ಪಾಕ್‌ನಲ್ಲಿ ಉಗ್ರರ ಹತ್ಯೆಗೆ ಆದೇಶಿಸಿತ್ತಾ ಕೇಂದ್ರ ಸರ್ಕಾರ ? ಇದರ ಹಿಂದಿದೆ ಮೋದಿ ಸರ್ಕಾರ ಎಂದ UK ಪತ್ರಿಕೆ!

ಪಾಕಿಸ್ತಾನದಲ್ಲಿ 20ಕ್ಕೂ ಹೆಚ್ಚು ಉಗ್ರರನ್ನು RAW ಕೊಂದಿದೆ ಎಂದು ಬ್ರಿಟಿಷ್‌ ಪತ್ರಿಕೆ ದಿ ಗಾರ್ಡಿಯನ್ ವರದಿ ಮಾಡಿದೆ.
 

First Published Apr 6, 2024, 4:20 PM IST | Last Updated Apr 6, 2024, 4:20 PM IST

ಪಾಕಿಸ್ತಾನದಲ್ಲಿ ಉಗ್ರರ ಹತ್ಯೆಗೆ ಮೋದಿ ಸರ್ಕಾರ(Modi Governement) ಆದೇಶಿಸಿತ್ತು ಎಂದು ಬ್ರಿಟಿಷ್‌ ಪತ್ರಿಕೆ ವರದಿ ಮಾಡಿದೆ. ಉಗ್ರರ ಹತ್ಯೆ ಹಿಂದೆ ಮೋದಿ ಸರ್ಕಾರ ಇದೆ ಎಂದು ಬ್ರಿಟಿಷ್ ಪತ್ರಿಕೆ ದಿ. ಗಾರ್ಡಿಯನ್‌ ವರದಿ(The Guardian) ಹೇಳುತ್ತಿದೆ. ಪಾಕಿಸ್ತಾನದಲ್ಲಿ 20ಕ್ಕೂ ಹೆಚ್ಚು ಉಗ್ರರನ್ನು RAW ಕೊಂದಿತಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಮೋದಿ ಸರ್ಕಾರದ ಆದೇಶದ ಮೇರೆಗೆ RAW ದಿಂದ ಹತ್ಯೆ ಮಾಡಲಾಗಿದೆ ಎನ್ನಲಾಗ್ತಿದೆ. RAW- ವಿದೇಶಗಳಲ್ಲಿ ಭಾರತದ(India) ಬೇಹುಗಾರಿಕಾ ಸಂಸ್ಥೆಯಾಗಿದೆ. ವಿರೋಧಿಗಳನ್ನೇ ವಿದೇಶದಲ್ಲೂ ನುಗ್ಗಿ ಹತ್ಯೆ ಮಾಡಿತಾ ಭಾರತ..? ಎಂಬ ಪ್ರಶ್ನೆಯನ್ನು ದಿ ಗಾರ್ಡಿಯನ್ ದಿನಪತ್ರಿಕೆಯ ತನಿಖಾ ವರದಿ ಹುಟ್ಟುಹಾಕಿದೆ. ಭಾರತ, ಪಾಕಿಸ್ತಾನದ(Pakisthan) ಗುಪ್ತಚರ ಅಧಿಕಾರಿಗಳ ಹೇಳಿಕೆಯನ್ನು ಇಲ್ಲಿ ಉಲ್ಲೇಖ ಮಾಡಲಾಗಿದೆ. ಹಲವು ದಾಖಲೆಗಳ ಸಮೇತ ಸುದ್ದಿಯನ್ನು ಗಾರ್ಡಿಯನ್ ಪ್ರಕಟಿಸಿದೆ. 

ಇದನ್ನೂ ವೀಕ್ಷಿಸಿ:  Rameswaram Cafe blast: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಹಿಂದೂ ಯುವಕರನ್ನು ಸಿಲುಕಿಸೋ ಯತ್ನ ಎಂದ ಆರಗ ಜ್ಞಾನೇಂದ್ರ