Asianet Suvarna News Asianet Suvarna News

ಟ್ರಂಪ್ ಬೆಂಬಲಿಗರಿಗೆ ಪ್ರಮುಖ ಹುದ್ದೆಗಳಿಂದ ಗೇಟ್‌ಪಾಸ್, ವಾಟ್ಸಪ್‌ಗೆ ಬಳಕೆದಾರರಿಂದ ಶಾಕ್

ಬಳಕೆದಾರರ ಪ್ರತಿರೋಧಕ್ಕೆ ಮಣಿದ ವಾಟ್ಸಪ್ ಹೊಸ ನಿಯಮವನ್ನು  ಮುಂದೂಡಿದೆ. ಬಳಕೆದಾರರ ಮಾಹಿತಿಯನ್ನು ಫೇಸ್ಬುಕ್‌ ಜೊತೆ ಹಂಚಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಲು ಅಭಿಯಾನವನ್ನೇ ನಡೆಸುತ್ತಿದೆ.

ವಾಷಿಂಗ್‌ಟನ್ (ಜ. 25):  ಬೈಡೆನ್ ಅಮೆರಿಕಾದಲ್ಲಿ ಬದಲಾವಣೆ ಪರ್ವವನ್ನು ಶುರು ಮಾಡಿದ್ದಾರೆ. ಸರ್ಕಾರದಿಂದ ಅನುದಾನ ಪಡೆಯುವ ಅಂತಾರಾಷ್ಟ್ರೀಯ ಬ್ರಾಡ್‌ಕಾಸ್ಟರ್‌ ಸಂಸ್ಥೆಗಳ ಮುಖ್ಯಸ್ಥರನ್ನು ಜೋ ಬೈಡೆನ್‌ ಸರ್ಕಾರ ಕಿತ್ತೆಸೆಯುವ ಕೆಲಸ ಶುರುವಾಗಿದೆ. ಇನ್ನೊಂದು ಕಡೆ ಅಮೆರಿಕಾದಲ್ಲಿ, ಕೊರೋನಾವೈರಸ್‌ ಪ್ರಕರಣಗಳ ಸಂಖ್ಯೆ ಈಗ 25 ಮಿಲಿಯನ್ ಗಡಿಯನ್ನು ದಾಟಿದೆ. ಜಗತ್ತಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 100 ಮಿಲಿಯನ್ ಗಡಿ ಸಮೀಪಿಸಿದ್ದು, ಅತೀ ಹೆಚ್ಚು ಕೊರೋನಾ ಸೋಂಕು  ಪ್ರಕರಣಗಳು ದಾಖಲಾಗಿರುವುದು ಅಮೆರಿಕಾದಲ್ಲೇ.

ಬಂಗಾಳ ಕೋಟೆಯಲ್ಲಿ ಮೊಳಗಿತು ಜೈ ಶ್ರೀರಾಮ್ ಘೋಷಣೆ, ರೊಚ್ಚಿಗೆದ್ದ ದೀದಿ, ವೇದಿಕೆಯಲ್ಲಿ ಹೈಡ್ರಾಮಾ!

ಬಳಕೆದಾರರ ಪ್ರತಿರೋಧಕ್ಕೆ ಮಣಿದ ವಾಟ್ಸಪ್ ಹೊಸ ನಿಯಮವನ್ನು  ಮುಂದೂಡಿದೆ. ಬಳಕೆದಾರರ ಮಾಹಿತಿಯನ್ನು ಫೇಸ್ಬುಕ್‌ ಜೊತೆ ಹಂಚಿಕೊಳ್ಳಲ್ಲ ಎಂದು ಸ್ಪಷ್ಟಪಡಿಸಲು ಅಭಿಯಾನವನ್ನೇ ನಡೆಸುತ್ತಿದೆ. ಇನ್ನು ಕಳೆದೆರಡು ತಿಂಗಳಲ್ಲಿ ಮೊದಲ ಕೊರೋನಾವೈರಸ್ ಸೋಂಕು ಪ್ರಕರಣ  ನ್ಯೂಜಿಲ್ಯಾಂಡ್‌ನಲ್ಲಿ ದಾಖಲಾಗಿದೆ. ಇವೆಲ್ಲಾ ಸುದ್ದಿಗಳ ಸಂಕ್ಷಿಪ್ತ ವಿವರ ಟ್ರೆಂಡಿಂಗ್‌ ನ್ಯೂಸ್‌ನಲ್ಲಿ..!
 

Video Top Stories