5 ಮಕ್ಕಳು ಸೇಫ್ ಇನ್ನೂ 4 ಮಕ್ಕಳು ಸಿಗಬೇಕಿದೆ..! ಕಣ್ಣುಮುಚ್ಚಿ ಬಿಡೋದ್ರಲ್ಲಿ ಮಗು ಮಾಯ..!

ಮಲಗಿದ್ದ ಮಗು ಬೆಳಗಾಗುವಷ್ಟರಲ್ಲೇ ನಾಪತ್ತೆ..!
ನಾಪತ್ತೆ ಕೇಸ್‌ನಿಂದ ಬಯಲಾಯ್ತು ಕರಾಳ ದಂಧೆ..!
ಮಕ್ಕಳ ಮಾರಟ ದಂಧೆಯಲ್ಲಿ ಸ್ಟಾಫ್ ನರ್ಸ್‌ಗಳು..!

Share this Video
  • FB
  • Linkdin
  • Whatsapp

ಅದೊಂದು ಅಲೆಮಾರಿ (Nomadic family)ಕುಟುಂಬ. ಗಂಡ ಹೆಂಡತಿ ಮತ್ತು 11 ತಿಂಗಳ ಹಸುಗೂಸು. ಜಾತ್ರೆಗಳಲ್ಲಿ(Fair) ಕೂದಲು ಮಾರಿಕೊಂಡು ಊರೂರು ಸುತ್ತುತ್ತಿತ್ತು. ಆವತ್ತು ಅದೊಂದು ಗ್ರಾಮದ ಜಾತ್ರೆ ಮುಗಿಸಿಕೊಂಡು ಅದೇ ಗ್ರಮದ ಹೊರವಲಯದಲ್ಲಿ ಟೆಂಟ್ ಹಾಕೊಂಡು ರಾತ್ರಿ ನಿದ್ದೆ ಮಾಡ್ತಿತ್ತು. ಆದ್ರೆ ಬೆಳಗ್ಗೆ ಎದ್ದು ನೋಡಿದ್ರೆ ಮಗು ನಾಪತ್ತೆ. ಎಲ್ಲಿ ಹುಡುಕಿದ್ರೂ ಮಗು ಸಿಗೋದೇ ಇಲ್ಲ. ಪೊಲೀಸ್ ಕಂಪ್ಲೆಂಟ್ ಆಗುತ್ತೆ. ಆದ್ರೆ ತನಿಖೆ ನಡೆಸಿದ ಪೊಲೀಸರಿಗೆ ಅದೊಂದು ಮಿಸ್ಸಿಂಗ್ ಕೇಸ್(Misssing case) ದೊಡ್ಡ ದಂಧೆಯೊಂದನ್ನ ಬೇದಿಸುವಂತೆ ಮಾಡಿತ್ತು. ಆಸ್ಪತ್ರೆಯ ಮ್ಯಾನೇಜರ್ ಆಗಿದ್ದವನು ಕಿಡ್ನ್ಯಾಪ್ (kidnap) ಆಗಿದ್ದ ಮಗುವನ್ನ ಮಾರಿಬಿಟ್ಟಿದ್ದ. ಆದ್ರೆ ಪೊಲೀಸರು ಆ ಮಗುವನ್ನ ರಕ್ಷಣೆ ಮಾಡಿ ಕೊನೆಗೂ ಹೆತ್ತವರ ಮಡಲಿಗೆ ಸೇರಿಸಿದ್ರು. ಆದ್ರೆ ಮತ್ತೆ ಮಹೇಶನನ್ನ ಪೊಲೀಸರು ಲಾಕ್ ಮಾಡಿಕೊಳ್ತಾರೆ. ಆಗ ಮಹೇಶ ಹೇಳಿದ ಒಂದೊಂದು ಕಥೆಗಳು ಪೊಲೀಸರನ್ನೇ ಥಂಡಾ ಹೊಡೆಯುವಂತೆ ಮಾಡಿತ್ತು. ಅಲ್ಲೊಂದು ಕರಾಳ ದಂಧೆ ತೆರೆದುಕೊಂಡಿತ್ತು. ಅವರಿಬ್ಬರೂ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್‌ಗಳು. ರೋಗಿಗಳ ಸೇವೆ ಮಾಡೋದಕ್ಕಿಂತ ಹಸುಗೂಸುಗಳನ್ನ ಹುಡುಕೋದೇ ಅವರ ಕಾಯಕವಾಗಿತ್ತು. ಬೇಡವಾದ ಮಕ್ಕಳನ್ನ ಹುಡುಕೋದು ನಂತರ ಆ ಮಕ್ಕಳನ್ನ ಲಕ್ಷ ಲಕ್ಷಕ್ಕೆ ಮಾರೋದು. ಈ ನರ್ಸ್‌ಗಳ ಜೊತೆ ಇನ್ನೂ ಐವರು ಈ ದಂಧೆಯಲ್ಲಿ ವರ್ಕ್ ಮಾಡ್ತಿದ್ರು. ಇದೂವರೆಗೂ ಈ ಗ್ಯಾಂಗ್ ಬರೊಬ್ಬರಿ 9 ಹಸುಗೂಸಗಳನ್ನ ಮಾರಾಟ ಮಾಡಿದೆ. ಆದ್ರೆ ಯಾವುದೇ ಮಗು ಸಿಗದಿದ್ದಾಗ ಮಗುವನ್ನ ಕದಿಯೋಕೆ ಶುರು ಮಾಡಿತ್ತು. ಆದ್ರೆ ಈ ಬಾರಿ ಅವರ ಟೈಂ ಕೆಟ್ಟಿತ್ತು.

ಇದನ್ನೂ ವೀಕ್ಷಿಸಿ: ಸಿಎಂ, ಡಿಸಿಎಂ ಬದಲಾವಣೆ ಆದ್ರೆ ಲಿಂಗಾಯತರಿಗೆ ಆದ್ಯತೆ ನೀಡಿ: ಶ್ರೀಶೈಲ ಜಗದ್ಗುರು ಪಟ್ಟು

Related Video