Asianet Suvarna News Asianet Suvarna News

ಪ್ರಸಿದ್ಧ ಗನ್‌-ಲಾಬಿ ಸಂಸ್ಥೆ ದಿವಾಳಿ, ಈತ ಕೋಟಿಗಳ ಒಡೆಯನಾದ್ರೂ ನಯಾಪೈಸೆ ಇಲ್ವಂತೆ..!

ಅಮೆರಿಕಾದ ಪ್ರಸಿದ್ಧ ಗನ್‌-ಲಾಬಿ ಸಂಸ್ಥೆ ನ್ಯಾಶನಲ್ ರೈಫಲ್ಸ್ ಅಸೋಸಿಯೇಶನ್ (NRA)ದಿವಾಳಿಯಾಗಿದೆಯಂತೆ. ಎನ್‌ಆರ್‌ಎ  ಮುಖ್ಯಸ್ಥರ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ಮತ್ತು ತಮ್ಮ ಕುಟುಂಬಸ್ಥರಿಗೆ ಲಾಭವಾಗುವಂತೆ ವ್ಯವಹಾರ ಕೇಳಿ ಬಂದಿದೆ.  

ವಾಷಿಂಗ್‌ಟನ್ (ಜ. 16): ಅಮೆರಿಕಾದ ಪ್ರಸಿದ್ಧ ಗನ್‌-ಲಾಬಿ ಸಂಸ್ಥೆ ನ್ಯಾಶನಲ್ ರೈಫಲ್ಸ್ ಅಸೋಸಿಯೇಶನ್ (NRA)ದಿವಾಳಿಯಾಗಿದೆಯಂತೆ. ಎನ್‌ಆರ್‌ಎ  ಮುಖ್ಯಸ್ಥರ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ಮತ್ತು ತಮ್ಮ ಕುಟುಂಬಸ್ಥರಿಗೆ ಲಾಭವಾಗುವಂತೆ ವ್ಯವಹಾರ ಕೇಳಿ ಬಂದಿದೆ.  ಅಮೆರಿಕಾ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಕೊರೋನಾವೈರಸ್‌ ವಿರುದ್ಧ ಸಮರವನ್ನು ಮುಂದುವರಿಸಿದ್ದಾರೆ. ಕೊರೋನಾ ವ್ಯಾಕ್ಸಿನ್‌ಅನ್ನು ಜನಸಾಮಾನ್ಯರಿಗೆ ತಲುಪಿಸುವ ಹೊಸ ಯೋಜನೆಯನ್ನು ಪ್ರಕಟಿಸಿದ್ದಾರೆ.

ಚೀನಾದಲ್ಲಿ ಐಸ್‌ಕ್ರೀಂನಲ್ಲೂ ಕೊರೊನಾ ವೈರಸ್ ಪತ್ತೆಯಾಗಿದೆ. ನಾರ್ವೆಯಲ್ಲಿ ಫೈಝರ್ ಕೊರೋನಾ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ, ಸೈಡ್‌ಎಫೆಕ್ಟ್‌ನಿಂದಾಗಿ 23 ಮಂದಿ ಸಾವನ್ನಪ್ಪಿದ್ದಾರೆಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.  ಈತ 2048 ಕೋಟಿಗಳ ಒಡೆಯ, ಆದರೆ ನಯಾಪೈಸೆ ಕೈಯಲ್ಲಿಲ್ಲ! ಇಂಗ್ಲೆಂಡ್‌ನ ಜೇಮ್ಸ್ ಹಾವೆಲ್‌ ಎಂಬಾತನಿಗೆ ಈ ಪರಿಸ್ಥಿತಿ ಎದುರಾಗಿದೆ. ಇವೆಲ್ಲಾ ಸುದ್ದಿಗಳ ಸಂಕ್ಷಿಪ್ತ ಮಾಹಿತಿ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..!