೇಶದಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ. ದಶಮಾನಗಳ ಕಾಲ ಗದ್ದುಗೆ ಹತ್ತಿ ಕೂತಿದ್ದ ಮೋದಿ(Narendra Modi) ಮತ್ತೆ ತಮ್ಮ ಆಡಳಿತ ಮುಂದುವರೆಸಿದ್ದಾರೆ. ನೆಹರೂ ಅವರನ್ನ ಬಿಟ್ರೆ, ಸತತ ಮೂರು ಬಾರಿ ಪ್ರಧಾನಿಯಾದ ಕೀರ್ತಿ, ನರೇಂದ್ರ ಮೋದಿ ಅವರ ಪಾಲಾಗಿದೆ. ಮೋದಿ ಅಂದ್ರೆ ಟ್ರೆಂಡ್, ಮೋದಿ ಅಂದ್ರೆ ಬ್ರ್ಯಾಂಡ್. ಈ ಮಾತು ಇವತ್ತಿಗೂ ಚಾಲ್ತಿಯಲ್ಲಿದೆ. ಅನೇಕ ಮಂದಿ, 2024ರ ಚುನಾವಣೆಯ ಫಲಿತಾಂಶದ ನಂತರ, ಮೋದಿ ಹೆಸರಿನ ಅಲೆ ಕಡಿಮೆಯಾಗಬಹುದು ಅನ್ನೋ ಲೆಕ್ಕಾಚಾರ ಹಾಕಿದ್ರು. ಆದ್ರೆ, ಅದೆಲ್ಲವೂ ತಲೆಕೆಳಗಾದ ಹಾಗೆ ಕಾಣ್ತಾ ಇದೆ. ಸುಮಾರು ಒಂದು ವರ್ಷದ ಹಿಂದೆ, ಎಲಾನ್ ಮಸ್ಕ್(Elon Musk ) ಈ ಮಾತನ್ನ ಹೇಳಿದ್ರು. ಮಸ್ಕ್ ಮನದ ಮಾತು, ಅಭಿನಂದನೆಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ, ನೀವೀಗ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವನಾಯಕ. ಸಾಮಾಜಿಕ ತಾಣ ಮಾಧ್ಯಮ, ಮಾಜಿ ಟ್ವಿಟರ್ ಹಾಲಿ ಎಕ್ಸ್‌ನಲ್ಲಿ(X Followers) ಮೋದಿ ಅದ್ವಿತೀಯ ಸಾಧನೆಯೊಂದನ್ನ ಮಾಡಿದ್ದಾರೆ. ಮೋದಿ ಅವರ ಟ್ವಿಟರ್ ಅಕೌಂಟ್‌ನನ್ನ ಬರೋಬ್ಬರಿ 100 ಮಿಲಿಯನ್ ಜನ, ಅಂದ್ರೆ 10 ಕೋಟಿಗೂ ಅಧಿಕ ಮಂದಿ ಫಾಲೋ ಮಾಡ್ತಾ ಇದಾರೆ.

ಇದನ್ನೂ ವೀಕ್ಷಿಸಿ:  ಎದೆ ಝಲ್ ಎನಿಸುವ ಭಯಂಕರ ಪ್ರವಾಹದ 15 ಭೀಕರ ದೃಶ್ಯಗಳು! ಮಹಾಮಳೆಗೆ ಏಕಾಏಕಿ ಕುಸಿದು ಬಿತ್ತು ಬೃಹತ್ ಕಟ್ಟಡ!

Video Top Stories