Asianet Suvarna News Asianet Suvarna News

3 ನೇ ಪತ್ನಿ ಜೊತೆಯೂ ಭಿನ್ನಾಭಿಪ್ರಾಯ; ಬಿಟ್ಟು ಹೋಗುವ ಮಾತೆತ್ತಿದ್ದಾರೆ ಮೆಲಾನಿಯಾ!

Nov 10, 2020, 9:58 AM IST

ಬೆಂಗಳೂರು (ನ. 10): ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಆಘಾತದ ಮೇಲೆ ಆಘಾತ. ಒಂದು ಕಡೆ ಚುನಾವಣೆಯಲ್ಲಿ ಸೋಲು, ಇನ್ನೊಂದು ಕಡೆ ವೈಯಕ್ತಿಕ ಜೀವನದಲ್ಲಿ ಸೋಲು. ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ವಿಚ್ಚೇದನ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 

ಅಧ್ಯಕ್ಷೀಯ ಅವಧಿ ಪೂರ್ಣಗೊಂಡು ಟ್ರಂಪ್‌ ಶ್ವೇತಭವನದಿಂದ ಹೊರಬರುತ್ತಿದ್ದಂತೆ ಮೆಲಾನಿಯಾ ವಿಚ್ಛೇದನ ನೀಡಲಿದ್ದಾರೆ ಎಂದು ಇಬ್ಬರು ಮಾಜಿ ಅಧಿಕಾರಿಗಳು ಹೇಳಿದ್ದಾರೆ.

ಬೈಡೆನ್ ಅಧ್ಯಕ್ಷರಾಗುವುದರಿಂದ ಭಾರತಕ್ಕಾಗುವ ಲಾಭ- ನಷ್ಟ ಏನು?

74 ವರ್ಷದ ಟ್ರಂಪ್‌ಗೆ ಮೆಲಾನಿಯಾ ಮೂರನೇ ಪತ್ನಿ. ಮೊದಲ ಇಬ್ಬರು ಪತ್ನಿಯರಾದ ಇವಾನಾ ಹಾಗೂ ಮಾರ್ಲಾ ಬಹಳ ಹಿಂದೆಯೇ ವಿಚ್ಛೇದನ ನೀಡಿದ್ದಾರೆ. 15 ವರ್ಷದ ಹಿಂದೆ ಮೆಲಾನಿಯಾರನ್ನು ಟ್ರಂಪ್‌ ಮದುವೆಯಾಗಿದ್ದರು. ಇವರಿಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವೇನು? ನೋಡೋಣ ಬನ್ನಿ...!