ಟ್ರಂಪ್ ಹೋರಾಟದ ಸದ್ದು, ಕೊರೋನಾಗೆ ಹೇನಿನ ಔಷಧಿ ಮದ್ದು, ನೆಟ್ಟಿಗರಿಗೆ ಅಜ್ಜಿ ಗುದ್ದು

ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಅತೀ ಹೆಚ್ಚು ಸದ್ದು ಮಾಡಿ, ಟ್ರೆಂಡಿಂಗ್ ಮಾಡುತ್ತಿರುವ ಸುದ್ದಿಗಳು ಇಲ್ಲಿವೆ...

Share this Video
  • FB
  • Linkdin
  • Whatsapp

ಅಮೆರಿಕ ಹೊಸ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನು ಎಲೆಕ್ಟ್ರೋಲ್ ಕಾಲೇಜ್ ಅಧಿಕೃತವಾಗಿ ಘೋಷಿಸಲು ವೇದಿಕೆ ಸಜ್ಜಾಗಿದೆ. ಈ ಬೆನ್ನಲ್ಲೇ ಅಮೆರಿಕ ಸೇವ್ ಮಾರ್ಚ್ ಎಂದು ಟ್ರಂಪ್ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂಸಾ ರೂಪ ತಾಳಿದ ಪ್ರತಿಭಟನೆಯನ್ನು ಹತ್ತಿಕ್ಕಲು ನಡೆಸಿದ ಗೋಲಿಬಾರಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಟ್ರಂಪ್ ಪ್ರಚೋದನಕಾರಿಗೆ ಟ್ವೀಟಿಗೆ ಟ್ವಿಟರ್ ಬ್ರೇಕ್ ಹಾಕಿದ್ದು, ವೈರಲ್ ಆಗದಂತೆ ನಿರ್ಬಂಧಿಸಿದೆ. 

ಕೊರೋನಾ ವೈರಸ್‌ಗೆ ಪರವಾಲಂಬಿ ಜೀವಿಗಳನ್ನು ಕೊಲ್ಲುವ ಔಷಧಿ ಮದ್ದಾಗಬಲ್ಲದು ಎಂದು ವೈದ್ಯರೊಬ್ಬರು ಹೇಳಿಕೊಳ್ಳುತ್ತಿದ್ದಾರೆ. ಈ ಔಷಧಿಯ ಚಿಕಿತ್ಸೆ ನೀಡಿ ರೋಗಿಗಳು ವಾಸಿಯೂ ಆಗಿದ್ದಾರೆಂಬುವುದು ಅವರ ವಾದ. ಆದರಿದಕ್ಕಿಲ್ಲ FDA ಅನುಮತಿ. ವಿದೇಶಗಳಲ್ಲಿ ಸದ್ದು ಮಾಡುತ್ತಿರುವ ಸುದ್ದಿಗಳ ಹೂರಣ ಇಲ್ಲಿದೆ. 

ವಿದೇಶಿ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Related Video