Asianet Suvarna News Asianet Suvarna News

ಸೋಲೋಪ್ಪಿಕೊಳ್ಳಲು ಟ್ರಂಪ್ ನಕಾರ, ಪತ್ನಿ ಮನವೊಲಿಕೆ, ಚೀನಾದ ಶಾಂಘೈನಲ್ಲಿ ಹೊಸ ಕೊರೋನಾ ಕೇಸ್

ಅಮೆರಿಕಾದಲ್ಲಿ ಕೊರೊನಾ ಸೋಂಕು ತಡೆಗೆ ಬೈಡೆನ್ ತಜ್ಞರ ಸಮಿತಿ ರಚಿಸಿದ್ದಾರೆ. ಅದಕ್ಕೆ ನಮ್ಮ ಮಂಡ್ಯದ ಡಾ. ವಿವೇಕ್ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. 

ಬೆಂಗಳೂರು (ನ. 10): ಅಮೆರಿಕಾದಲ್ಲಿ ಕೊರೊನಾ ಸೋಂಕು ತಡೆಗೆ ಬೈಡೆನ್ ತಜ್ಞರ ಸಮಿತಿ ರಚಿಸಿದ್ದಾರೆ. ಅದಕ್ಕೆ ನಮ್ಮ ಮಂಡ್ಯದ ಡಾ. ವಿವೇಕ್ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. 

- ಕೊರೊನಾ ಲಸಿಕೆ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಅಮೆರಿಕಾದ ಫೈಝರ್ ಲಸಿಕೆ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ. 

3 ನೇ ಪತ್ನಿ ಜೊತೆಯೂ ಭಿನ್ನಾಭಿಪ್ರಾಯ: ಬಿಟ್ಟು ಹೋಗುವ ಮಾತೆತ್ತಿದ್ದಾರೆ ಮೆಲಾನಿಯಾ!

- ಅಮೆರಿಕಾದಲ್ಲಿ ಚುನಾವಣಾ ಫಲಿತಾಂಶ ಅಧಿಕೃತವಾಗಿ ಘೋಷಣೆಯಾಗಿಲ್ಲ. ಬೈಡೆನ್ ಅಮೆರಿಕಾ ಅಧ್ಯಕ್ಷರಾಗುವುದರಲ್ಲಿ ಅನುಮಾನವೇ ಇಲ್ಲ. ಆದರೆ ಸೋಲೊಪ್ಪಿಕೊಳ್ಳಲಾರೆ ಎಂದು ಟ್ರಂಪ್ ಹೇಳಿದ್ದಾರೆ. 

- ಇದೀಗ ಶಾಂಘೈನಲ್ಲಿ ಹೊಸದೊಂದು ಕೊರೊನಾ ಪಾಸಿಟೀವ್ ಪ್ರಕರಣ ಪತ್ತೆಯಾಗಿದೆ.