ಚೀನಾ ಸಿದ್ಧಗೊಳಿಸುತ್ತಿದೆ ವಾಟರ್ ಬಾಂಬ್: ಡ್ರ್ಯಾಗನ್ ಯೋಜನೆಗೆ ಕೊಳ್ಳಿ ಇಡಲಿದೆ ಭಾರತದ ಆ ಪ್ಲಾನ್!
ಭಾರತದ ಮಗ್ಗುಲ ಮುಳ್ಳಾಗಿ ಕಾಡ್ತಾ ಇರೋ ಭಯಾನಕ ದೇಶ ಅಂದ್ರೆ, ಅದು ಚೀನಾ.. ಆ ಚೀನಾ ಈಗ ಭಾರತದ ಮೇಲೆ ಯುದ್ಧವಲ್ಲದ ಯುದ್ಧ ಸಾರಿದೆ.. ಆ ಯುದ್ಧ ಮಾಡೋಕೆ ಚೀನಾದ ಬತ್ತಳಿಕೆಲಿ ಅಸ್ತ್ರವೂ ಇಲ್ಲ..ಕೈಲಿ ಶಸ್ತ್ರವೂ ಇಲ್ಲ.
ಭಾರತದ ಮಗ್ಗುಲ ಮುಳ್ಳಾಗಿ ಕಾಡ್ತಾ ಇರೋ ಭಯಾನಕ ದೇಶ ಅಂದ್ರೆ, ಅದು ಚೀನಾ.. ಆ ಚೀನಾ ಈಗ ಭಾರತದ ಮೇಲೆ ಯುದ್ಧವಲ್ಲದ ಯುದ್ಧ ಸಾರಿದೆ.. ಆ ಯುದ್ಧ ಮಾಡೋಕೆ ಚೀನಾದ ಬತ್ತಳಿಕೆಲಿ ಅಸ್ತ್ರವೂ ಇಲ್ಲ..ಕೈಲಿ ಶಸ್ತ್ರವೂ ಇಲ್ಲ. ಆದ್ರೆ, ಅದೊಂದು ನದಿಯನ್ನೇ ಆಯುಧವಾಗಿ ಬಳಸಿಕೊಳ್ತಾ ಇದೆ.. ಅಣೆಕಟ್ಟಿನ ಮೂಲಕವೇ ರಣತಂತ್ರ ರಚಿಸ್ತಾ ಇದೆ. ಇದನ್ನೆಲ್ಲಾ ನೋಡ್ಕೊಂಡು ಭಾರತವೇನು ಸುಮ್ಮನೆ ಕೂತಿದ್ಯಾ? ಇಲ್ವೇ ಇಲ್ಲ. ಡ್ರ್ಯಾಗನ್ ದೇಶ ತಯಾರಿಸ್ತಾ ಇರೋ ಈ ವಾಟರ್ ಬಾಂಬನ್ನ ಠುಸ್ ಪಟಾಕಿ ಮಾಡೋಕೆ, ವಿಚಿತ್ರ ರಣನೀತಿ ಸಿದ್ಧಗೊಳಿಸಿಕೊಂಡಿದೆ ಇಂಡಿಯಾ. ತಂತ್ರಕ್ಕೆ ಪ್ರತಿತಂತ್ರ.. ಡ್ಯಾಮಿಗೆ ಡ್ಯಾಮ್. ಇದು ಭಾರತದ ಹೊಸ ವಾರ್ ಸ್ಟೈಲ್. ಅದರ ಇನ್ ಡೆಪ್ತ್ ಸ್ಟೋರಿ ಇಲ್ಲಿದೆ ನೋಡಿ. ಹೌದು.. ಚೀನಾದ ಈ ಯೋಜನೆ, ಮೂರು ದೇಶಗಳಿಗೆ ಜಲಕಂಟಕ ತರೋದಂತೂ ತಪ್ಪಿದ್ದಲ್ಲ. ಆದ್ರೆ, ಚೀನಾ ಭಾರತಕ್ಕೆ ಆಘಾತ ಕೊಡೋದಕ್ಕಿಂತಾ ಮೊದಲೇ, ಭಾರತ ಈಗಾಗ್ಲೇ ಚೀನಾಗೆ ಎದುರೇಟು ಕೊಟ್ಟಾಗಿದೆ.
ಅದ್ ಹೇಗೆ ಅನ್ನೋದು ತೀರಾ ಇಂಟರೆಸ್ಟಿಂಗ್ ವಿಚಾರ. ಭಾರತ ಈಗ ಮೊದಲಿನ ಹಾಗಿಲ್ಲ.. ಎದುರಾಳಿ ಎಡವಟ್ಟು ಮಾಡೋ ತನಕ ಕಾದುಕೊಂಡಿದ್ದು, ಆಮೇಲೆ ಪ್ರತಿಕ್ರಿಯೆ ಕೊಡಲ್ಲ. ಬದಲಾಗಿ, ಶತ್ರುಪಾಳಯ ಒಂದು ಹೆಜ್ಜೆ ಇಡೋ ಮೊದಲೇ, ಭಾರತ ಮೂರು ಹೆಜ್ಜೆ ಮುಂದೆ ಸಾಗಿರುತ್ತೆ. ಅಂಥದ್ದೇ ಜಾಣ ಪ್ರಕ್ರಿಯೆ ಈಗ ಚೀನಾ ವಿಚಾರದಲ್ಲೂ ನಡೆದಿದೆ.ಚೀನಾದ ಎಗರಾಟಕ್ಕೆ ಜಗತ್ತಲ್ಲಿ ಯಾವ್ದಾದ್ರು ಒಂದು ದೇಶ ಮೂಗುದಾರ ಹಾಕಬಹುದು ಅಂದ್ರೆ, ಅದು ಭಾರತ ಮಾತ್ರ.. ಈ ಮಾತು ಮತ್ತೆ ಸಾಬೀತಾಗ್ತಾ ಇದೆ. ಅದಕ್ಕೆ ಈ ಡ್ಯಾಮ್ ಒಂದು ಎಕ್ಸಾಂಪಲ್ ಅಷ್ಟೆ. ತನ್ನ ಇತಿಹಾಸದಲ್ಲೇ ಹಿಂದೆಂದೂ ಕೂಡ, ಚೀನಾ ಇಂಥದ್ದೊಂದು ಸಾಹಸ ಮಾಡಿರ್ಲಿಲ್ಲ.. ಬರೋಬ್ಬರಿ 11 ಲಕ್ಷ ಕೋಟಿಯಷ್ಟು ದುಡ್ಡನ್ನ ಯಾವ ಪ್ರಾಜೆಕ್ಟುಗು ಹಾಕೇ ಇರ್ಲಿಲ್ಲ.. ಆದ್ರೆ, ಇದೇ ಮೊದಲ ಸಲ, ಡ್ಯಾಮ್ ಕಟ್ಬೇಕು ಅಂತ ಹಠಕ್ಕೆ ಬಿದ್ದು, ಅಷ್ಟೂ ಹಣಾನೂ ವ್ಯಯಿಸೋಕೆ ಮುಂದಾಗಿತ್ತು.. ಆದ್ರೆ ಅದ್ಯಾವ ಕನಸನ್ನ ಕಂಡು ಈ ಸಾಹಸಕ್ಕೆ ಮುಂದಾಯ್ತೋ, ಆ ಕನಸಿಗೇ ತಣ್ಣೀರೆರಚಿದೆ, ಭಾರತ.