ಗಗನಯಾತ್ರಿಗಳ ಜೀವ ಉಳಿಸುತ್ತಾ ಎಲಾನ್ ಮಸ್ಕ್ ಪ್ಲಾನ್..? ಒಂದು ಯುದ್ಧದಿಂದಲೇ ಉದ್ಭವಿಸಿದ ಪ್ರಾಣಾಂತಕ ಪರಿಸ್ಥಿತಿ?
ಅಪಾಯದಲ್ಲಿ ಬಾಹ್ಯಾಕಾಶ ತಲುಪಿದ ಭಾರತದ ಗಗನಯಾತ್ರಿ ..!
ಸುನಿತಾ ವಿಲಿಯಮ್ಸ್ ಜೊತೆಗಿದ್ದವರಿಗೂ ಶುರುವಾಗಿದೆ ಸಂಕಟ..!
ಎಲ್ಲಿಂದ ಬಂತು.. ಹೇಗೆ ಬಂತು.. ಆಘಾತಕಾರಿ ಸ್ಪೇಸ್ ಬಗ್..?
ಬಾಹ್ಯಾಕಾಶಕ್ಕೆ (Space) ಹಾರಿದ ಭಾರತದ ಗಗನಯಾತ್ರಿಗೆ (Gaganyaan) ಎದುರಾಯ್ತು ಭಾರೀ ಅಪಾಯ. ಅಂತರಿಕ್ಷದಲ್ಲೂ ಶುರುವಾಗಿದೆ ಕ್ರಿಮಿಕೀಟದ ರಣಾರ್ಭಟ. ಅದರ ಪರಿಣಾಮವಾಗಿ ಸುನಿತಾ ವಿಲಿಯಮ್ಸ್(Sunita Williams) ಹಾಗೂ ಆಕೆಯ ಜೊತೆಗಿದ್ದವರಿಗೂ ಶುರುವಾಗಿದೆ ಸಂಕಟ. ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ಗೆ, ಮಾನವ ಸಹಿತ ರಾಕೆಟ್ ಉಡಾಯಿಸಬೇಕು ಅನ್ನೋ ಮನುಕುಲದ ಒತ್ತಾಸೆ, ಅವತ್ತು ಈಡೇರಿತ್ತು. ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಜೂನ್ 5ರಂದು ಇತಿಹಾಸ ನಿರ್ಮಿಸಿತ್ತು. ಉಡಾವಣೆಯಾದ ಸುಮಾರು 26 ಗಂಟೆಗಳ ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಯಶಸ್ವಿಯಾಗಿ ಪ್ರವೇಶಿಸಿತ್ತು. ಸುನಿತಾ ವಿಲಿಯಮ್ಸ್ ಹಾಗೂ ಬುಚ್, ಈಗಲೂ ಅಂತರಿಕ್ಷದಲ್ಲೇ ಇದಾರೆ. ಅವರು ಭೂಮಿಗೆ ಬರೋದೇ ಅನುಮಾನ ಅನ್ನೋ ಮಾತುಗಳೂ ಸಹ ಕೇಳಿಬರ್ತಿದ್ದಾವೆ. ಅಮೆರಿಕಾ, ರಷ್ಯಾ, ಚೀನಾ, ಕೆನಡಾ, ಜಪಾನ್, ಯುಕೆ, ಜಪಾನ್ ಹೀಗೆ ಒಟ್ಟು 14 ದೇಶಗಳು ಸೇರಿ ನಿರ್ಮಿಸಿದ ಯೋಜನೆ ಇದಾಗಿದೆ.
ಇದನ್ನೂ ವೀಕ್ಷಿಸಿ: 5 ಮಕ್ಕಳು ಸೇಫ್ ಇನ್ನೂ 4 ಮಕ್ಕಳು ಸಿಗಬೇಕಿದೆ..! ಕಣ್ಣುಮುಚ್ಚಿ ಬಿಡೋದ್ರಲ್ಲಿ ಮಗು ಮಾಯ..!