
Russia-Ukraine Crisis: ರಷ್ಯಾ ಸೇನೆ ವಿರುದ್ಧ ಹೋರಾಟಕ್ಕಿಳಿದ ಉಕ್ರೇನ್ ನಾಗರಿಕರು
ಉಕ್ರೇನ್ ಮೇಲೆ ರಷ್ಯಾ ಘೋಷಿಸಿರುವ ಯುದ್ಧ 4 ನೇ ದಿನಕ್ಕೆ ಕಾಲಿಟ್ಟಿದೆ. ರಾಜಧಾನಿ ಕೀವ್ ವಶಕ್ಕೆ ರಷ್ಯಾ ತನ್ನ ಯತ್ನವನ್ನು ಮುಂದುವರೆಸಿದೆ. ದಾಳಿಯಲ್ಲಿ ನಾಗರೀಕರ ಸಾವು ತಪ್ಪಿಸುವ ನಿಟ್ಟಿನಲ್ಲಿ ಕೀವ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ಘೋಷಿಸಿರುವ ಯುದ್ಧ 4 ನೇ ದಿನಕ್ಕೆ ಕಾಲಿಟ್ಟಿದೆ. ರಾಜಧಾನಿ ಕೀವ್ ವಶಕ್ಕೆ ರಷ್ಯಾ ತನ್ನ ಯತ್ನವನ್ನು ಮುಂದುವರೆಸಿದೆ. ದಾಳಿಯಲ್ಲಿ ನಾಗರೀಕರ ಸಾವು ತಪ್ಪಿಸುವ ನಿಟ್ಟಿನಲ್ಲಿ ಕೀವ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಉಕ್ರೇನ್‌ನ ತೈಲ ಘಟಕಗಳ ಮೇಲೆ ರಷ್ಯಾ ದಾಳಿ ನಡೆಸಿದೆ.
Russia-Ukraine Crisis: ಈವರೆಗೆ 709 ಜನರನ್ನು ಏರ್‌ಲಿಫ್ಟ್ ಮಾಡಿದೆ ಭಾರತ
ಎಲ್ಲೆಡೆ ಬಾಂಬ್, ಕ್ಷಿಪಣಿಗಳ ಸದ್ದು ಕೇಳಿ ಬರುತ್ತಿದೆ. ರಷ್ಯನ್ ಸೇನೆಗೆ ಉಕ್ರೇನ್ ಸೇನೆ ಪ್ರತಿರೋಧ ಒಡ್ಡಿದರೂ, ಬೃಹತ್ ಸೇನೆ ಎದುರು, ಉಕ್ರೇನ್ ಬಡವಾಗಿದೆ. ಸಣ್ಣ ಸಣ್ಣ ನಗರಗಳ ಮೇಲೆ ದಾಳಿ ನಡೆಯುತ್ತಿದ್ದು, 7 ವರ್ಷದ ಬಾಲಕಿ ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ.