ಕೋವಿಡ್‌ ನಿರ್ವಹಣೆಯಲ್ಲಿ ಭಾರತ ಮಾದರಿಯಾಗಿದೆ: ನಿಕೋಲಸ್‌ ನಾಸಿಮ್‌ ತಾಲೇಬ್‌

ಚಿಂತಕ ನಿಕೋಲಸ್‌ ನಾಸಿಮ್‌ ತಾಲೇಬ್‌ ಅಮೆರಿಕಾದಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದಾರೆ.
 

First Published Jun 21, 2023, 10:50 AM IST | Last Updated Jun 21, 2023, 10:50 AM IST

ನ್ಯೂಯಾರ್ಕ್‌: ಪ್ರಧಾನಿ ನರೇಂದ್ರ ಮೋದಿ ಚಿಂತಕ ನಿಕೋಲಸ್‌ ನಾಸಿಮ್‌ ತಾಲೇಬ್‌ ಅವರನ್ನು ಭೇಟಿಯಾದರು. ಇಬ್ಬರು ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮೋದಿ ಭೇಟಿ ಬಳಿಕ ನಿಕೋಲಸ್‌ ನಾಸಿಮ್‌ ತಾಲೇಬ್‌ ಮಾತನಾಡಿದರು. ನಾನು ಈಗಾಗಲೇ ಭಾರತ ಕೋವಿಡ್‌ನನ್ನು ಅತ್ಯಂತ ಪರಿಣಾಮಕಾರಿಯಾಗಿ ನಿಭಾಯಿಸಿರುವುದನ್ನು ಪ್ರಶಂಸಿದ್ದೆ. ಅಲ್ಲದೇ ಕೋವಿಡ್‌ ನಿರ್ವಹಣೆಯಲ್ಲಿ ಭಾರತ ಮಾದರಿಯಾಗಿದೆ. ಅಷ್ಟೇ ಅಲ್ಲದೇ ಮೋದಿ ಅವರ ಜೊತೆ ಕೆಲವು ಸಮಸ್ಯೆಗಳ ಬಗ್ಗೆ ಸಹ ಚರ್ಚಿಸಿದ್ದೇನೆ ಎಂದು ಅವರು ಹೇಳಿದರು. ನ್ಯೂಯಾರ್ಕ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಇಂಜಿನಿಯರಿಂಗ್‌ನಲ್ಲಿ ಪ್ರೊಫೆಸರ್ ಆಗಿರುವ ತಾಲೇಬ್ , ತಮ್ಮ ಸ್ವಂತ ಪುಸ್ತಕ "ಸ್ಕಿನ್ ಇನ್ ದಿ ಗೇಮ್"ನನ್ನು ಮೋದಿಗೆ ಉಡುಗೊರೆಯಾಗಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಅಮೆರಿಕಾಗೆ ತೆರಳಿದ್ದಾರೆ. ಇಲ್ಲಿ ನಿಕೋಲಸ್‌ ನಾಸಿಮ್‌ ತಾಲೇಬ್‌ ಮೋದಿಯವರನ್ನು ಭೇಟಿಯಾಗಿದ್ದಾರೆ. 

ಇದನ್ನೂ ವೀಕ್ಷಿಸಿ: ನಾನು ಮೋದಿಯವರ ಅಭಿಮಾನಿ, ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವೆ: ಎಲಾನ್‌ ಮಸ್ಕ್‌