Asianet Suvarna News Asianet Suvarna News

ಮಹಾ ಭೂಕಂಪಕ್ಕೆ ಟರ್ಕಿ & ಸಿರಿಯಾ ತತ್ತರ: 4 ಸಾವಿರ ಜನರು ಬಲಿ

ಟರ್ಕಿ ಹಾಗೂ ಸಿರಿಯಾ ಸಂಭವಿಸಿದ ಭೂಕಂಪಕ್ಕೆ 4 ಸಾವಿರ ಜನರು ಸಾವನ್ನಪ್ಪಿದ್ದು, ಭಾರತವು ನೆರವಿಗೆ ಧಾವಿಸಿದೆ.

ಮಹಾ ಭೂಕಂಪಕ್ಕೆ ಟರ್ಕಿ ಹಾಗೂ ಸಿರಿಯಾ ದೇಶಗಳು ತತ್ತರಿಸಿ ಹೋಗಿದ್ದು, 4000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ತ್ರಿವಳಿ ಭೂಕಂಪಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳು ನಲುಗಿ ಹೋಗಿದ್ದು, ಸಾವಿರಾರು ಕಟ್ಟಡಗಳು ನೆಲಸಮ ಆಗಿವೆ. ಹಾಗೂ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಟರ್ಕಿ ಸಿರಿಯಾ ಸೇರಿ 8 ದೇಶಗಳಲ್ಲಿ ಭೂಕಂಪದ ದುಷ್ಪರಿಣಾಮ ಉಂಟಾಗಿದ್ದು, ರಿಕ್ಟರ್‌ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪನ ದಾಖಲಾಗಿದೆ. ಟರ್ಕಿಯಲ್ಲಿ ಹೊತ್ತಿ ಉರಿದ ಪರಮಾಣು ಘಟಕ ಹೊತ್ತಿ ಉರಿದಿದೆ. ರಸ್ತೆಯಲ್ಲಿಯೇ ಜನರು ವಾಸ ಮಾಡಿದ್ದು, ಚಳಿಗೆ ಸಂತ್ರಸ್ತರು ತತ್ತರಿಸಿದ್ದಾರೆ.

ಹೆಚ್‌ಎಎಲ್ ಹೆಲಿಕಾಪ್ಟರ್ ಘಟಕದ ಬಗ್ಗೆ ನಿಮಗೆಷ್ಟು ಗೊತ್ತು?: ಇಲ್ಲಿದೆ ಇಂಟ್ರೆಸ್ಟಿಂಗ್ ಸೀಕ್ರೆಟ್ಸ್