Russia Ukraine Crisis: ಉಕ್ರೇನ್-ರಷ್ಯಾ ‘ಯುದ್ಧ ಕಾರ್ಮೋಡ’
ನೆರೆಯ ಉಕ್ರೇನ್ ಮೇಲೆ ರಷ್ಯಾದ ದಾಳಿ ಸಾಧ್ಯತೆ ದಟ್ಟವಾಗುತ್ತಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ. ಇದರ ಬೆನ್ನಲ್ಲೇ, ದಾಳಿಗೆ ಅಗತ್ಯವಾದ ಒಟ್ಟಾರೆ ಸೇನೆಯ ಪೈಕಿ ಶೇ.70ರಷ್ಟನ್ನು ಈಗಾಗಲೇ ರಷ್ಯಾ ಉಕ್ರೇನ್ ಗಡಿಯಲ್ಲಿ ರವಾನಿಸಿದೆ ಎಂದು ಅಮೆರಿಕದ ಗುಪ್ತಚರ ಪಡೆಗಳು ಹೇಳಿವೆ.
ಮಾಸ್ಕೋ/ನ್ಯೂಯಾರ್ಕ್ (ಫೆ.07): ನೆರೆಯ ಉಕ್ರೇನ್ (Ukraine) ಮೇಲೆ ರಷ್ಯಾದ (Russia) ದಾಳಿ ಸಾಧ್ಯತೆ ದಟ್ಟವಾಗುತ್ತಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ. ಇದರ ಬೆನ್ನಲ್ಲೇ, ದಾಳಿಗೆ ಅಗತ್ಯವಾದ ಒಟ್ಟಾರೆ ಸೇನೆಯ ಪೈಕಿ ಶೇ.70ರಷ್ಟನ್ನು ಈಗಾಗಲೇ ರಷ್ಯಾ ಉಕ್ರೇನ್ ಗಡಿಯಲ್ಲಿ ರವಾನಿಸಿದೆ ಎಂದು ಅಮೆರಿಕದ ಗುಪ್ತಚರ ಪಡೆಗಳು ಹೇಳಿವೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ 2000 ಯೋಧರ ಪಡೆಯನ್ನು ನ್ಯಾಟೋ ಪಡೆಗಳಿಗೆ ಸಹಾಯ ನೀಡಲು ರವಾನಿಸಿದೆ. ಇದು ತ್ವೇಷ ಪರಿಸ್ಥಿತಿಯ ಸಂಕೇತವಾಗಿದೆ.
ರಷ್ಯಾ ಸಜ್ಜು: ಈಗಾಗಲೇ ರಷ್ಯಾ ಸೇನೆ ಉಕ್ರೇನ್ ಗಡಿಯಲ್ಲಿ 1 ಲಕ್ಷದಷ್ಟು ಸೈನಿಕರು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಜ್ಜುಗೊಳಿಸಿದೆ. ಮುಂದಿನ ಕೆಲ ದಿನಗಳಲ್ಲಿ ಇಲ್ಲಿ ಮೈಕೊರೆವ ಹಿಮ ಆವರಿಸಿಕೊಳ್ಳಲಿದ್ದು, ರಷ್ಯಾ ತನ್ನ ಸೇನಾ ಬಲವನ್ನು ಹೆಚ್ಚಿಸಲು ನೆರವು ನೀಡಲಿದೆ. ಸದ್ಯದ ಅಂದಾಜಿನ ಪ್ರಕಾರ ದಾಳಿಗೆ ಅಗತ್ಯವಾದ ಸೇನೆಯ ಪೈಕಿ ಶೆ.70ರಷ್ಟನ್ನು ರಷ್ಯಾ ಈಗಾಗಲೇ ಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಟ್ಟಿದೆ. ಒಂದು ವೇಳೆ ದಾಳಿ ನಡೆದಿದ್ದೇ ಹೌದಾದಲ್ಲಿ ಕನಿಷ್ಠ 50 ಸಾವಿರ ನಾಗರಿಕರು ಸಾವನ್ನಪ್ಪಲಿದ್ದಾರೆ ಎಂದು ಅಮೆರಿಕದ ಗುಪ್ತಚರ ಇಲಾಖೆ ಹೇಳಿದೆ.
ಅಮೆರಿಕ ಸೇನೆ ರವಾನೆ: ಈ ನಡುವೆ ಸಂಭವನೀಯ ಯುದ್ಧದ ವೇಳೆ ರಷ್ಯಾದ ಮೇಲೆ ಪ್ರತಿದಾಳಿ ನಡೆಸಲು ಸೇನೆಯನ್ನು ಕಳುಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈಗಾಗಲೇ ಘೋಷಣೆ ಮಾಡಿರುವರಾದರೂ, ನ್ಯಾಟೋ ಪಡೆಯ ಬಾಧ್ಯತೆಯನ್ನು ಪೂರೈಸುವ ಸಲುವಾಗಿ 2000 ಯೋಧರನ್ನು ಯುರೋಪ್‌ಗೆ ರವಾನಿಸಿದೆ. ಅವರು ಜರ್ಮನಿ ಮತ್ತು ಪೋಲೆಂಡ್‌ಗೆ ಬಂದು ಇಳಿದಿದ್ದಾರೆ ಎಂದು ಅಮೆರಿಕ ಸೇನೆ ಮಾಹಿತಿ ನೀಡಿದೆ.
Russia Ukraine Crisis: ಉಕ್ರೇನ್ ಸರ್ಕಾರ ಬೀಳಿಸಲು ರಷ್ಯಾ ಪ್ರಯತ್ನಿಸುತ್ತಿದೆಯೆಂದು ಬ್ರಿಟನ್ ಗಂಭೀರ ಆರೋಪ
ರಷ್ಯಾ-ಉಕ್ರೇನ್ ಬಿಕ್ಕಟ್ಟಿಗೆ ಏನು ಕಾರಣ?
- ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ ಯುರೋಪ್ ಒಕ್ಕೂಟದತ್ತ ವಾಲುತ್ತಿರುವುದು ರಷ್ಯಾ ಆಕ್ರೋಶಕ್ಕೆ ಕಾರಣ
- ಉಕ್ರೇನ್‌ಗೆ ನ್ಯಾಟೋದ ಪಾಲುದಾರ ಸ್ಥಾನಮಾನ ಪ್ರಸ್ತಾಪಕ್ಕೆ ರಷ್ಯಾದ ತೀವ್ರ ವಿರೋಧ. ಪ್ರಸ್ತಾಪ ಹಿಂಪಡೆವಂತೆ ಬೆದರಿಕೆ
- ಉಕ್ರೇನ್‌ಗೆ ನ್ಯಾಟೋ ದೇಶಗಳು ಶಸ್ತ್ರಾಸ್ತ್ರ ಮತ್ತು ಇತರೆ ಮಿಲಿಟಿ ನೆರವು ನೀಡುತ್ತಿರುವುದನ್ನು ರಷ್ಯಾ ತೀವ್ರ ವಿರೋಧಿಸುತ್ತಿದೆ
- ಉಕ್ರೇನ್‌ನಲ್ಲಿ ತನ್ನ ಕೈಗೊಂಬೆ ಸರ್ಕಾರ ರಚಿಸುವ ರಷ್ಯಾ ಯತ್ನಕ್ಕೆ ಅಮೆರಿಕ, ಯುರೋಪ್ ದೇಶಗಳ ಅಡ್ಡಗಾಲು ಪ್ರಯತ್ನ
3ನೇ ವಿಶ್ವ ಯುದ್ಧಕ್ಕೆ ನಾಂದಿ ಹಾಡುತ್ತಾ: ಸೋವಿಯತ್ ಒಕ್ಕೂಟದ ಭಾಗಗಳಾಗಿದ್ದ ರಷ್ಯಾ ಮತ್ತು ಉಕ್ರೇನ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿವೆ. ಗಡಿಯುದ್ದಕ್ಕೂ ಉಭಯ ದೇಶಗಳು ಲಕ್ಷಾಂತರ ಸೈನಿಕರನ್ನು ನಿಯೋಜನೆ ಮಾಡಿವೆ. ಯಾವುದೇ ಕ್ಷಣದಲ್ಲಿ ಬೇಕಾದರೂ ಯುದ್ಧ ಶುರುವಾಗಬಹುದು ಎಂಬ ಸ್ಥಿತಿ ಅಲ್ಲಿದೆ. ಹಲವು ತಿಂಗಳಿನಿಂದ ಉಕ್ರೇನ್ ಗಡಿಯಲ್ಲಿ ರಷ್ಯಾ ಪಡೆಗಳು ಬೀಡು ಬಿಟ್ಟಿರುವುದಕ್ಕೆ ಅಮೆರಿಕ ನೇತೃತ್ವದ ನ್ಯಾಟೋ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ. ರಷ್ಯಾ ಬೆದರಿಕೆ ಹಿನ್ನೆಲೆಯಲ್ಲಿ ಉಕ್ರೇನ್ ಪರವಾಗಿ ಅಮೆರಿಕ ತನ್ನ 8,500 ಪಡೆಗಳನ್ನು ನಿಯೋಜಿಸುತ್ತಿದೆ.
ಉಕ್ರೇನ್ ಸುತ್ತಲೂ ರಷ್ಯಾ ತನ್ನ ಸೈನಿಕರನ್ನು ನಿಯೋಜಿಸಿದ್ದು, ಅವರ ಚಲನವಲನವು ಅಸಹಜ ಎಂದು ಅಮೆರಿಕ ಮತ್ತು ನ್ಯಾಟೋ ಹೇಳಿವೆ. ಜೋ ಬೈಡನ್ ಮತ್ತು ಯುರೋಪಿಯನ್ ನಾಯಕರ ಎಚ್ಚರಿಕೆಯ ನಡುವೆಯೂ ಪುಟಿನ್ ತಮ್ಮ 1 ಲಕ್ಷ ರಷ್ಯಾ ಪಡೆಗಳನ್ನು ಉಕ್ರೇನ್ ಗಡಿಯಲ್ಲಿ ನಿಯೋಜಿಸಿದ್ದಾರೆ. ಶೀಘ್ರದಲ್ಲಿಯೇ ಅದು ಉಕ್ರೇನ್‌ನಲ್ಲಿ ತನ್ನ ಸೇನಾ ಕಾರ್ಯಾಚರಣೆಗಳನ್ನು ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೂರನೇ ವಿಶ್ವ ಯುದ್ಧ ಶುರುವಾಗುತ್ತಾ ಎಂಬ ಭೀತಿ ಎದುರಾಗಿದೆ.
Vladimir Putin ಸೀಕ್ರೆಟ್ ಪ್ಯಾಲೇಸ್, 750 ಕೋಟಿ ಮೌಲ್ಯದ ಅರಮನೆ ಹೀಗಿದೆ
ರಷ್ಯಾ ಮತ್ತು ಉಕ್ರೇನ್ ನಡುವೆ ಇರುವುದು ಗಡಿ ಪ್ರದೇಶದ ವಿವಾದ. 1949ರಲ್ಲಿ ಸೋವಿಯತ್ ಒಕ್ಕೂಟದ ಆಕ್ರಮಣಶೀಲತ್ವವನ್ನು ಎದುರಿಸಲು NATO ಒಕ್ಕೂಟವನ್ನು ರಚಿಸಲಾಗಿತ್ತು. ಒಂದು ಕಾಲದಲ್ಲಿ ಸೋವಿಯತ್ ಒಕ್ಕೂಟದ ಸದಸ್ಯ ದೇಶಗಳಾಗಿದ್ದ ಲಿಥುವೇನಿಯಾ, ಎಸ್ಟೋನಿಯಾ ಸೇರಿದಂತೆ 30 ಸದಸ್ಯ ದೇಶಗಳೊಂದಿಗೆ ಈ ಮೈತ್ರಿಕೂಟವಿದೆ. ಒಪ್ಪಂದದ ಪ್ರಕಾರ ನ್ಯಾಟೋ ಸದಸ್ಯ ದೇಶಗಳಲ್ಲಿ ಯಾವುದೇ ಒಂದು ದೇಶದ ಮೇಲೆ ಮೂರನೇ ದೇಶ ದಾಳಿ ನಡೆಸಿದರೆ, ಇಡೀ ಮೈತ್ರಿಕೂಟ ಅದರ ರಕ್ಷಣೆಗೆ ಜತೆಗೂಡಬೇಕು. ಈ ಹಿನ್ನೆಲೆಯಲ್ಲಿ ಉಕ್ರೇನ್ ಹಾಗೂ ರಷ್ಯಾ ನಡುವಿನ ಈ ಸಮರ ಮೂರನೇ ವಿಶ್ವ ಯುದ್ಧಕ್ಕೆ ನಾಂದಿ ಹಾಡುತ್ತಾ ಎಂಬ ಭೀತಿ ಶುರುವಾಗಿದೆ.