Asianet Suvarna News Asianet Suvarna News

ಅಧಿಕಾರಕ್ಕೇರುತ್ತಲೇ ಕ್ರೌರ್ಯ ಮೆರೆದ ತಾಲಿಬಾನ್, ಬದಲಾಗಿದ್ದೇವೆ ಎಂದಿದ್ದೆಲ್ಲಾ ಬರೀ ಸುಳ್ಳು.!

Sep 10, 2021, 1:21 PM IST

ಕಾಬೂಲ್ (ಸೆ. 10):  ನಾವು ಬದಲಾಗಿದ್ದೇವೆ, ಮಹಿಳೆಯರನ್ನು ಗೌರವಿಸುತ್ತೇವೆ, ಅವರಿಗೆ ಶಿಕ್ಷಣ, ಉದ್ಯೋಗದಲ್ಲಿ ಅವಕಾಶ ಕೊಡುತ್ತೇವೆ ಎಂದಿದ್ದ ತಾಲಿಬಾನ್, ಅಧಿಕಾರ ಹಿಡಿಯುತ್ತಲೇ ತಾಲಿಬಾನಿಗಳು ಕ್ರೌರ್ಯ ಮೆರೆಯಲು ಆರಂಭಿಸಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಮಹಿಳೆಯರಿಗೆ ಚಾಟಿ ಏಟು ನೀಡಿದ್ದಾರೆ. ಅಲ್ಲದೇ ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೂ ಬಾಸುಂಡೆ ಬರುವಂತೆ ಹೊಡೆದು ಹಲ್ಲೆ ನಡೆಸಿದ್ದಾರೆ.

ತಾಲಿಬಾನ್ ವಿರುದ್ಧ ಒಂದಾದ ರಷ್ಯಾ- ಭಾರತ; ಜಗತ್ತಿಗೆ ಕ್ಯಾಪ್ಟನ್ ಆಗುತ್ತಾ ಭಾರತ..?

ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರದ ವಿರುದ್ಧ ಮಹಿಳೆಯರು ಕಳೆದ ಕೆಲವು ದಿನಗಳಿಂದ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸುತ್ತಿರುವ ತಾಲಿಬಾನ್‌ ಮಹಿಳೆಯರಿಗೆ ಚಾವಟಿಯಿಂದ ಹೊಡೆದು ಹಲ್ಲೆ ನಡೆಸಿದೆ. ಇದು ತಾಲಿಬಾನಿಗಳ ಹಿಂದಿನ ಸರ್ಕಾರದಲ್ಲಿ ಮಹಿಳೆಯರಿಗೆ ನೀಡುತ್ತಿದ್ದ ಚಿತ್ರಹಿಂಸೆ, ಚಾಟಿ ಏಟಿನ ಶಿಕ್ಷೆಯನ್ನು ಮತ್ತೊಮ್ಮೆ ನೆನಪಿಸಿದೆ. ತಾಲಿಬಾನಿಗಳ ದರ್ಪ, ಕ್ರೌರ್ಯದ ಮುಖ ಹೇಗಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ,..!