Russia-Ukraine Crisis: ಈವರೆಗೆ 709 ಜನರನ್ನು ಏರ್‌ಲಿಫ್ಟ್ ಮಾಡಿದೆ ಭಾರತ

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಏರ್‌ಲಿಫ್ಟ್ ಆರಂಭಿಸಿದೆ. 219 ಭಾರತೀಯರನ್ನು ಹೊತ್ತ ಮೊದಲ ವಿಮಾನ ಶನಿವಾರ ಮುಂಬೈಗೆ ಬಂದಿಳಿದಿದೆ. ಇಂದು 12 ಮಂದಿ ವಿದ್ಯಾರ್ಥಿಗಳು ಇನ್ನೊಂದು ವಿಮಾನದಲ್ಲಿ ಆಗಮಿಸಿದ್ದಾರೆ.

First Published Feb 27, 2022, 1:30 PM IST | Last Updated Feb 27, 2022, 2:01 PM IST

ಬೆಂಗಳೂರು (ಫೆ. 27):  ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಏರ್‌ಲಿಫ್ಟ್ ಆರಂಭಿಸಿದೆ. 219 ಭಾರತೀಯರನ್ನು ಹೊತ್ತ ಮೊದಲ ವಿಮಾನ ಶನಿವಾರ ಮುಂಬೈಗೆ ಬಂದಿಳಿದಿದೆ. ಇಂದು 12 ಮಂದಿ ವಿದ್ಯಾರ್ಥಿಗಳು ಇನ್ನೊಂದು ವಿಮಾನದಲ್ಲಿ ಆಗಮಿಸಿದ್ದಾರೆ. ಬಂದ ವಿದ್ಯಾರ್ಥಿಗಳನ್ನು ಸಚಿವ ಆರ್ ಅಶೋಕ್ ಬರಮಾಡಿಕೊಂಡಿದ್ದಾರೆ. 

Ukraine Crisis: ವಾಪಸ್ಸಾದ ವಿದ್ಯಾರ್ಥಿಗಳನ್ನು ಭೇಟಿಯಾದ ಪ್ರಹ್ಲಾದ್ ಜೋಶಿ

ಈವರೆಗೆ 709 ಜನರನ್ನು ಭಾರತ ಏರ್‌ಲಿಫ್ಟ್ ಮಾಡಿದೆ. ಮೊದಲ ವಿಮಾನದಲ್ಲಿ 219ಮ 2 ನೇ ವಿಮಾನದಲ್ಲಿ 250, 3 ನೇ ವಿಮಾನದಲ್ಲಿ 240 ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಇನ್ನೂ ರಕ್ಷಣಾ ಕಾರ್ಯ ಮುಂದುವರೆದಿದೆ. ಈ ಆಪರೇಶನ್‌ಗೆ 'ಆಪರೇಶನ್ ಗಂಗಾ' ಎಂದು ಹೆಸರಿಡಲಾಗಿದೆ.