Asianet Suvarna News Asianet Suvarna News

ಐಫೆಲ್ ಟವರ್ ಮೇಲೆ 200 ಅಡಿ ಎತ್ತರದಲ್ಲಿ ಇದೆಂಥಾ ಹುಚ್ಚು ಸಾಹಸ ?

ಸಾಹಸ ಕ್ರೀಡೆ ಅನ್ನೋದು ಸಾವನ್ನೇ ಬೆನ್ನಿಗೆ ಕಟ್ಟಿಕೊಂಡು ಮಾಡೋ ಅಪಾಯಕಾರಿ ಆಟ. ಒಂದೇ ಒಂದು ಕ್ಷಣ ಮೈಮರೆತರೂ ಜೀವ ಹೋಗೋದು ಪಕ್ಕಾ. ಆದರೆ ಇಲ್ಲೊಬ್ಬ ಸಾಹಸಿ ತನ್ನ ಸಾಹಸದಿಂದಲೇ ಜಗತ್ತಿನಾದ್ಯಂತ ಪ್ರಸಿದ್ಧನಾಗಿದ್ದಾನೆ. ಈಗ ಈತ ಮಾಡಿರೋ ಸಾಹಸ ಎಲ್ಲರನ್ನೂ ಅಚ್ಚರಿಗೊಳಪಡಿಸಿದೆ. ಜಗತ್ತನ್ನೇ ಬೆರಗುಗೊಳಿಸಿದ ನೇಥನ್ ಪೌಲಿ.

Sep 22, 2021, 9:27 AM IST

ಸ್ಪೈಡರ್ ಮ್ಯಾನ್‌ನಂತೆ ಸರಸರ ಗೋಡೆ ಹತ್ತುತ್ತಾಳೆ ಈ ಪುಟ್ಟ ಬಾಲೆ, ಎಂಥಾ ಕೌಶಲ್ಯ ರೀ..!

ಸಾಹಸ ಇಷ್ಟಪಡೋರಿಗೆ ಸುಮ್ಮನೆ ಕೂರೋದು ಇಷ್ಟವಿಲ್ಲ. ಏನಾದ್ರೂ ಮಾಡಲೇ ಬೇಕು. ಅದೂ ಸಾಹಸವನ್ನೇ ಮಾಡಬೇಕು. ಐಫೆಲ್ ಟವರ್ ಮೇಲೆ ಒಂದು ಕಡೆಯಿಂದ ಇನ್ನೊಂದುಕಡೆಗೆ ರೋಪ್ ಕಟ್ಟಿ ನಡೆಯೋ ಸಾಹಸ ಮಾಡಿದ್ದಾನೆ ಈ ವ್ಯಕ್ತಿ. ಅಬ್ಬಾ ಏನ್ ಸಾಹಸ ಅಂತೀರಾ ? ನೋಡಿದರೇ ಮೈ ಜುಂ ಎನಿಸುತ್ತದೆ. ವಿಶ್ವ ದಾಖಲೆ ಬರೆದಿರೋ 27 ವರ್ಷದ ಯುವಕನ ನೋಡು ನೋಡುತ್ತಲೇ ತನ್ನ ಟಾಸ್ಕ್ ಮುಗಿಸುವಲ್ಲಿ ಸಕ್ಸಸ್ ಆಗಿದ್ದಾನೆ.