ಇಸ್ರೇಲ್-ಹಮಾಸ್ ಯುದ್ಧ.. ಹಮಾಸ್ ಉಗ್ರರ ನೂರಾರು ಹೆಣಗಳಿಗೆ ಒಂದೇ ಸಮಾಧಿ !
ಯುದ್ಧ ಎಲ್ಲೇ ನಡೆಯಲಿ, ಅದರಿಂದ ಯಾರಿಗೂ ಲಾಭವಿಲ್ಲ
ಯುದ್ಧದಿಂದ ಸಾವು-ನೋವುಗಳೇ ಹೊರತು ಗೆಲುವು ಅಲ್ಲ
ಯುದ್ಧ ಆರಂಭವಾದ ಮೇಲೆ ಸರಿ ತಪ್ಪುಗಳ ಲೆಕ್ಕ ಬರೋದಿಲ್ಲ
ಯುದ್ಧದಿಂದ ಸಾವು ನೋವುಗಳ ಲೆಕ್ಕ ಏರುತ್ತಾ ಹೋಗುತ್ತೆ
ಯುದ್ಧಭೂಮಿ ಅಂದ್ರೆ ಆಕ್ರಂದನಗಳು, ಆರ್ತನಾದಗಳು
ಯುದ್ಧ ಯಾರಿಗೂ ಒಳ್ಳೇಯದಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೂ ಯುದ್ಧಗಳು ನಡೆಯುತ್ತಲೇ ಇವೆ. ಈ ಹಿಂದೆ ಕೂಡ ನಡೆದುಕೊಂಡೇ ಬಂದಿವೆ. ಹೀಗೆ ಯುದ್ಧ ನಡೆದಾಗಲೆಲ್ಲ ಯುದ್ಧಭೂಮಿ ರಕ್ತಭೂಮಿಯಾಗುತ್ತಲೇ ಬಂದಿದೆ. ಯುದ್ಧಗಳು ಒಳ್ಳೆಯದಲ್ಲ ಅನ್ನೋದು ಅದೆಂತ ದಡ್ಡನಿಗೂ ಗೊತ್ತಿರುತ್ತೆ. ಆದ್ರೆ ಜಗತ್ತಿನ ಮಹಾನ್ ಬುದ್ದಿವಂತರಿಂದ ಈ ಭೂಮಿ ಮೇಲೆ ಯುದ್ಧಗಳು ನಡೆಯುತ್ತಲೇ ಬಂದಿವೆ. ಹೀಗೆ ಯುದ್ಧಗಳು ನಡೆದಾಗಲೆಲ್ಲ ಯುದ್ಧ ಭೂಮಿಗಳು ರಕ್ತಸಿಕ್ತ ಭೂಮಿಗಳಾಗುತ್ತವೆ. ಎಲ್ಲೆಂದರಲ್ಲಿ ಹೆಣಗಳು ಬಿದ್ದಿರುತ್ತವೆ. ಈಗ ಇಸ್ರೇಲ್(Isreal) ಹೊಡೆತಕ್ಕೆ ಗಾಜಾ(Gaza) ಸಹ ಅದೇ ಸ್ಥಿತಿಗೆ ಜಾರುತ್ತಿದೆ. ಯುದ್ಧಭೂಮಿಯೆಂದ್ರೆ ಅಲ್ಲಿ ಕರುಣೆ ಕಕ್ಕುಲತೆಗೆ ಜಾಗವಿಲ್ಲ. ಮಾನವೀಯತೆ ಮತ್ತು ಮನುಷ್ಯತ್ವಕ್ಕೆ ಅಲ್ಲಿ ಬೆಲೆನೇ ಇಲ್ಲ. ಅಲ್ಲೇನಿದ್ರು ವಿರೋಧಿಗಳ ಪ್ರಾಣ ತೆಗೆದರಷ್ಟೆ ಬೆಲೆ. ಆ ವಿರೋಧಿಗಳು ಯಾವ ವಯಸ್ಸಿನವರಾದ್ರೂ ಪರವಾಗಿಲ್ಲ. ಯುದ್ಧಕ್ಕೆ ನಿಂತ ದೇಶಗಳಲ್ಲಿನ ಪ್ರಜೆಗಳ ಸ್ಥಿತಿ ಹೇಗಿರುತ್ತೆ ಗೊತ್ತಾ? ಅವರ ಪ್ರಾಣ ಯಾವ ಕ್ಷಣದಲ್ಲಾದ್ರು ಹಾರಿ ಹೋಗಬಹುದು. ಯುದ್ಧ ಪೀಡಿತ ದೇಶಗಳ ಪ್ರಜೆಗಳು ಪ್ರತಿ ಕ್ಷಣ ಉಳಿವಿಗಾಗಿ ಓಡುತ್ತಲೇ ಇರಬೇಕು. ಸದ್ಯಕ್ಕೆ ಇಸ್ರೇಲ್ ಮತ್ತು ಗಾಜಾ ಪರಿಸ್ಥಿತಿ ಹೇಗಿದೆಯಂದ್ರೆ, ದೀಪಾವಳಿ ಸಮಯದಲ್ಲಿ ಭಾರತೀಯರ ಕಿವಿಗೆ ನಿರಂತರವಾಗಿ ಹೇಗೆ ಪಟಾಕಿ ಸದ್ದು ಕೇಳುತ್ತಿರುತ್ತೋ, ಅದೇ ರೀತಿ ಅಲ್ಲಿ ರಾಕೆಟ್‌ನ ಸದ್ದು ಕೇಳಿಸುತ್ತಿದೆ.
ಇದನ್ನೂ ವೀಕ್ಷಿಸಿ: Today Horoscope: ನವರಾತ್ರಿಯ ಮೂರನೇ ದಿನವಾಗಿದ್ದು, ಇಂದು ಮಹಾಕಾಳಿಯ ಆರಾಧನೆ ಹೀಗೆ ಮಾಡಿ..