Suvarna Focus: ಜಗತ್ತಿನ ವಿನಾಶಕ್ಕೆ ಮುನ್ನುಡಿ ಬರೆಯುತ್ತಾ ಅಮೆರಿಕದ ಸಾಹಸ?

ಅಮೆರಿಕವು 'ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್' ಹೆಸರಿನಲ್ಲಿ ವೆನೆಜುವೇಲಾ ಮೇಲೆ ದಾಳಿ ನಡೆಸಿ, ಅಧ್ಯಕ್ಷ ಮಡುರೊ ದಂಪತಿಯನ್ನು ಅಪಹರಿಸಿದೆ. ಪೆಟ್ರೋಡಾಲರ್ ಅಧಿಪತ್ಯ ಮತ್ತು ತೈಲ ನಿಕ್ಷೇಪವನ್ನು ಲೂಟಿ ಮಾಡುವ ಉದ್ದೇಶ ಈ ದಾಳಿಯ ಹಿಂದಿದೆ ಎಂದು ಶಂಕಿಸಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ.5): ಜನೆವರಿ 3ರ ಬೆಳ್ಳಂಬೆಳಿಗ್ಗೆ ಅಮೆರಿಕದ 150ಕ್ಕೂ ಹೆಚ್ಚು ಯುದ್ಧವಿಮಾನಗಳು ವೆನೆಜುವೇಲಾದ ಆಕಾಶದಲ್ಲಿ ಅಬ್ಬರಿಸಿದವು. 'ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್' ಹೆಸರಿನಡಿ ನಡೆದ ಈ ದಾಳಿಯಲ್ಲಿ ಮಡುರೊ ದಂಪತಿಯನ್ನು ಅಪಹರಿಸಿದ ಅಮೆರಿಕ ಪಡೆಗಳು ನೇರವಾಗಿ ನ್ಯೂಯಾರ್ಕ್ ಜೈಲಿಗೆ ತಂದು ಹಾಕಿವೆ.

ಡ್ರಗ್ಸ್‌, ತೈಲ ಎಲ್ಲವೂ ಕುಂಟುನೆಪ..ವೆನುಜುವೇಲ ಮೇಲೆ ಅಮೆರಿಕ ದಾಳಿ ಮಾಡಿದ್ದಕ್ಕೆ ಇದೊಂದೇ ಕಾರಣ..

ಪೆಟ್ರೋಡಾಲರ್ ಅಧಿಪತ್ಯವನ್ನು ಉಳಿಸಿಕೊಳ್ಳಲು ಅಮೆರಿಕ ಈ ಸಾಹಸಕ್ಕೆ ಇಳಿದಿದೆಯಾ? ಅಥವಾ ಜಗತ್ತಿನ ಅತಿದೊಡ್ಡ ತೈಲ ನಿಕ್ಷೇಪವನ್ನು ಲೂಟಿ ಮಾಡಲು ಹೂಡಿರುವ ಸಂಚಾ ಇದು?

ಅಮೆರಿಕದ ಈ ನಿರ್ಧಾರ ಇಡೀ ಜಗತ್ತಿನ ರಾಜತಾಂತ್ರಿಕ ಸಮತೋಲನವನ್ನೇ ಕೆಡಿಸಿದೆ. ಈಗಾಗಲೇ ರಷ್ಯಾ-ಉಕ್ರೇನ್ ಯುದ್ಧದಿಂದ ತತ್ತರಿಸಿರೋ ಜಗತ್ತಿಗೆ ಟ್ರಂಪ್ ಆಟ ಯಾವ ಟ್ವಿಸ್ಟ್ ಕೊಡಬಹುದು ಅನ್ನೋದೇ ಮುಂದಿರುವ ಕುತೂಹಲ.

Related Video