9ನೇ ದಿನಕ್ಕೆ ಕಾಲಿಟ್ಟ ಮಹಾಯುದ್ಧ: ಅಂದುಕೊಂಡಿದ್ದನ್ನ ಸಾಧಿಸದೇ ಬಿಡೋದಿಲ್ಲ ಎಂದ ಪುಟಿನ್..!

*   ದಿನೇ ದಿನೇ ಯುದ್ಧದ ಭೀತಿ ಹೆಚ್ಚಿಸುತ್ತಿರುವ ರಷ್ಯಾ
*  ಉಕ್ರೇನ್‌ನ ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿ 
*  ಅಣುಸ್ಥಾವರ ಸ್ಫೋಟಗೊಂಡರೆ ಇಡೀ ಯುರೋಪ್‌ ಉಡೀಸ್‌

Share this Video
  • FB
  • Linkdin
  • Whatsapp

ಬೆಂಗಳೂರು(ಮಾ.04): ರಷ್ಯಾ ಉಕ್ರೇನ್‌ ಮಹಾಯುದ್ಧ ಇಂದು(ಶುಕ್ರವಾರ) 9ನೇ ದಿನಕ್ಕೆ ಕಾಲಿಟ್ಟಿದೆ. ದಿನೇ ದಿನೇ ಯುದ್ಧದ ಭೀತಿಯನ್ನ ರಷ್ಯಾ ಹೆಚ್ಚಿಸುತ್ತಿದೆ. ಅಂದುಕೊಂಡಿದ್ದನ್ನ ಸಾಧಿಸದೇ ಬಿಡೋದಿಲ್ಲ ಅಂತ ಪುಟಿನ್‌. ಹೀಗಾಗಿಯೇ ಯುದ್ಧದ ಭೀತಿ ಮತ್ತುಷ್ಟು ಹೆಚ್ಚಾಗುತ್ತಿದೆ. ಉಕ್ರೇನ್‌ನ ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿ ಮಾಡಿದೆ. ನಿನ್ನೆ ತೈಲ ಘಟಕ ಇಂದು ಅಣುಸ್ಥಾವರದ ಮೇಲೆ ದಾಳಿ ಮಾಡಿದೆ. ಅಣುಸ್ಥಾವರ ಸ್ಫೋಟಗೊಂಡರೆ ಇಡೀ ಯುರೋಪ್‌ ಉಡೀಸ್‌ ಆಗುತ್ತದೆ. ಹಟಕ್ಕೆ ಬಿದ್ದಿರುವ ಪುಟಿನ್‌ ಮತ್ತಷ್ಟು ದಾಳಿಯನ್ನ ಹೆಚ್ಚಿಸಿದ್ದಾರೆ. ರಷ್ಯಾ ಏರ್‌ಸ್ಟ್ರೈಕ್‌ ಇಡೀ ಯುರೋಪ್‌ಗೆ ಕಂಟಕವಾಗುತ್ತೆ ಎಂದು ಹೇಳಲಾಗುತ್ತಿದೆ. ದಿನೇ ದಿನೇ ಯುದ್ಧ ಬಹಳಷ್ಟು ಭೀಕರತೆ ಪಡೆದುಕೊಳ್ಳುತ್ತಿದೆ. ರಷ್ಯಾ ದಾಳಿಗೆ ಉಕ್ರೇನ್‌ನ ಪ್ರಮುಖ ನಗರಗಲು ತತ್ತರಿಸಿವೆ. 

Russia Ukraine War: ಉಕ್ರೇನ್‌ನ ಕರಾವಳಿ ಪ್ರದೇಶಕ್ಕೆ ನುಗ್ಗಿದ ರಷ್ಯಾ ಸೇನೆ: ಮರಿಯಾಪೌಲ್‌ ವಶಕ್ಕೆ

Related Video