Asianet Suvarna News Asianet Suvarna News

ಅಫ್ಘನ್‌ನಲ್ಲಿದ್ದ 150 ಭಾರತೀಯರ ರೋಚಕ ಏರ್‌ಲಿಫ್ಟ್, ಸಾಹಸದ ಹಿಂದೆ ಇವರೇ ಕಿಂಗ್!

Aug 18, 2021, 3:58 PM IST

ಬೆಂಗಳೂರು (ಆ. 18): ಅಷ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಸಿಲುಕಿದ್ದ ರಾಯಭಾರ ಸಿಬ್ಬಂದಿ, ಐಟಿಬಿಪಿಯ ಕಮಾಂಡೋಗಳು ಸೇರಿ 150 ಮಂದಿ ಮತ್ತು 3 ಶ್ವಾನಗಳನ್ನು ರೋಚಕ ಕಾರ್ಯಾಚರಣೆ ಬಳಿಕ ಯಶಸ್ವಿಯಾಗಿ ಭಾರತಕ್ಕೆ ಕರೆತರಲಾಗಿದೆ. ತಾಲಿಬಾನಿಗಳ ಸವಾಲನ್ನು ಮೆಟ್ಟಿನಿಂತು ಭಾರತೀಯರನ್ನು ಕರೆತರಲು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ನಡೆಸಿದ ತಡರಾತ್ರಿ ಕಾರ್ಯಾಚರಣೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ನಿಮ್ಮ ಕೆಲಸ ನೀವು ಮಾಡಿ, ಭಯ ಬೇಡ ಎಂದು ಮಾಧ್ಯಮದವರಿಗೆ ತಾಲಿಬಾನ್ ಭರವಸೆ

ಕಾಬೂಲ್‌ನಲ್ಲಿ ಸಿಲುಕಿದ್ದ ರಾಯಭಾರ ಸಿಬ್ಬಂದಿ, ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ಪಡೆಯ ಸಿಬ್ಬಂದಿಗಳನ್ನು ರಕ್ಷಣೆ ಮಾಡಲು ಭಾರತ ಸರ್ಕಾರ ಸೋಮವಾರವೇ ಸಿ-17 ವಿಮಾನ ಸಜ್ಜು ಮಾಡಿತ್ತು. ಆದರೆ ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸದ್ಯ ಅಮೆರಿಕ ಸೇನೆ ವಶದಲ್ಲಿರುವ ಕಾರಣ, ಭಾರತದ ವಿಮಾನ ಇಳಿಸಲು ಅಮೆರಿಕದ ಅನುಮತಿ ಬೇಕಾಗಿತ್ತು. ಈ ಹಂತದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ಹಾಗೂ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಮಾಡಿದ ಕಾರ್ಯಾಚರಣೆ ಹೀಗಿತ್ತು.