Ukraine Russia Tension : ಯುದ್ಧದ ಆತಂಕ ಹೆಚ್ಚಿಸಿದ ರಷ್ಯಾದ ಸಮರಾಭ್ಯಾಸ
ಉಕ್ರೇನ್-ರಷ್ಯಾ ನಡುವೆ ಯುದ್ಧದ ವಾತಾವರಣ
ಕಳವಳ ಹೆಚ್ಚಿಸಿದ ರಷ್ಯಾದ ಸೇನಾ ಅಭ್ಯಾಸ
ಶೇ.70ರಷ್ಟು ಸೇನೆಯನ್ನು ಉಕ್ರೇನ್ ಗಡಿ ಬಳಿ ನಿಯೋಜಿಸಿದ ರಷ್ಯಾ
ಬೆಂಗಳೂರು (ಫೆ. 11): ನೆರೆಯ ರಾಷ್ಟ್ರಗಳಾದ ಉಕ್ರೇನ್ (Ukraine) ಹಾಗೂ ರಷ್ಯಾ (Russia ) ನಡುವೆ ದಿನಕಳೆದಂತೆ ಯುದ್ಧಭೀತಿ ಹೆಚ್ಚಾಗುತ್ತಿದೆ. ಉಕ್ರೇನ್ ಗಡಿಯಲ್ಲಿ ತನ್ನ ಶೇ. 70ರಷ್ಟು ಸೇನೆಯನ್ನು ನಿಯೋಜನೆ ಮಾಡಿರುವ ರಷ್ಯಾ ದೇಶವು ಈಗಾಗಲೇ ತನ್ನ ಸೇನೆಗೆ (Russian Army) ಯುದ್ಧಾಭ್ಯಾಸದಲ್ಲಿ ಭಾಗಿಯಾಗುವಂತೆ ಸೂಚನೆ ನೀಡಿದೆ. ಇನ್ನು ನ್ಯಾಟೋ (NATO) ಪಡೆಗಳಿಗೆ ಎಚ್ಚರಿಕೆ ನೀಡಿರುವ ರಷ್ಯಾವು, ಯಾವುದೇ ಕಾರಣಕ್ಕೂ ತಂಟೆ ಏಳಿಸುವ ಸಾಹಸ ಮಾಡಬೇಡಿ, ಅಣುಬಾಂಬ್ ಅಸ್ತ್ರವೂ ನಮ್ಮಲ್ಲಿದೆ ಎಂದು ರಷ್ಯಾ ಎಚ್ಚರಿಸಿದೆ.
Russia Ukraine Crisis: ಉಕ್ರೇನ್-ರಷ್ಯಾ ‘ಯುದ್ಧ ಕಾರ್ಮೋಡ’
ರಷ್ಯಾ ಹಾಗೂ ಉಕ್ರೇನ್ ನಡುವಿನ ಭಿನ್ನಾಭಿಪ್ರಾಯ ಯುದ್ಧದ ಅಂಚಿನವರೆಗೆ ಸಾಗುವ ಸಾಧ್ಯತೆಗಳು ದಟ್ಟವಾಗಿದೆ. ಗಡಿಯುದ್ದಕ್ಕೂ ಉಭಯ ದೇಶಗಳು ಲಕ್ಷಾಂತರ ಸೈನಿಕರನ್ನು ನಿಯೋಜನೆ ಮಾಡಿವೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಯುದ್ಧ ಶುರುವಾಗಬಹುದು ಎಂಬ ಸ್ಥಿತಿ ಅಲ್ಲಿದೆ. ಹಲವು ತಿಂಗಳಿನಿಂದ ಉಕ್ರೇನ್ ಗಡಿಯಲ್ಲಿ ರಷ್ಯಾ ಪಡೆಗಳು ಬೀಡು ಬಿಟ್ಟಿರುವುದಕ್ಕೆ ಅಮೆರಿಕ ನೇತೃತ್ವದ ನ್ಯಾಟೋ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ರಷ್ಯಾ ಬೆದರಿಕೆ ಹಿನ್ನೆಲೆಯಲ್ಲಿ ಉಕ್ರೇನ್ ಪರವಾಗಿ ಅಮೆರಿಕ ತನ್ನ 8,500 ಪಡೆಗಳನ್ನು ನಿಯೋಜಿಸುತ್ತಿದೆ.