Russia-Ukraine War: ನ್ಯಾಟೋ ಸದಸ್ಯತ್ವಕ್ಕೆ ನಾವು ಪಟ್ಟು ಹಿಡಿಯಲ್ಲ: ಝೆಲೆನ್‌ಸ್ಕೀ

ರಷ್ಯಾ - ಉಕ್ರೇನ್ ನಡುವಿನ ಮಹಾಯುದ್ಧದಲ್ಲಿ ಟ್ವಿಸ್ಟ್‌ ಸಿಕ್ಕಿದೆ. ಅತ್ಯಂತ ಮಹತ್ವದ ವಿದ್ಯಮಾನವೊಂದರಲ್ಲಿ ‘ನ್ಯಾಟೋ ಸದಸ್ಯತ್ವಕ್ಕೆ ನಾವು ಪಟ್ಟು ಹಿಡಿಯುವುದಿಲ್ಲ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಘೋಷಿಸಿದ್ದಾರೆ. 

First Published Mar 9, 2022, 10:46 AM IST | Last Updated Mar 9, 2022, 11:04 AM IST

ರಷ್ಯಾ - ಉಕ್ರೇನ್ ನಡುವಿನ ಮಹಾಯುದ್ಧದಲ್ಲಿ ಟ್ವಿಸ್ಟ್‌ ಸಿಕ್ಕಿದೆ. ಅತ್ಯಂತ ಮಹತ್ವದ ವಿದ್ಯಮಾನವೊಂದರಲ್ಲಿ ‘ನ್ಯಾಟೋ ಸದಸ್ಯತ್ವಕ್ಕೆ ನಾವು ಪಟ್ಟು ಹಿಡಿಯುವುದಿಲ್ಲ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ಘೋಷಿಸಿದ್ದಾರೆ. ಅಲ್ಲದೆ, ‘ಉಕ್ರೇನ್‌ನಿಂದ ಸ್ವಾಯತ್ತೆ ಬಯಸುತ್ತಿರುವ 2 ರಷ್ಯಾ-ಪರ ಪ್ರದೇಶಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧನಿದ್ದೇನೆ’ ಎಂದಿದ್ಧಾರೆ. ರಷ್ಯಾದ 4 ಷರತ್ತುಗಳ ಪೈಕಿ 2 ಷರತ್ತಿಗೆ ಈಗ ಉಕ್ರೇನ್‌ ಒಪ್ಪಿಕೊಂಡಂತಾಗಿದೆ. 

Operation Ganga:ಸುಮಿಯಲ್ಲಿ ಸಿಲುಕಿದ್ದ ಎಲ್ಲಾ ವಿದ್ಯಾರ್ಥಿಗಳು ಸೇರಿ ಒಟ್ಟು 17,100 ಭಾರತೀಯರ ರಕ್ಷಣೆ!

ಉಕ್ರೇನ್‌ ಸರ್ಕಾರವು ರಷ್ಯಾ ವಿರುದ್ಧದ ಒಕ್ಕೂಟವಾದ 30 ಪಾಶ್ಚಾತ್ಯ ದೇಶಗಳ ‘ನ್ಯಾಟೋ’ ಸೇರ್ಪಡೆ ಆಗಲು ಮುಂದಾಗಿದ್ದೇ ಯುದ್ಧಕ್ಕೆ ಮೂಲ ಕಾರಣವಾಗಿತ್ತು. ಈ ಪಟ್ಟನ್ನು ಉಕ್ರೇನ್‌ ಸಡಿಲ ಮಾಡದ ಹೊರತು ನಾವು ಯುದ್ಧ ನಿಲ್ಲಸಲ್ಲ ಎಂದು ರಷ್ಯಾ ಷರತ್ತು ವಿಧಿಸಿತ್ತು.

Video Top Stories