Asianet Suvarna News Asianet Suvarna News

ತಾಲಿಬಾನ್‌ ವಿರುದ್ಧ ಒಂದಾದ ರಷ್ಯಾ- ಭಾರತ; ಜಗತ್ತಿಗೆ ಕ್ಯಾಪ್ಟನ್ ಆಗುತ್ತಾ ಭಾರತ..?

- ದೆಹಲಿಯಲ್ಲಿ ಅಜಿತ್‌ ದೋವಲ್‌, ನಿಕೋಲೆ ಪಟ್ರುಶೇವ್‌ ಸಮಾಲೋಚನೆ

- ತಾಲಿಬಾನ್‌ ಆಡಳಿತದ ಪರಿಣಾಮ, ವಲಸೆ ಬಗ್ಗೆ ಭಾರತ-ರಷ್ಯಾ ಚರ್ಚೆ

- ಜಗತ್ತಿಗೆ ಕ್ಯಾಪ್ಟನ್ ಆಗುತ್ತಾ ಭಾರತ.?

ನವದೆಹಲಿ (ಸೆ. 10): ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ, ಉಗ್ರಾಡಳಿತದಿಂದ ತಮ್ಮ ದೇಶಗಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಭಾರತ ಮತ್ತು ರಷ್ಯಾ ಸುದೀರ್ಘ ಸಮಾಲೋಚನೆ ನಡೆಸಿವೆ. 

ಅಧಿಕಾರಕ್ಕೇರುತ್ತಲೇ ಕ್ರೌರ್ಯ ಮೆರೆದ ತಾಲಿಬಾನ್, ಬದಲಾಗಿದ್ದೇವೆ ಎಂದಿದ್ದೆಲ್ಲಾ ಬರೀ ಸುಳ್ಳು.!

ಈ ವೇಳೆ, ಎರಡು ದೇಶಗಳ ವಿಶೇಷ ಸೇವೆ ಮತ್ತು ಮಿಲಿಟರಿ ಬಾಡಿಯ ಜಂಟಿ ಕೆಲಸಗಳನ್ನು ಮತ್ತಷ್ಟು ತೀವ್ರಗೊಳಿಸುವ ಬಗ್ಗೆ ನಿರ್ಧರಿಸಲಾಯಿತು. ಇದಲ್ಲದೆ ತಾಲಿಬಾನ್‌ ಆಡಳಿತದ ಬಳಿಕ ಆಫ್ಘನ್‌ನಿಂದ ಭಾರತ, ರಷ್ಯಾ ಮತ್ತು ಕೇಂದ್ರ ಏಷ್ಯಾ ವಲಯದಲ್ಲಿ ಉಂಟಾಗಬಹುದಾದ ಯಾವುದೇ ಭಯೋತ್ಪದನಾ ಚಟುವಟಿಕೆಗಳನ್ನು ಸಹಯೋಗದಲ್ಲಿ ನಿರ್ವಹಿಸುವ ಬಗ್ಗೆಯೂ ಉಭಯ ದೇಶಗಳು ಸಮ್ಮತಿ ಸೂಚಿಸಿದವು. ಅಫ್ಘಾನಿಸ್ತಾನ ಮತ್ತು ಸುತ್ತಮುತ್ತಲಿನ ವಲಯಗಳಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಭಾರತ ಮಹತ್ವದ ಪಾತ್ರ ವಹಿಸಬೇಕು ಎಂದು ಅಮೆರಿಕ ಆಶಿಸಿದೆ.